ಗುರುಪುರ : ಪಂಚಾಯತ್ ಕಾರ್ಯದರ್ಶಿ ನಿತ್ಯಾನಂದ ಕೆ ವಾರ್ಷಿಕ ಕಾಮಗಾರಿಗಳ ಲೆಕ್ಕಪತ್ರ-ವರದಿ ವಾಚಿಸಿದರು. 201819ನೇ ಸಾಲಿನಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಒಂದು ಕೋಟಿ ರೂ ಮಂಜೂರಾತಿಯಾಗಿದ್ದು, ಕ್ರಿಯಾ ಯೋಜನೆ ಸಿದ್ಧಗೊಂಡಿದೆ. ಆದರೆ, ಒಟ್ಟು ಮೊತ್ತದಲ್ಲಿ ಈವರೆಗೆ 36 ಲಕ್ಷ ರೂ ಬಿಡುಗಡೆಯಾಗಿದ್ದು, 33 ಲಕ್ಷ ರೂ ಕಾಮಗಾರಿ ಮುಗಿದಿದೆ ಮತ್ತು ಮೂರು ಲಕ್ಷ ರೂ ಕಾಮಗಾರಿ ಪ್ರಗತಿಯಲ್ಲಿದೆ. ಮಂಜೂರಾತಿ ಮೊತ್ತದಲ್ಲಿ 64 ಲಕ್ಷ ರೂ ಇನ್ನೂ ಬಿಡುಗಡೆಯಾಗಿಲ್ಲ ಎಂದರು. ವರ್ಷದ ವರದಿ ಬಗ್ಗೆ ಗ್ರಾಮಸ್ಥರು ಅಥವಾ ಸದಸ್ಯರಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ.

gur-sep-25-gurpur jamabandi

14ನೇ ಹಣಕಾಸು ಯೋಜನೆಯಡಿ 46 ಲಕ್ಷ ರೂ ಬಿಡುಗಡೆಯಾಗಿದ್ದು, ಶೇ 80ರಷ್ಟು ಕಾಮಗಾರಿ ಮುಗಿದ್ದರೆ, ಉಳಿದ ಕಾಮಗಾರಿ ಪ್ರಗತಿಯಲ್ಲಿದೆ. ಬಸವ ವಸತಿ ಯೋಜನೆಯಡಿ 104 ಮನೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಹಂತವಾರು ಕಾಮಗಾರಿ ಮುಂದುವರಿದಿದೆ ಎಂದು ಸದಸ್ಯರು ಹಾಗೂ ಗ್ರಾಮಸ್ಥರ ಗಮನಹರಿಸಿದರು.

gur-sep-25-jamabandi(abubakar speaking) (1)

ಪಿಡಿಒ ಅಬೂಬಕ್ಕರ್ ಬಂದ ಬಳಿಕ ಗ್ರಾಪಂ ಅಭಿವೃದ್ಧಿ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ನಡೆಯುತ್ತಿವೆ. ಅವರು ಗ್ರಾಮದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಪಿಡಿಒ ಅಬೂಬಕ್ಕರ್ ಸ್ವಾಗತಿಸಿ, ವಂದಿಸಿದರು.ಜಿಂಪಂ ಲೆಕ್ಕಾಧಿಕಾರಿ ಪ್ರೀತಿ ಮಗ್ಗಾವಿ ನೋಡೆಲ್ ಅಧಿಕಾರಿಯಾಗಿ ಜಮಾಬಂದಿ ನಡೆಸಿಕೊಟ್ಟರು. ವೇದಿಕೆಯಲ್ಲಿ ಜಿಪಂ ಅಭಿವೃದ್ಧಿ ಶಾಖೆ ಅಧೀಕ್ಷಕಿ ಸರೋಜಿನಿ, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ ಎಂ ಉದಯ ಭಟ್, ಹಾಗೂ ಸದಸ್ಯರಾದ ಸದಾಶಿವ ಶೆಟ್ಟಿ, ಸೇಸಮ್ಮ, ರಾಜೇಶ ಸುವರ್ಣ, ಸಂಪಾ, ಹನೀಫ್, ಗ್ಲಾಡಿಸ್ ಕ್ವಾಡ್ರಸ್, ಉಮೈ ಬಾನು, ಟಿ. ಅಹ್ಮದ್ ಬಾವ, ಚಂದ್ರಾವತಿ, ಭೀಪಾತುಮ್ಮ, ಪಂಚಾಯತ್ ಸಿಬ್ಬಂದಿ ಚಂದ್ರಕಲಾ, ಇರ್ಶಾದ್, ತಿಮ್ಮಪ್ಪ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *