ಕುಪ್ಪೆಪದವು: ಸರಕಾರಿ ಪ್ರೌಢಶಾಲೆ ಕಲ್ಲಾಡಿ ಕುಪ್ಪೆಪದವು ಇಲ್ಲಿ ಕಳೆದ 20 ವರ್ಷಗಳಿಂದ ಶಿಕ್ಷಕಿಯಾಗಿ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪದೋನ್ನತಿ ಪಡೆದು ಸಿದ್ದಕಟ್ಟೆ ಶಾಲೆಗೆ ವರ್ಗಾವಣೆಗೊಂಡಿರುವ ಶ್ರೀಮತಿ ಲೋನಾ ಲೋಬೊ ಅವರನ್ನು ಬೀಳ್ಕೊಡುವ ಕಾರ್ಯಕ್ರಮ ಶನಿವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.20210131_140357

ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುರೇಖಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಲೋನಾ ಲೋಬೊ 20 ವರ್ಷಗಳ ಕಾಲ ಶಾಲೆಗೆ ಸಲ್ಲಿಸಿದ ಸೇವೆಯ ಬಗ್ಗೆ ಸ್ಥಳೀಯ ಹಿರಿಯರಾದ ರುಕ್ಮಯ ನಾಯ್ಕ್, ಶಿಕ್ಷಕರುಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಮಾತನಾಡಿ  ಅಭಿನಂದಿಸಿದರು.
ಲೋನಾ ಲೋಬೊ ಅವರಿಗೆ ಪುಷ್ಪ ಗುಚ್ಛ, ಫಲಪುಷ್ಪ, ನೀಡಿ ಹೊಸ ಕೈಗಡಿಯಾರ ತೊಡಿಸಿ, ವಿದ್ಯಾರ್ಥಿಗಳು  ಕೇಕ್ ಕತ್ತರಿಸಿ ತಿನ್ನಿಸುವ  ಮೂಲಕ ಅವಿಸ್ಮರಣೀಯವಾಗಿ ಬೀಳ್ಕೊಡಲಾಯಿತು.ಹಿರಿಯ ಶಿಕ್ಷಕಿ ಅಸುಂತಾ ಡಿ’ಸೋಜಾ, ಶಿಕರುಗಳಾದ ಡಾ. ಪ್ರಸಾದ್ ಕೆ. ಎನ್, ಶ್ರೀಮತಿ ಮೀನಾಕ್ಷಿ,
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಯಾದವ ಕೋಟ್ಯಾನ್  ಕಲ್ಲಾಡಿ, ಸದಸ್ಯರುಗಳು , ಗ್ರಾಮ ಪಂಚಾಯತ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಿಕ್ಷಕಿ ಸೌಮ್ಯ ನಾಗೇಶ್ ನಾಯಕ್ ಸ್ವಾಗತಿಸಿದರು ಶಿಕ್ಷಕಿ ವೀಣಾ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *