ಅಡ್ಯಾರು : ಅಡ್ಯಾರುಗುತ್ತು ಕುಟುಂಬಿಕರು ನಂಬಿಕೊಂಡು ಬಂದಿರುವ ಶ್ರೀ ಕೋರ್ದಬ್ಬು ತನ್ನಿಮಾನಿಗ ಮತ್ತು ಪರಿವಾರ ದೈವಗಳ `ಕೋಲ ಸೇವೆ’ ಎ. 19ರಿಂದ ಎ.21ರವರೆಗೆ ಜರುಗಲಿದೆ.ಎ. 19ರಂದು ಸಂಜೆ 5ಕ್ಕೆ ಭಂಡಾರ ಏರಲಿದೆ. ಸಂಜೆ 7ಕ್ಕೆ ಗುಳಿಗ ದೈವದ ಕೋಲ, 10ಕ್ಕೆ ಕೋರ್ದಬ್ಬು, ತನ್ನಿಮಾನಿಗ ದೈವದ ಕೋಲ ನಡೆಯಲಿದೆ. ಎ. 20ಕ್ಕೆ ಮಧ್ಯಾಹ್ನ 11:30ಕ್ಕೆ ರಾಹು-ಗುಳಿಗ ಕೋಲ, ರಾತ್ರಿ 8:30ಕ್ಕೆ ಪಂಜುರ್ಲಿ-ಬಂಟ ದೈವಗಳ ಕೋಲ, ರಾತ್ರಿ 2ಕ್ಕೆ ಸುಬ್ಬಿಯಮ್ಮ-ಸುಬ್ಬಿಗುಳಿಗ ದೈವದ ಕೋಲ ಹಾಗೂ ಎ. 21ರಂದು ಮಧ್ಯಾಹ್ನ 11ಕ್ಕೆ ಧರ್ಮದೇವತೆ ದೈವ, 11ಕ್ಕೆ ಸಂಕೋಳಿಗ ಗುಳಿಗ ದೈವದ ಕೋಲ ನಡೆಯಲಿದೆ. ಸಂಜೆ 4ಕ್ಕೆ ಭಂಡಾರ ಇಳಿಯಲಿದೆ ಎಂದು ಅಡ್ಯಾರುಗುತ್ತು ವಿಠಲ ಶೆಟ್ಟಿಯವರ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *