ಪೊಳಲಿ : ಮಾ. 3ರಿಂದ ಮಾ. 13ರವರೆಗೆ ನಡೆದ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಅದ್ದೂರಿ, ಸಂಭ್ರಮ-ಸಡಗರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಶ್ರಮಿಸಿದ `ಪುರಲ್ದಪ್ಪೆನ’ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ, ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.
ಬ್ರಹ್ಮಕಲಶೋತ್ಸವಕ್ಕಿಂತ ಮುಂಚೆ ಶ್ರಮದಾನ ಹಾಗೂ ಮಾ. 3-13ರವರೆಗೆ ಕ್ಷೇತ್ರದ ಬ್ರಹ್ಮಕಲಶೋತ್ಸವ ಯಶಸ್ವಿಗಾಗಿ ಎಲ್ಲ ದಿನಗಳಲ್ಲಿ ಹಗಲಿರುವ ದುಡಿದ ಎಲ್ಲ ಸಂಘ-ಸಂಸ್ಥೆಗಳ ಸ್ವಯಂಸೇವಕರು, ಹಿರಿಕಿರಿಯ ದಾನಿಗಳು, ಆರೋಗ್ಯ, ಅಗ್ನಿಶಾಮಕ, ಮೆಸ್ಕಾಂ, ನೀರು ಪೂರೈಕೆ, ಸಾಗಾಟ ವಾಹನಗಳು, ಉಚಿತ ಬಸ್ಸಿನ ಸೇವೆ, ವಿದ್ಯಾರ್ಥಿ ತಂಡಗಳು, ಸಾಂಸ್ಕøತಿಕ ಕಾರ್ಯಕ್ರಮ ಪ್ರಾಯೋಜಿಸಿದ ತಂಡಗಳು, ಜಾಹೀರಾತು ಮೂಲಕ ಪ್ರಚಾರ ವಿಸ್ತರಿಸಿದವರು, ಮಹಿಳಾ ಸ್ವಯಂಸೇವಕರು, ಅಲಂಕಾರ, ವಾದ್ಯನಾದ ಬಳಗದವರು, ಅನ್ನದಾಸೋಹ ತಂಡದವರು, ಪ್ರಸಾರ ಮಾಧ್ಯಮ ಹೀಗೆ ಅನೇಕರು, ಬುಹುವಿಧದಲ್ಲಿ ತಮ್ಮಿಂದಾದ ಸೇವೆ ಸಲ್ಲಿಸಿದ್ದಾರೆ.

