ಬಂಟ್ವಾಳ : ಕಾವಲಪಡೂರು ಗ್ರಾಮದ ಮದ್ವಗುತ್ತಿನಲ್ಲಿ ಫೆ. 18 ಮತ್ತು 19ರಂದು ಕೊಡಮಣಿತ್ತಾಯಿ, ಪಿಲಿಚಾಮುಂಡಿ, ಕಲ್ಲುರ್ಟಿ, ಪಂಜುರ್ಲಿ, ರಕ್ತೇಶ್ವರಿ ಮಂತ್ರದೇವತೆ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೋತ್ಸವ ಕಾಡಬೆಟ್ಟು ನಾರಾಯಣ ಶಿಬರಾಯ ಪೌರೋಹಿತ್ಯದಲ್ಲಿ ಜರುಗಿತು.gur-feb-26-rashmi bantwal

ಧಾರ್ಮಿಕ ಸಭೆಯಲ್ಲಿ ಶ್ರೀ ಈಶ ವಿಠದಾಸ ಸ್ವಾಮಿ, ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು ಆಶೀರ್ವಚನ ನೀಡುತ್ತ, ಶಿಸ್ತಿನಿಂದ ಕೂಡಿದ ಜೀವನ ಸಾರ್ಥಕತೆಗೆ ದಾರಿ ಮಾಡಿ ಕೊಡುತ್ತದೆ. ಹೊಂದಾಣಿಕೆಯೊಂದಿಗೆ ಸಂಸಾರ ಸಾಗಿಸುವುದು ಮುಖ್ಯ ಎಂದರು.

ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಶೇಖರ್ ಶೆಟ್ಟಿ ಕಡಂದಲೆ, ಅಣ್ಣು ಶೆಟ್ಟಿ, ಬಿ ಎಂ ಶೆಟ್ಟಿ ಮಾಲಾಡಿ, ದಾಮೋದರ ರೈ, ವಿಠಲ ರೈ ಮದ್ವಗುತ್ತು ಇದ್ದರು. ಗಣ್ಯರಿಗೆ ಸ್ವಾಮಿಯವರು ಸ್ಮರಣಿಕೆ ನೀಡಿ ಗೌರವಿಸಿದರು. ಶೈಲೇಶ್ ರೈ ಮದ್ವಗುತ್ತ ಸ್ವಾಗತಿಸಿದರು. ಕಾಡಬೆಟ್ಟು ಪ್ರಮೋದ್ ರೈ ವಂದಿಸಿದರು. ರಶ್ಮಿ ರೈ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *