ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪಿಯು ಕಾಲೇಜು ಪ್ರಸಕ್ತ ವರ್ಷದನೀಟ್ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಕಾಲೇಜಿನ ವಿದ್ಯಾರ್ಥಿ ಶ್ರೇಯಸ್ ಜಿ.ಆರ್ 660 ಅಂಕ ಪಡೆದಿದ್ದು, ಜನರಲ್ ಕೆಟಗರಿಯಲ್ಲಿ ರಾಷ್ಟ್ರಮಟ್ಟದಲ್ಲಿ 174ನೇ ರ್ಯಾಂಕನ್ನು ಗಳಿಸಿದ್ದಾರೆ ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಹನಾ ವಿ.ಪಿ (653), ಧೀರಜ್ ಹೆಗ್ಡೆ (645), ವೈಷ್ಣವಿ ಎಮ್ (638), ಅನಿಶ್ ಆರ್.ಕೆ (631), ಗಿರಿಧರ್ (627), ಚೇತನ್ ಕೆ.ಸಿ (625) ಹೆಚ್ಚು ಅಂಕ ಪಡೆದಿದ್ದಾರೆ. 35 ಮಂದಿ ವಿದ್ಯಾರ್ಥಿಗಳು 500ಕ್ಕಿಂತಲೂ ಹೆಚ್ಚಿನ ಅಂಕವನ್ನು ಪಡೆದು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. ತರಬೇತಿ ಪಡೆದ ಒಟ್ಟು 119 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆದಿದ್ದಾರೆ.
ವೀರೇಶ್ ಎಸ್. ಪಾಟಿಲ್ (595), ಸ್ವಾತಿ ಚಂದ್ರಶೇಕರ್ ನಾೈಕ್ (594), ಲಿಯೋನೆಲ ಲೋಬೋ (593), ಶ್ರುತಿ ಹೆಚ್ ಆರ್ (587), ತುಶಾರ್ ಅಶೋಕ್ ಭಟ್ (584), ಝಹೀರ ಮೊಹಮ್ಮದ್ ಇಕ್ಬಾಲ್(581), ಝಫೀರ ಮೊಹಮ್ಮದ್ ಇಕ್ಬಾಲ್ (581), ರಕ್ಷನ್ ಪಾಟಿಲ್ ಯನ್ ಜಿ (577), ಸಹನಾ ಎಂ (576), ದನುಷ್ ಎಸ್.ಎಚ್ (576), ಶುಶ್ರುತಾ ಡಿ (574), ಹರ್ಷಿತ್ ಜೆ.ಎಂ ( 573), ಲಿಖಿತ್ ಆರ್ (558), ದರ್ಶನ್ ವಿ ಆರ್ (557), ಸುಖಿರಾಣಿ (555), ವಿವೇಕ್ ಎ.ಬಿ (552), ಸಹನಾÀ ಶ್ರೀಶೈಲ ಪಾಟೀಲ್ (551), ರಾಕೇಶ್ ಜಿ.ಬಿ (551), ಪೂಜ ಬಿ.ಸುಟಗತ್ತಿ (540), ಸಿಕ್ಶಿತ್ ಎಸ್ (539), ಕೇದಾರ್ ದೇಸಾಯಿ (539), ಅಕ್ಷಯ್ ಪ್ರಭಾಕರ್ ಭಾಗವತ್ (538), ಜಹಾನ ಫಿರ್ದೋಸ್ (532), ಮದನ್ ವೈ.ಎನ್ (532), ಸಿಂಚನಾ ಎನ್ (530), ಸಂಕೇತ್ ಜೆ.ನಾೈಕ್ (522), ವಿಘ್ನೇಶ್ ಎಚ್.ಎಂ (515) ಮತ್ತು ಪವನ್ ಕುಮಾರ್ ಎಸ್.ವಿ (515) ಅಂಕಗಳನ್ನು ಪಡೆದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ನೀಟ್ ಸಂಯೋಜಕ ಡಾ ಪ್ರಶಾಂತ್ ಹೆಗ್ಡೆ, ಸಂಸ್ಥೆಯ ಆಡಳಿತಾಧಿಕಾರಿ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *