ಗುರುಪುರ : ಗುರುಪುರ ಕಾರಮೊಗರುವಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಮಹಾಕಾಲಭೈರವ ದೇವಸ್ಥಾನದಲ್ಲಿ ಮಾರ್ಚ್ ೬ ಮತ್ತು ೭ರಂದು ನಡೆಯಲಿರುವ `ಕಲಶಾಭಿಷೇಕ’ ಹಾಗೂ ಶ್ರೀ ವೈದ್ಯನಾಥ, ಧೂಮವತಿ ಬಂಟ ಪರಿವಾರ ದೈವಗಳ `ಧರ್ಮ ನೇಮೋತ್ಸವ’ಕ್ಕೆ ಭಾನುವಾರ(ಫೆ. ೨೧) ಚಪ್ಪರ ಮುಹೂರ್ತ ನಡೆಯಿತು.
ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಪ್ರಧಾನ ಗಡಿಕಾರ ಪ್ರಮೋದ್ ಕುಮಾರ್ ರೈ ದೋಣಿಂಜೆಗುತ್ತು, ಕಾರ್ಯಾಧ್ಯಕ್ಷ ಪುರಂದರ ಮಲ್ಲಿ ದೋಣಿಂಜೆಗುತ್ತು, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ರವಿರಾಜ ಶೆಟ್ಟಿ, ಪೆರಾರ ಶ್ರೀ ಬಲವಾಂಡಿ ದೈವದ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ, ಮೂಳೂರು ಶ್ರೀ ವೈದ್ಯನಾಥ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು ಮತ್ತು ಚಾಕರಿ ವರ್ಗ, ಬೆಳ್ಳೂರುಗುತ್ತು ರವಿ ಶೆಟ್ಟಿ, ಜಿ ಕೆ ಕಿಟ್ಟಣ್ಣ ರೈ ಕಾರಮೊಗರುಗುತ್ತು, ಮನೋಜ್ ಭಂಡಾರಿ ಕಾರಮೊಗರುಗುತ್ತು, ಪ್ರೇಮನಾಥ ಮಾರ್ಲ ಕಾರಮೊಗರುಗುತ್ತು, ದೇವಿಪ್ರಸಾದ್ ಹೆಗ್ಡೆ ಕಾರಮೊಗರುಗುತ್ತು, ಪುರುಷೋತ್ತಮ ಮಲ್ಲಿ, ಜಗದೀಶ ಶೆಟ್ಟಿ ಹಾಗೂ ಕಾರಮೊಗರುಗುತ್ತು ಕುಟುಂಬಿಕರು, ಚಪ್ಪರ ಗುತ್ತಿಗೆದಾರ ಮಾಧವ ಮತ್ತಿತರರು ಪಾಲ್ಗೊಂಡಿದ್ದರು.

