17-may-20

ಮಂಗಳೂರು: ಮೂಲತಃ ಕೊಲ್ಯ ನಿವಾಸಿ ದಿನೇಶ್‌ ಆನಂದ್‌ ಉಚ್ಚಿಲ ಅವರು ಮರಾಠಿ ಸಿನೆಮಾದ ಸೌಂಡ್‌ ಡಿಸೈನ್‌ ಆ್ಯಂಡ್‌ ಮಿಕ್ಸಿಂಗ್‌ನ ಸಾಧನೆಗಾಗಿ ‘ಬೆಸ್ಟ್‌ ಸೌಂಡ್‌ ಡಿಸೈನರ್‌’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಸಹಿತ ಹಲವು ಗಣ್ಯರು ಭಾಗವಹಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆದಿದೆ.

ಮರಾಠಿಯ ‘ಪಲ್ಯೂಡ್‌ವಾಸಿ’ ಎಂಬ ಸಿನೆಮಾದ ಸೌಂಡ್‌ ಕೆಲಸಕ್ಕಾಗಿ ಈ ಪ್ರಶಸ್ತಿ ಇತ್ತೀಚೆಗೆ ದೊರೆತಿದೆ. ದಿನೇಶ್‌ ಅವರು ಈ ಹಿಂದೆ ವಿಕ್ರಂ ಭಟ್‌ ನಿರ್ದೇಶನದ ‘1921’ ಹಿಂದಿ ಸಿನೆಮಾ ಸಹಿತ ಹಲವು ಸಿನೆಮಾದಲ್ಲಿ ಸೌಂಡ್‌ ಡಿಸೈನ್‌ ಕೆಲಸ ಮಾಡಿದ್ದಾರೆ. ‘ಕಾರ್ತಿಕ್‌’ ಎಂಬ ಕನ್ನಡ ಸಿನೆಮಾದಲ್ಲೂ ಅವರು ಕೆಲಸ ಮಾಡಿದ್ದಾರೆ. ಮುಂಬಯಿಯಲ್ಲಿ ಎರಡು ಸ್ಟುಡಿಯೋ ನಡೆಸುತ್ತಿರುವ ದಿನೇಶ್‌ ಮುಂದೆ ಹಿಂದಿಯಲ್ಲಿ ’22 ಯಾರ್ಡ್‌’, ‘ದರ್ಬಾನ್‌’ ಹಾಗೂ ಮರಾಠಿಯಲ್ಲಿ ‘ಬೋನಸ್‌’ ಎಂಬ ಸಿನೆಮಾದಲ್ಲೂ ಕೆಲಸ ಮಾಡಲಿದ್ದಾರೆ.

 

By Suddi9

Leave a Reply

Your email address will not be published. Required fields are marked *