ಬಂಟ್ವಾಳ :ದೊಡ್ಡ ಮತ್ತು ಸಣ್ಣ ಟೆಂಪೋ ಚಾಲಕ ಮತ್ತು ಮಾಲಕರ ಸಂಘದ ಮಹಾಸಭೆಯು ಬಿ.ಸಿ.ರೋಡ್ ನ ರಕ್ತೇಶ್ವರಿ ಸಭಂಗಣದಲ್ಲಿ ಸಂಘದ ಅಧ್ಯಕ್ಷರಾದ ನ್ಯಾಯವಾದಿ ರಮಾನಾಥ ಕಾರಂದೂರು ಇವರ ಅಧ್ಯಕ್ಷತೆಯಲ್ಲಿ ಜರಗಿತು.

vehicle-mahasabhe
ಕಾರ್ಯದರ್ಶಿ ಇಗ್ನೇಷಿಯಸ್ ತೌರೊ ಗತವರ್ಷದ ಲೆಕ್ಕಪತ್ರ ಮಂಡಿಸಿದರು. ಇತ್ತೀಚೆಗೆ ಮೃತ ಹೊಂದಿರುವ ಸಂಘದ ಸದಸ್ಯರಾದ ಅಬ್ಬಾಸ್ ಮತ್ತು ರಾಮಪ್ಪ ರವರ ಕುಟುಂಬಕ್ಕೆ ಸಂಘದ ಕ್ಷೇಮ ನಿಧಿಯಿಂದ ಚೆಕ್ಕನ್ನು ವಿತರಿಸಲಾಯಿತು. ಸಂಘದ ಸದಸ್ಯರಾದ ಜನಾರ್ಧನ್ ಪೂಜಾರಿ, ಚಿದಾನಂದ ಮತ್ತು ಎಸ್.ಕೆ.ಮಹಮ್ಮದ್ ಬಾವ ರವರಿಗುಂಟಾದ ಅನಾರೋಗ್ಯದ ಬಗ್ಗೆ ಕ್ಷೇಮನಿಧಿಯಿಂದ ಚೆಕ್ಕನ್ನು ವಿತರಿಸಲಾಯಿತು. 2018-19ನೇ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಚುನಾಯಿಸಲಾಯಿತು. ಸಂಘದ ಅಧ್ಯಕ್ಷರಾಗಿ ನ್ಯಾಯವಾದಿ ರಮಾನಾಥ ಕಾರಂದೂರು , ಉಪಾಧ್ಯಕ್ಷರಾಗಿ ನಾರಾಯಣ ಕುಲಾಲ್ ಹೊಸ್ಮಾರು, ಕಾರ್ಯದರ್ಶಿಯಾಗಿ ಹರೀಶ್, ಜತೆಕಾರ್ಯದರ್ಶಿಯಾಗಿ ಯೋಗೀಶ್, ಮತ್ತು ಕೋಶಾಧಿಕಾರಿಯಾಗಿ ಅಬ್ದುಲ್ ಲತೀ ಫ್ ರವರನ್ನು ಆರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹಿರಿಯ ಸದಸ್ಯರಾದ ಎಂ.ಕೆ.ಖಾದರ್ ಫರಂಗಿಪೇಟೆ , ಲೋಕೇಶ್ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಹರೀಶ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *