74

ದಿಲ್ಲಿ: ಜ. 31ರಂದು ಸಂಭವಿಸಲಿರುವ ಸಂಪೂರ್ಣ ಚಂದ್ರಗ್ರಹಣ ಭಾರತವೂ ಸೇರಿ ಜಗತ್ತಿನ ಎಲ್ಲೆಡೆಯೂ ಕುತೂಹಲ ಕೆರಳಿಸಿದೆ. ಸುಮಾರು 36 ವರ್ಷಗಳ ನಂತರ ಮೊದಲ ಬಾರಿ ಭಾರತದಲ್ಲಿ ಸಂಪೂರ್ಣ ಚಂದ್ರಗ್ರಹಣವಾಗಿ ಕಾಣಿಸಲಿದ್ದು, ಸರಿಯಾಗಿ  150 ವರ್ಷಗಳ ನಂತರ ಅದೇ ಮಾದರಿಯ  ಚಂದ್ರಗ್ರಹಣ  ಸಂಭವಿಸುತ್ತಿದೆ.  ಆಕಾಶದ ಈ ಅಚ್ಚರಿ ನೋಡಲು ವಿಜ್ಞಾನಿಗಳು ಕಾತುರರಾಗಿದ್ದಾರೆ.

ಜ. 31ರಂದು ಸಂಜೆ 5.18ರ ಹೊತ್ತಿಗೆ ಚಂದ್ರಗ್ರಹಣ ಪ್ರಾರಂಭವಾಗಲಿದೆ.  7.31ಕ್ಕೆ ಚಂದ್ರ ಕೆಂಪಾಗಿ ಕಾಣುತ್ತದೆ. ಸುಮಾರು ರಾತ್ರಿ 9.38ರ ಹೊತ್ತಿಗೆ ಸಂಪೂರ್ಣ ಗ್ರಹಣ ಕೊನೆಗೊಳ್ಳಲಿದ್ದು,  ಚಂದ್ರ ತಾಮ್ರ ಬಣ್ಣಕ್ಕೆ  ತಿರುಗುತ್ತದೆ.

ಅಂದು  ಸಂಪೂರ್ಣ ಚಂದ್ರ ಗ್ರಹಣ ಮೂರು ಹಂತಗಳಲ್ಲಿ ಗೋಚರವಾಗಲಿದೆ.  ಚಂದ್ರ ನೀಲಿ ಚಂದ್ರ, ದೈತ್ಯ ಚಂದ್ರ ಮತ್ತು ತಾಮ್ರ ಚಂದ್ರ (ಸಂಪೂರ್ಣ ಚಂದ್ರ ಗ್ರಹಣ)ನಾಗಿ ಗೋಚರವಾಗುತ್ತದೆ.  ಇಂಥದೊಂದು ಚಂದ್ರಗ್ರಹಣ   1866ರ ಮಾರ್ಚ್ 31 ರಂದು ಸಂಭವಿಸಿತ್ತು. ಸರಿಯಾಗಿ  150 ವರ್ಷಗಳ ನಂತರ ಚಂದ್ರಗ್ರಹಣ  ಸಂಭವಿಸುತ್ತಿದೆ.  ಇಂಥದೇ ಮತ್ತೊಂದು ಚಂದ್ರಗ್ರಹಣ 2037ಕ್ಕೆ ಸಂಭವಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಈ ಸಂಪೂರ್ಣ ಚಂದ್ರಗ್ರಹಣ ಭಾರತವಷ್ಟೇ ಅಲ್ಲ, ಪಶ್ಚಿಮ ಅಮೆರಿಕ, ಕೆನಡಾದಲ್ಲೂ ಕಾಣಲಿದೆ.  ಆದರೆ ಅಮೆರಿಕದ ಪೂರ್ವ ಕರಾವಳಿ ಭಾಗ, ಯೂರೋಪ್, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದ ಕೆಲ ರಾಷ್ಟ್ರಗಳಲ್ಲಿ ಗ್ರಹಣ ಕಾಣುವುದಿಲ್ಲ   ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಮಂಗಳವಾರ ರಾತ್ರಿ ಹೊತ್ತಿಗೆ ಚಂದ್ರ ಭೂಮಿಯ ಹತ್ತಿರದಲ್ಲಿ ಕಾಣಲಿದ್ದು,  ಚಂದ್ರನಿಗೂ ಭೂಮಿಗೂ ಕೇವಲ 3, 59,000 ಕಿ.ಮೀ ಅಂತರ ವಿರುತ್ತದೆ.  ಸಂಪೂರ್ಣ ಚಂದ್ರಗ್ರಹಣ ಪ್ರಕ್ರಿಯೆ ಒಂದು ಗಂಟೆಗೂ ಅಧಿಕ ಸಮಯ ನಡೆಯಲಿದೆ. , ಚಂದ್ರಗ್ರಹಣದ ಸಂಪೂರ್ಣ ಪ್ರಕ್ರಿಯೆಯನ್ನು ನಾಸಾ ತನ್ನ ವಿಶಿಷ್ಟ ಟೆಲಿಸ್ಕೋಪ್ ಗಳ ಮೂಲಕ ನೇರ ಪ್ರಸಾರ ಮಾಡಲಿದೆ.

 

By suddi9

Leave a Reply

Your email address will not be published. Required fields are marked *