ಬೆಂಗಳೂರು :ದೇಶದ ಸಾವಯವ ಮುಂಚೂಣಿಯ ಆಹಾರ ಬ್ರ್ಯಾಂಡ್24 ಮಂತ್ರ ಆರ್ಗ್ಯಾನಿಕ್ ಇಂದು ಪಾಸ್ತಾದಂತಹ ಇಟಾಲಿಯನ್ ಆಹಾರವನ್ನು ಸೇವಿಸುವರಿಗಾಗಿ ಸಾವಯವ ಪಾಸ್ತಾ, ಶಾವಿಗೆ ಉಪ್ಪಿಟ್ಟು, ಶಾವಿಗೆ ಪಾಯಸ ಸೇವಿಸುವರಿಗೆ ಸಾವಯವ ಗೋಧಿ ಶಾವಿಗೆ ಮತ್ತು ನಿಮ್ಮ ದಿನನಿತ್ಯದ ಸೇವನೆಗಾಗಿ ಆರೋಗ್ಯಕರ ಉತ್ತಮ ಪ್ರೋಟಿನ್ಗಳುಳ್ಳ ಸಾವಯವ ಪೀನಟ್ ಬಟರ್ ಸಾವಯವ ಆಹಾರೋತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇವುಗಳು ಸಂಪೂರ್ಣವಾಗಿ ಸಾವಯವ ಆಗಿದ್ದು, ರಾಸಾಯನಿಕ ಕೀಟನಾಶಕಗಳು ಮತ್ತು ರಸಗೊಬ್ಬರಗಳಿಂದ ಮುಕ್ತವಾದ, 24 ಮಂತ್ರದ ಹೊಸಶ್ರೇಣಿಯ ಉತ್ಪನ್ನಗಳಾಗಿವೆ, ಇವುಗಳು ಸಂಪೂರ್ಣ ಶುದ್ಧತೆ ಮತ್ತು ಸುರಕ್ಷತೆಯ ಭರವಸೆ ನೀಡುತ್ತವೆ. ಇದರಿಂದಾಗಿ ನಿಮ್ಮಊಟವನ್ನು ರುಚಿ, ಆರೋಗ್ಯ ಮತ್ತು ವೈವಿಧ್ಯತೆಯ ಸಂಯೋಜನೆಯಿಂದ ಪೂರೈಸಬಹುದು.
ಪ್ರಸ್ತುತ, ನಮ್ಮ ಜೀವನ ಸುರಕ್ಷಿತ, ಶುದ್ಧ ಮತ್ತು ಆರೋಗ್ಯಕರ ಆಹಾರದ ಮೇಲೆ ಗಮನ ಕೇಂದ್ರಿಕರಿಸುವ ಸಮಯವಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಾವಯವ ಪಾಸ್ತಾ, ಶಾವಿಗೆ ಮತ್ತು ಪೀನಟ್ ಬಟರ್ ಅಡುಗೆ ಮನೆಯ ಕಪಾಟುಗಳಲ್ಲಿ ಸಂಗ್ರಹಿಸಲು ಸರಿಯಾದ ಯೋಗ್ಯ ಉತ್ಪನ್ನವಾಗಿದೆ. 24 ಮಂತ್ರ ಆರ್ಗ್ಯಾನಿಕ್ನ ಪಾಸ್ತಾ ಎರಡು ರೂಪಾಂತರಗಳಲ್ಲಿ ಲಭ್ಯವಿದೆ – ಮ್ಯಾಕರೋನಿ ( ಕೊಳವೆಆಕಾರ ) ಮತ್ತುಫುಸಿಲ್ಲಿ( ಸುರಳಿಆಕಾರ) ಮತ್ತುವರ್ಮಿಸೆಲಿ/ ಶಾವಿಗೆಯಲ್ಲಿ ಹುರಿದ ಮತ್ತು ಸಾದಾ ರೂಪಾಂತರದಲ್ಲಿ ಲಭ್ಯವಿದೆ. ಎರಡೂ ಉತ್ಪನ್ನಗಳು 400 ಗ್ರಾಂಪ್ಯಾಕ್ಗಾತ್ರಗಳಲ್ಲಿ ಲಭ್ಯವಿದ್ದರೂ, ಶಾವಿಗೆ/ ವರ್ಮಿಸೆಲ್ಲಿಯಬೆಲೆ ₹ 60 ಮತ್ತುಪಾಸ್ತಾ ₹ 80 ಆಗಿದೆ. ಇವುಗಳು ಶುದ್ಧಸಾವಯವ ಗೋಧಿಯಿಂದ ಮಾಡಲಾದ 24 ಮಂತ್ರಆರ್ಗ್ಯಾನಿಕ್ ನಉತ್ಪನ್ನವಾಗಿದೆ. ಇದು ಹೆಚ್ಚಿನ ನಾರಿನಂಶ ಮತ್ತು ಪೋಷಕಾಂಶಗಳನ್ನು ಹೊಂದಿದ್ದು, ಇದು ಯಾವುದೇ ವಯಸ್ಸಿನ ಜನರಿಗೆ ಸೂಕ್ತವಾಗಿದೆ. ಈ ಉತ್ಪನ್ನಗಳಿಗೆ ಬಳಸಿದ ಎಲ್ಲಾ ಪದಾರ್ಥಗಳು ಅತ್ಯುತ್ತಮ ಗುಣಮಟ್ಟವನ್ನು ಒಳಗೊಂಡಿವೆ, ಅವುಗಳನ್ನು ಭಾರತದಾದ್ಯಂತ ಇರುವ 24 ಮಂತ್ರದ 60,000 ರೈತಾಪಿ ವರ್ಗಗಳ ಜಾಲದಿಂದ ಪಡೆಯಲಾಗಿದೆ.
