ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾವೊಂದು ಉರುಳಿ ಬಿದ್ದು ಆರು ಮಂದಿ ಗಾಯಗೊಂಡ ಘಟನೆ ವಿಟ್ಲದ ಸಾಲೆತ್ತೂರಿನಲ್ಲಿ ಶನಿವಾರ ನಡೆದಿದೆ.

ವಿಟ್ಲದ ಸಾಲೆತ್ತೂರು ರಸ್ತೆಯ ನೆತ್ರಕೆರೆಯಾಗಿ ಬರುತ್ತಿದ್ದ ಆಟೋ ಆಯ ತಪ್ಪಿ ಉರುಳಿದೆ. ಈ ಘಟನೆಯಲ್ಲಿ ಕಡಂಬು ನಿವಾಸಿಗಳಾದ ರಾಫಿಯಾ (20),ರಶೀದಾ(23), ಮೋನಪ್ಪ(50), ಗೋಪಾಲಕೃಷ್ಣ(65), ಕೃಷ್ಣಪ್ಪ(65), ಹಾಗೂ ದೇರಣ್ಣ ಗೌಡ(63) ಗಾಯಗೊಂಡವರು. ರಾಫಿಯಾ ಹಾಗೂ ರಶೀದಾ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃಷ್ಣಪ್ಪ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೆ, ಇನ್ನೂ ಉಳಿದವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲು ಮಾಡಲಾಗಿದೆ.
