ಗಂಜಿಮಠ: ದೋಷಪೂರಿತ ಇವಿಎಂ ಯಂತ್ರಗಳಿಂದಾಗಿ ಹಲವು ಮತಗಟ್ಟೆಗಳಲ್ಲಿ ಮತದಾನ ವಿಳಂಬಗೊಂಡ ಘಟನೆ ನಡೆದಿದೆ. ಕೊನೆಗೆ ಚುನಾವಣಾಧಿಕಾರಿಗಳು ದೋಷಪೂರಿತ ಮತಯಂತ್ರಗಳನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಒಟ್ಟಾರೆ ಈ ಭಾಗಗಳಲ್ಲಿ ಶಾಂತಿಯುತ-ಬಿರುಸಿನ ಮತದಾನ ನಡೆದಿದೆ. ಸುರಲ್ಪಾಡಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಮತದಾನದ ವೇಳೆ ಸುಮಾರು ಮಧ್ಯಾಹ್ನ ವಿವಿಪ್ಯಾಟ್‍ನಲ್ಲಿ ದೋಷ ಕಾಣಿಸಿತು. ಮತದಾನ ನಡೆಸಿದ ಬಳಿಕ ವಿವಿಪ್ಯಾಟ್‍ನಲ್ಲಿ ಎರರ್   ಕಾಣಿಸಿಕೊಳ್ಳುತ್ತಿರುವುದನ್ನು ಮತದಾರರು ಅಧಿಕಾರಿಗಳಲ್ಲಿ ತಿಳಿಸಿದ ಕಾರಣ ವಿವಿಪ್ಯಾಟ್‍ನಲ್ಲಿ ದೋಷ ಪತ್ತೆಯಾಯಿತು. ಈ ವೇಳೆ ಚುನಾವಣೆಯನ್ನು ಸ್ಥಗಿತಗೊಳಿಸಿದ ಅಧಿಕಾರಿಗಳು ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಆಗಮಿಸಿದ ಸೆಕ್ಟರ್ ಅಧಿಕಾರಿಗಳು ವಿವಿಪ್ಯಾಟ್ ಸರಿಪಡಿಸಿ ಮತ್ತೆ ಮತದಾನ ಮುಂದುವರಿಯಿತು. ಇದರಿಂದ ಸುಮಾರು ಅರ್ಧಗಂಟೆ ಮತದಾನ ಪ್ರಕ್ರಿಯೆಯಲ್ಲಿ ವ್ಯತ್ಯಯ ಉಂಟಾಗಿತ್ತು. ವಾಮಂಜೂರು, ಗುರುಪುರ, ಮರವೂರು ಮುಂತಾದ ಕಡೆಗಳಲ್ಲಿ ಮತಯಂತ್ರಗಳಲ್ಲಿ ದೋಷ ಕಾಣಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

IMG-20190417-WA0108 (1)

ಕುಪ್ಪೆಪದವಿನ ಕಿಲೆಂಜಾರು ಸರಕಾರಿ ಶಾಲೆಯಲ್ಲಿ ಪ್ರಾರಂಭವಾಗುವಾಗಲೇ ಮತಯಂತ್ರ ಕೈಕೊಟ್ಟ ಕಾರಣ ಬೇರೆ ಮತಯಂತ್ರದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಅಧಿಕಾರಿಗಳು ಬೆಳಿಗ್ಗೆ ಅಣುಕು ಮತದಾನ ನಡೆಸಿದಾಗ ಸರಿಯಿದ್ದ ಮತಯಂತ್ರ, ಮತದಾರರೊಬ್ಬರು ಮತಚಲಾಯಿಸಿದಾಗ ದೋಷ ಕಂಡುಬಂದಿತು. ಈ ಈ ಬಗ್ಗೆ ಸೆಕ್ಟರ್ ಆಫೀಸರ್‍ಗೆ ಮಾಹಿತಿ ನೀಡಲಾಯಿತು. ಸೆಕ್ಟರ್ ಅಧಿಕಾರಿಗಳು ಪರಿಶೀಲನೆ ನಡೆಸಿ ದೋಷಪೂರಿತ ಮತಯಂತ್ರವನ್ನು ವಾಪಸ್ ಪಡೆದು ಇನ್ನೊಂದು ಮತಯಂತ್ರದಲ್ಲಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಇದರಿಂದ ಸುಮಾರು ಅರ್ಧಗಂಟೆ ಮತದಾನ ವಿಳಂಬವಾಗಿ ಪ್ರಾರಂಭವಾಯಿತು. ಈ ಬಳಿಕ ಯಾವುದೇ ತೊಂದರೆ ಕಾಣಿಸಲಿಲ್ಲ. ಇದೇ ರೀತಿ ಮೊಗರು-ಕುಕ್ಕಟ್ಟೆ ಶಾಲೆಯಲ್ಲಿ ನಡೆದ ಮತದಾನದ ವೇಳೆ ಮತಯಂತ್ರದಲ್ಲಿ ದೋಷ ಕಂಡುಬಂದಿದ್ದು, ಚುನಾವಣಾಧಿಕಾರಿಗಳು ಮತಯಂತ್ರವನ್ನು ಸರಿಪಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಇದರಿಂದ ಸುಮಾರು ಇಪ್ಪತ್ತು ನಿಮಿಷದಷ್ಟು ಮತದಾನ ಸ್ಥಗಿತಗೊಂಡಿತು. ಆದರೆ ಸಂಜೆಯವರೆಗೆ ಯಾವುದೇ ಸಮಸ್ಯೆಕಾಣಿಸದೆ ಸಲೀಸಾಗಿ ಮತದಾನ ನಡೆಯಿತು. ಉಳಿದಂತೆ ಗಂಜಿಮಠ, ಎಡಪದವು ಮುಂತಾದ ಕಡೆಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಮತದಾನ ನಡೆದಿದೆ. . ಸೂಕ್ಮ ಮತಗಟ್ಟೆ ಎನಿಸಿದ ಅಡ್ಡೂರು ಶಾಲೆಯಲ್ಲಿ ಈ ಬಾರಿ ಶಾಂತಿಯುತ ಮತದಾನ ನಡೆದಿದ್ದು, ನಿರಾತಂಕ ಮತದಾನ ನಡೆದಿದೆ.

By suddi9

Leave a Reply

Your email address will not be published. Required fields are marked *