ಕೈಕಂಬ: ಫೆ.೪ರಂದು ಗುರುವಾರ ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯ ಅಮೃತ ಮಹೋತ್ಸವದ ಅಂಗವಾಗಿ ರೋಸಾಮಿಸ್ತಿಕಾ ಕಾನ್ವೆಂಟಿನ ಪ್ರಾರ್ಥನಾ ಮಂದಿರದಲ್ಲಿ ಕೃತಜ್ಞತಾ ದಿವ್ಯ ಬಲಿಪೂಜೆಯು ನೆರವೇರಿತು.ಈ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಮೊನ್ಸಿಂಜೊರ್ ವಂ.ಫಾ.ಮಾಕ್ಸಿಮ್ ನೊರೊನ್ಹಾರ ಆಶೀರ್ವಚನದೊಂದಿಗೆ ನಡೆಯಿತು.
ಸಹಾಯಕ ಗುರುಗಳಾಗಿ ಸ್ನೇಹಸದನದ ನಿರ್ದೇಶಕರಾದ ವಂ.ಫಾ.ತೇಜಿಇವರ ಸಹಭಾಗಿತ್ವದಲ್ಲಿ ನೆರವೇರಿತು.ಮೊನ್ಸಿಂಜೊರ್ ವಂ.ಫಾ.ಮಾಕ್ಸಿಮ್ ನೊರೊನ್ಹಾರವರುತಮ್ಮ ಪ್ರವಚನದಲ್ಲಿ ಮಕ್ಕಳ ಭವಿಷ್ಯವನ್ನುರೂಪಿಸುವಲ್ಲಿ ಶಿಕ್ಷಕರ ಪಾತ್ರಎಂಬುದರ ಬಗ್ಗೆ ಹಿತನುಡಿಗಳನ್ನಾಡಿದರು.ಈ ದಿವ್ಯ ಬಲಿ ಪೂಜೆಗೆ ಬೆಥನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ವಂ.ಭಗಿನಿ ಮಾರಿಯೆಟ್ ಬಿಎಸ್, ಬೆಥನಿ ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿ ವಂ.ಭಗಿನಿ ಸಿಸಿಲ್ಯಾ ಮೆಂಡೊನ್ಸಾ ಬಿಎಸ್, ಬೆಥನಿ ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ವಂ.ಭಗಿನಿ ಶುಭ ಬಿಎಸ್, ರೋಸಾಮಿಸ್ತಿಕಾ ಕನ್ಯಾ ಮಠದಎಲ್ಲ ಭಗಿನಿಯರು, ಎಲ್ಲಾ ಸಮೂಹ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ, ಸಂಸ್ಥೆಯ ಪ್ರಸ್ತುತ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಮತ್ತು ಪ್ರಶಿP್ಪ್ಷಣಾರ್ಥಿಗಳು ಬಲಿಪ್ರಜೆಯಲ್ಲಿ ಭಾಗವಹಿಸಿ ಕೃತಜ್ಞತೆಗಳನ್ನು ಅರ್ಪಿಸಿದರು.
೧೯೪೫ರಲ್ಲಿ ಅತೀ ವಂ.ಫಾ.ರೈಮಂಡ್ ಕಾಮಿಲಸ್ ಮಸ್ಕರೇನ್ಹಸ್‌ರವರಿಂದ ಸ್ಥಾಪಿಸಲ್ಪಟ್ಟರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯು ಬಡವರ, ದೀನ ದಲಿತರ ಗ್ರಾಮೀಣ ಹೆಣ್ಣುಮಕ್ಕಳ ಉದ್ಧಾರಕ್ಕಾಗಿ ಸ್ಥಾಪಿಸಲ್ಪಟ್ಟಿದ್ದುಇದುವರೆಗೆ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಬೇತಿ ಹೊಂದಿ ಪ್ರಪಂಚದಾದ್ಯಂತ ಶಿಕ್ಷಕಿ ವೃತ್ತಿ ಮೂಲಕ ಸಂಸ್ಥಾಪಕರ ಕನಸನ್ನು ನನಸಾಗಿಸುವ ಜೊತೆಗೆ ಲಕ್ಷಾಂತರ ಮಕ್ಕಳ ಜ್ಞಾನದೀವಿಗೆ ಬೆಳಗುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಸ್ಥೆಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದ ಸಭಾಕಾರ್ಯಕ್ರಮವು ಫೆ.೫ರಂದು ಶುಕ್ರವಾರ ೧೦ಘಂಟೆಗೆ ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯಲ್ಲಿ ನೆರವೇರಲಿದೆ. ಬೆಥನಿ ವಿದ್ಯಾಸಂಸ್ಥೆಯ ಮಾಹಾ ಮಾತೆಯವರಾದ ವಂ. ಭಗಿನಿ ರೋಸ್ ಸೆಲಿನ್‌ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು.