ಮತ್ತೊಂದೆಡೆ, ಪೀನಟ್ ಬಟರ್ ಕೊಬ್ಬಿನ ಸಾಮಾನ್ಯ ಬೆಣ್ಣೆ ಮತ್ತು ಮಾರ್ಗರಿನ್ ಅಂಶಕ್ಕೆ ಹೋಲಿಸಿದರೆ ಕಡಿಮೆ ಕೊಬ್ಬನ್ನು ಹೊಂದಿರುತ್ತದೆ. ಪೀನಟ್ ಬಟರ್ ನ್ನು ಒಣ ಹುರಿದ ಕಡಲೆಕಾಯಿಯನ್ನು ಪುಡಿಮಾಡುವ ಮೂಲಕಕಡಲೆಕಾಯಿ /ಪೀನಟ್ ಬಟರ್ ತಯಾರಿಸಲಾಗುತ್ತದೆ, ಇದು ಕೊಬ್ಬಿನ ಉತ್ತಮ ಮೂಲ ಮತ್ತು ಉತ್ತಮ ಪ್ರಮಾಣದ ಪ್ರೋಟೀನ್ ಅನ್ನು ಒದಗಿಸುತ್ತದೆ. ಕಡಲೆಕಾಯಿಯ ಪ್ರೋಟೀನ್ ಅಗತ್ಯ ಅಮಿಲೈಸಿನ್, ಥ್ರೋನೈನ್ನಂತಹ ಆಮ್ಲಗಳನ್ನು ಹೊಂದಿರುತ್ತದೆ. 24 ಮಂತ್ರಆರ್ಗ್ಯಾನಿಕ್( ಸಾವಯವ) ಪೀನಟ್ಬಟರ್ಪೊಟ್ಯಾಸಿಯಮ್, ತಾಮ್ರ, ಮೆಗ್ನೀಸಿಯಮ್, ಮ್ಯಾಂಗನೀಸ್, ಸತು ಮತ್ತು ಸೆಲೆನಿಯಂನಂತಹ ಅನೇಕ ಉತ್ತಮ ಖನಿಜಗಳ ಮೂಲವಾಗಿದೆ ಮತ್ತು ವಿಟಮಿನ್ಬಿ ಮತ್ತು ವಿಟಮಿನ್ ಕಾಯಿಂದ ಕೂಡಿದೆ, ದೇಹದ ಆರೋಗ್ಯಕ್ಕೆ ಹೃದಯದ ಆರೋಗ್ಯಕ್ಕೆ ಮತ್ತು ಸ್ನಾಯುಗಳಿಗೆ ಅತ್ಯುತ್ತಮವಾಗಿದೆ. ಉತ್ಪನ್ನವು ಎರಡು ಪ್ಯಾಕ್ಗಾತ್ರಗಳಲ್ಲಿ ಲಭ್ಯವಿದ್ದು, – 450 ಗ್ರಾಂಗಳು ಮತ್ತು 800 ಗ್ರಾಂಗಳು ಕ್ರಮವಾಗಿ 225 ₹ ಮತ್ತು ₹ 400 ಬೆಲೆಯಾಗಿದೆ.
24 ಮಂತ್ರ ಆರ್ಗ್ಯಾನಿಕ್ನ ಇತರ ಎಲ್ಲಾ ಉತ್ಪನ್ನಗಳಂತೆ, ಹೊಸದಾಗಿ ಪ್ರಾರಂಭಿಸಲಾದ ಶ್ರೇಣಿಯು ದೇಶಾದ್ಯಂತ 10,000+ ಚಿಲ್ಲರೆ ಮಳಿಗೆಗಳಲ್ಲಿ ಮತ್ತು ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ತನ್ನ ವಿಶೇಷ ಅಂಗಡಿಗಳಲ್ಲಿ ಲಭ್ಯವಿದೆ. ಅಮೆಜಾನ್, ಫ್ಲಿಪ್ಕಾರ್ಟ್, ಬಿಗ್ಬಾಸ್ಕೆಟ್, ಜಿಯೋಮಾರ್ಟ್, ಗ್ರೋಫರ್ಸ್, ಮಿಲ್ಕ್ಬಾಸ್ಕೆಟ್, ಸ್ವಿಗ್ಗಿ, ಸುಪರ್ಡೈಲಿ ಮತ್ತು ಮೆಟ್ರೋ, ಸ್ಪೆನ್ಸರ್ಸ್, ಸ್ಟಾರ್ಬಜಾರ್, ವಾಲ್ಮಾರ್ಟ್ನಂತಹ ಹೈಪರ್ಮಾರ್ಟ್ಗಳಂತಹ ಎಲ್ಲಾ ಪ್ರಮುಖ ಇ-ಕಾಮರ್ಸ್ಸೈಟ್ಗಳಿಂದ ಅವುಗಳನ್ನು ಖರೀದಿಸಬಹುದು.
