Published On: Wed, May 12th, 2021

ಸೇವಾ ಭಾರತಿ” ಕೈಂಕರ್ಯ: ಮುಸ್ಲಿಂ ಮಹಿಳೆಯ ಪಾಲಿಗೆ ಆಪತ್ಬಾಂಧವರಾದ ಸ್ವಯಂಸೇವಕರು

ಬಂಟ್ವಾಳ: ಕೊರೋನಾ‌ ಸಂಕಟ ಕಾಲದಲ್ಲಿ‌ ಸಂಘ ಪರಿವಾರದ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಸಂಘದ ವಿವಿಧ ಕ್ಷೇತ್ರಗಳಲ್ಲೊಂದಾಗಿರುವ ಸೇವಾ ಭಾರತಿ ಸಾರಥ್ಯದಲ್ಲಿ ಸ್ವಂಯಂಸೇವಕರ ಗುಂಪುಗಳು ಸೋಂಕಿತರ ಪಾಲಿಗೆ ಆಪತ್ಬಾಂಧವರೆನಿಸಿದ್ದಾರೆ.

ಕೋವಿಡ್ ಸೋಂಕಿರ ರಕ್ಷಣೆಗಾಗಿ ಆರೆಸ್ಸೆಸ್‌ನ ಸೇವಾ ಭಾರತಿ ನೇತೃತ್ವದಲ್ಲಿ ಬಂಟ್ವಾಳದಲ್ಲೂ ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಈ ಕೇಂದ್ರಕ್ಕೆ ಮುಸ್ಲಿಂ ಕುಟುಂಬವೊಂದು ಕೊರೋನಾ ಆಪತ್ತಿನಲ್ಲಿ ಸಿಲುಕಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಸಂಕಷ್ಟದಲ್ಲಿದ್ದ ಕುಟುಂಬದ ವಿಳಾಸ ಬೇಧಿಸಿದ ಸೇವಾ ಭಾರತಿ‌ ಕಾರ್ಯಕರ್ತರು ಮಹಿಳೆಯೊಬ್ಬರನ್ನು ಆಪತ್ತಿನಿಂದ ಪಾರುಮಾಡಿದ್ದಾರೆ.

ಸೇವಾಭಾರತಿ ಕಳೆದ ಹಲವು ದಿನಗಳಿಂದ ಬಂಟ್ವಾಳ ತಾಲೂಕಿನಾಧ್ಯಂತ ಕೊರೋನ ವಿರುದ್ದ ಸೆಣೆಸಾಡುತ್ತಿದೆ. ಕಾರ್ಯಕರ್ತರು ಕೊರೋನ ರೋಗಿಗಳನ್ನು ರಕ್ಷಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಇಂದು ಸೇವಾಭಾರತಿಯ ನೆರವು ಯಾಚಿಸಿದ ಮುಸ್ಲಿಂ ಕುಟುಂಬದ ಕರೆಗೆ ಸೇವಾಭಾರತಿ ಸ್ಪಂದಿಸಿದೆ. ಕೋರೋನ ರೋಗಿ ಮುಸ್ಲೀಂ ಮಹಿಳೆಯನ್ನು ಈ ಕಾರ್ಯಕರ್ತರು ಸಕಾಲಕ್ಕೆ ಆಸ್ಪತ್ರೆಗೆ ಕರೆದೊಯ್ದೊದ್ದಾರೆ. ಅಷ್ಟೇ ಆಲ್ಲ, ಸಕಲ ಚಿಕಿತ್ಸೆಯ ವ್ಯವಸ್ಥೆ ಕಲ್ಲಿಸುವ ಮೂಲಕ‌ ಸ್ವಯಂ ಸೇವಕರು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಆರೆಸ್ಸೆಸ್ಸನ್ನು ಹಿಂದೂ ಸಂಘಟನೆ ಎಂದೂ ಮುಸ್ಲಿಂ-ಕ್ರಿಶ್ಚಿಯನ್ ವಿರೋಧಿ ಎಂಬ ಅಪಪ್ರಚಾರ ಸ್ವಾತಂತ್ರ್ಯ ಪೂರ್ವದಿಂದಲೂ ಕೇಳಿಬರುತ್ತಿವೆ. ಆದರೆ ತಾವು ಧಾರ್ಮಿಕ ಹಿಂದೂತ್ವವಾದದ ಸಿದ್ದಾಂತಕ್ಕಿಂತಲೂ ರಾಷ್ಟ್ರೀಯತೆಯ ಸಿದ್ದಾಂತದ ಮೂಲಕ ಸೇನಾನಿಗಳೆಂದು ಸಂಘದ ಕಾರ್ಯಕರ್ತರು ತೋರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತಿತ್ತು ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳದ ಈ ಸನ್ನಿವೇಶ.

Displaying 1 Comments
Have Your Say
  1. Kulal gopal says:

    ಸೇವಾ ಭಾರತಿ ಯವರ ಕಾರ್ಯ ಶ್ಲಾಘನೀಯ.
    ವಂದನೆಗಳು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter