ಬಂಟ್ವಾಳ :  ಇಲ್ಲಿನ   ಎಸ್‌ .ವಿ.ಎಸ್ ದೇವಳ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಾಲಾ ಮಕ್ಕಳ ಆರಂಭೋತ್ಸವ ಬುಧವಾರ ನಡೆಯಿತು. ಬೆಳಗ್ಗೆ ಮಕ್ಕಳ ಪ್ರಾರ್ಥನೆಯ ಬಳಿಕ ೧ರಿಂದ ೫ನೇ ತರಗತಿ ವರೆಗಿನ ಪ್ರತೀ ಮಕ್ಕಳಿಗೆ ಬೆಲೂನುಗಳನ್ನು ನೀಡಿ ಅದರಲ್ಲಿ ಅವರ ಹೆಸರನ್ನು ಬರೆದು ಬೆಲೂನಿನ ಆಟದೊಂದಿಗೆ ವಿವಿಧ ರೀತಿಯ ಆಟಗಳನ್ನು ಆಡಿಸುವ ಮೂಲಕ ಆರಂಭಗೊಂಡಿತು.  ಸುಮಾರು ಒಂದು ಗಂಟೆಗಳ ಕಾಲ ಆಟವಾಡಿದ ಮಕ್ಕಳು ತಮ್ಮ ರಜಾದಿನಗಳ ಮಜಾವನ್ನು ಶಾಲಾ ತರಗತಿಯಲ್ಲಿ ಮರುಕಳಿಸದಂತೆ ಶಾಲಾ ದೈನಂದಿನ ಪಾಠಗಳ ಬಗ್ಗೆ ತಿಳುವಳಿಕೆಯನ್ನು ನೀಡಲಾಯಿತು.

29YA svs kannada (1)ಬಂಟ್ವಾಳ ಶಿಕ್ಷಣ ಇಲಾಖೆಯ ಸಿಆರ್‌ಪಿ ರೇಶ್ಮಾ ಮತ್ತು ಬಿಐಈಆರ್‌ಟಿ ಶೋಭಾ ಈ ಸಂದರ್ಭ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಚಂದ್ರಮ್ಮ ಹಾಗೂ ಇತರೇ ಶಿಕ್ಷಕಿಯರಾದ ಮಾಲತಿ, ಜಯಶ್ರೀ, ಪೂರ್ಣಿಮಾ ಈ ಸಂದರ್ಭ ಮಕ್ಕಳ ಆಟೋಟದಲ್ಲಿ ಸಹಕರಿಸಿದ್ದರು.

By suddi9

Leave a Reply

Your email address will not be published. Required fields are marked *