ಬೆಳ್ಳೂರು: ಬಂಡಾರಮನೆಯ ಕುಟುಂಬಸ್ಥರ ನಾಗಬನದಲ್ಲಿ ಎ. 1ರಂದು ಭಾನುವಾರ ಬ್ರಹ್ಮಶ್ರೀ ಉದಯಪಾಂಗಣ್ಣಾಯ ಇವರ ನೇತೃತ್ವದಲ್ಲಿ
“ನಾಗದೇವರ ಪ್ರತಿಷ್ಠೆ ,ಕಲಾಶಾಭಿಷೇಕ,ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ಕಲಶಾಭಿಷೇಕ” ನಡೆಯಲಿದೆ.
*ಮಾ.31 ರಂದು ಶನಿವಾರ ಶಾಯಂಕಾಲ 5.ರಿಂದ ನಾಗದೇವರ ಆರೂಢ ಪರಿಗ್ರಹ, ದೇವತಾ ಪ್ರಾರ್ಥನೆ,ವಾಸ್ತು ಪೂಜೆ,ವಾಸ್ತು ಹೋಮ,ದಿಕ್ಪಾಲಬಲಿ,ನಾಗದೇವರ ಬಿಂಬಾಧಿವಾಸ ಮತ್ತು ದೈವಗಳ ಕಟ್ಟೆಯಲ್ಲಿ ವಾಸ್ತು ಪೂಜೆ,ಸುದರ್ಶನ ಹೋಮ ಹಾಗೂ ದೈವಗಳ ಪ್ರತಿಷ್ಠೆ.

* ಎ.1 ರಂದು ಭಾನುವಾರ ಬೆಳಗ್ಗೆ 7.30ರಿಂದ ಪ್ರತಿಷ್ಠಾ ಹೋಮ, ಪ್ರಧಾನ ಹೋಮ, ಕಲಶಾಭಿಷೇಕ. ಬೆಳಗ್ಗೆ 11.12 ಕ್ಕೆ ನಾಗದೇವರ ಪ್ರತಿಷ್ಠೆ, ಕಲಶಾಭಿಷೇಕ, ಆಶ್ಲೇಷ ಬಲಿ, ಪ್ರಸನ್ನ ಪೂಜೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಬಂಡಾರಮನೆಯ ಸೀತಾರಾಮ ಶೆಟ್ಟಿ ಹಾಗೂ ಚಂದ್ರಶೇಖರ ಅಜಿಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *