ತ್ರಿಶಾ ಸ್ಟುಡಿಯೋ ಮಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ದುಷ್ಕರ್ಮಿಗಳಿಂದ ತಲವಾರು ದಾಳಿ
ಬಂಟ್ವಾಳ: ಫರಂಗಿಪೇಟೆಯ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ತ್ರಿ
ಶಾ ಸ್ಟುಡಿಯೋ ಮಾಲಕ, ಬಿಜೆಪಿ ಪುದು ಶಕ್ತಿ ಕೇಂದ್ರದ ಸಾಮಾಜಿಕ ಜಾಲ ತಾಣದ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಅವರಿಗೆ ದುಷ್ಕರ್ಮಿಗಳು ತಲವಾರು ದಾಳಿ ನಡೆಸಿದ್ದಾರೆ.
ರಾತ್ರಿ ಸುಮಾರು 7.50 ರ ಸುಮಾರಿಗೆ ಕಟ್ಟಡದ ಮೊದಲ ಮಹಡಿಯಲ್ಲಿರುವ ಅವರ ಸ್ಟುಡಿಯೋಗೆ ನುಗ್ಗಿ ಮಾರಾಕಾಯುಧಗಳಿಂದ ದಾಳಿ ಪರಾರಿಯಾಗಿದ್ದಾರೆ. ಕಟ್ಟಡದ ಮೊದಲ ಮಹಡಿಯಲ್ಲಿ ರಾತ್ರಿ ವೇಳೆ ಅವರ ಸ್ಟುಡಿಯೋ ಮಾತ್ರ ತೆರೆದಿದ್ದು ಈ ಸಂದರ್ಭದಲ್ಲಿ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. . ಘಟನೆಯಿಂದ ಅವರ ತಲೆ , ಹೊಟ್ಟೆ ಮತ್ತಿತರ ಭಾಗಗಳಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.
ದಿನೇಶ್ ಕೊಟ್ಟಿಂಜ ಅವರು ಪೊಟೋ ಗ್ರಾಫರ್ ಆಗಿರುವುದರ ಜೊತೆಗೆ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದುಕೊಂಡು ವಿವಿಧ ಜವಬ್ದಾರಿಗಳನ್ನು ನಿಭಾಯಿಸಿದ್ದರು. ದಿನಪತ್ರಿಕೆಯೊಂದಕ್ಕೆ ಫರಂಗಿಪೇಟಯ ವರದಿಗಾರರೂ ಆಗಿದ್ದರು. ಸಾಮಾಜಿಕ, ಧಾರ್ಮಿಕ ಚಟುವಟಿಕೆಯಲ್ಲೂ ಸಕ್ರಿಯರಾಗಿದ್ದರು. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು ಪತ್ತೆಗಾಗಿ ಬಲೆ ಬೀಸಿದ್ದಾರೆ. ಒಂದು ವಾರದ ಅವಧಿಯಲ್ಲಿ ತಾಲೂಕಿನಲ್ಲಿ ನಡೆದ ಮೂರನೆ ತಲವಾರು ದಾಳಿ ಇದಾಗಿದೆ.