ಓಣಂ ಫೋಟೋಶೂಟ್ ನಲ್ಲಿ ಮಿನುಗಿದ ತುಳುನಾಡ ಐಸಿರಿ
ಇತ್ತೀಚಿಗೆ ಕೇರಳದ ನಾಡ ಹಬ್ಬ ಓಣಂ ಕೊರೋನಾ ವಿಷಮ ಪರಿಸ್ಥಿತಿಯ ನಡುವೆಯೂ ಸಾಂಪ್ರದಾಯಿಕವಾಗಿ ಸರಳವಾಗಿ ನಡೆದಿದೆ. ಈ ಸಲದ ಓಣಂ ಹಬ್ಬ ಸಪ್ಪೆಯಾಗಿ ನಡೆದರೂ ಇಲ್ಲೊಬ್ಬ ನಟಿಯ ಓಣಂ ವಿಶೇಷ ಫೋಟೋಶೂಟ್ ಮತ್ತು ವಿಡಿಯೋ ಸಂದೇಶ ಕರಾವಳಿಯಲ್ಲಿ ಭಾರೀ ವೈರಲ್ ಆಗಿದೆ.
ಇವರು ಬೇರೆ ಯಾರೂ ಅಲ್ಲ ರಂಗಭೂಮಿ ಕಲಾವಿದೆ, ಕೋಸ್ಟಲ್ ವುಡ್ ನಟಿ ರೂಪಶ್ರೀ ವರ್ಕಾಡಿ.ರೂಪಶ್ರೀ ವರ್ಕಾಡಿ ಮುಖ್ಯ ಭೂಮಿಕೆಯಲ್ಲಿ ಕೇರಳದ ಸಾಂಪ್ರದಾಯಿಕ ಉಡುಗೆ ತೊಡುಗೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ವಿಡಿಯೋ ಸಂದೇಶವು ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇರಳ ಶೈಲಿಯ ವಸ್ತ್ರಕ್ಕೆ ರೂಪಶ್ರೀಯವರು ನೀಡಿದ ವಿಶಿಷ್ಟ ರೀತಿಯ ಫೋಸ್ ಗಳನ್ನು ಛಾಯಾಗ್ರಾಹಕರಾದ ಬಾತು ಕುಲಾಲ್ ಮತ್ತು ಧನು ಅವರು ವಿಭಿನ್ನ ರೀತಿಯಲ್ಲಿ ಸೆರೆಹಿಡಿದಿದ್ದಾರೆ.
ಈ ಒಂದು ವಿಡಿಯೋ ಸಂದೇಶವನ್ನು ಛಾಯಾಗ್ರಾಹಕರೇ ಸಂಕಲನಗೈದಿದ್ದು ಯುವ ಸಾಹಿತಿ ರಾಜೇಶ್ ಮುಗುಳಿ ಧ್ವನಿಯನ್ನು ನೀಡಿದ್ದಾರೆ.ಹಾಗೂ ಈ ವಿಡಿಯೋ ಸಂದೇಶದಲ್ಲಿ ರೂಪಶ್ರೀಯವರೊಂದಿಗೆ ಯೋಗೀಶ್ ಅಡಕಳಕಟ್ಟೆ,ಧನರಾಜ್ ವರ್ಕಾಡಿ ಸಹಕಲಾವಿದರಾಗಿ ಅಭಿನಯಿಸಿದ್ದಾರೆ. ಕೇರಳದ ಸಂಪ್ರದಾಯವನ್ನು ಬಿಂಬಿಸುವ ಈ ವಿಡಿಯೋ ಸಂದೇಶವನ್ನು ಸಹಸ್ರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿ ರೂಪಶ್ರೀ ಹಾಗು ಅವರ ತಂಡಕ್ಕೆ ಶುಭಹಾರೈಸಿದ್ದಾರೆ.
ಓಣಂ ಫೋಟೋ ಶೂಟ್ ನಲ್ಲಿ ಮಿಂಚಿದ ರೂಪಶ್ರೀ ವರ್ಕಾಡಿ ಸಾವಿರಕ್ಕೂ ಹೆಚ್ಚು ವೇದಿಕೆಯಲ್ಲಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವರು ತುಳು,ಕನ್ನಡ,ಮಳಿಯಾಳಿ ಭಾಷೆಯ 30ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಖ್ಯಾತ ಕಲಾವಿದೆ. ಇತ್ತೀಚಿಗೆ ಕೋಸ್ಟಲ್ ವುಡ್ ನಲ್ಲಿ ಅತಿಯಾದ ಕುತೂಹಲವನ್ನು ಹುಟ್ಟಿಸಿರುವ ಯುವ ನಿರ್ದೇಶಕ ಶ್ರೀಶ ಎಳ್ಳಾರೆ ನಿರ್ದೇಶನದ ಶಕಲಕ ಬೂ0 ಬೂ0 ಚಿತ್ರದಲ್ಲೂ ಇವರು ನಟಿಸಿದ್ದಾರೆ.
ಇವರ ಓಣಂ ಫೋಟೋ ಶೂಟ್ ಹಾಗೂ ವಿಡಿಯೋ ಸಂದೇಶದಿಂದ ಅಭಿಮಾನಿಗಳು ಫುಲ್ ಖುಷಿಗೊಂಡಿದ್ದು ಅವರ ಮುಂದಿನ ಚಿತ್ರಗಳಿಗಾಗಿ ಕಾಯುತ್ತಿದ್ದಾರೆ.
ಬಡತನದ ಬೇಗೆಯಲಿ ಬೆಳೆದು ತನ್ನ ಪರಿಶ್ರಮದ ಮೂಲಕ ರಂಗಭೂಮಿಯಲ್ಲಿ ಹೆಸರನ್ನು ಗಳಿಸಿ ಈಗ ಚಲನಚಿತ್ರಗಳಲ್ಲಿ ಮಿಂಚುತ್ತಿರುವ ರೂಪಶ್ರೀ ವರ್ಕಾಡಿಯವರ ಮುಂದಿನ ಸಿನಿಪಯಣ ಯಶಸ್ವಿಯಾಗಲಿ ಎನ್ನುವುದು ನಮ್ಮ ಆಶಯ.
✍️ ದೀಪಕ್ ಕಾಮತ್ ಎಳ್ಳಾರೆ
It’s great Rupashri, all the best to you.