ಬಂಟ್ವಾಳ:ಪಾಣೆಮಂಗಳೂರಿನ ಶ್ರೀಅನಂತನಾಥ ಸ್ವಾಮೀ ಜಿನ ಚೈತ್ಯಾಲಯದಲ್ಲಿ ಚಾತುರ್ಮಾಸ ವ್ರತದಲ್ಲಿರುವ 108 ಮುನಿ ಶ್ರೀ ವೀರ ಸಾಗರ ಮಹಾರಾಜರ ಮಂಗಲ ವರ್ಷಾಯೋಗ ನಿಮಿತ್ತ, ಜು.೨೩ ರಂದು ಮೂಡುಬಿದಿರೆ ವೀರೇಂದ್ರ ಕುಮಾರ್ ದಂಪತಿ ಮತ್ತು ಸರ್ವ ಮಂಗಳ ಮಹಿಳಾ ಸಂಘ, ಮೂಡುಬಿದಿರೆ ಇವರ ಪ್ರಾಯೋಜಕತ್ವದಲ್ಲಿ ಪೂರ್ವಾಹ್ನ 9.30 ರಿಂದ “ಶ್ರೀ ಋಷಿ ಮಂಡಲ ಆರಾಧನೆ” ನಡೆಯಲಿದೆ. ಈ ಸಾಮೂಹಿಕ ಆರಾಧನೆಗೆ ಕುಳಿತುಕೊಳ್ಳುವ ಶ್ರಾವಕರು ಚಾತುರ್ಮಾಸ ಸಮಿತಿಯನ್ನು ಸಂಪರ್ಕಿಸಿ ನೋಂದಾಯಿಸುವಂತೆ ಕೋರಲಾಗಿದೆ
ಅಪರಾಹ್ನ 3.00 ರಿಂದ ಧಾರ್ಮಿಕ ಸಭೆಯಲ್ಲಿ 108 ಮುನಿ ಶ್ರೀ ವೀರ ಸಾಗರ ಮಹಾರಾಜರು ಗಣಧರ ಪೀಠದಿಂದ ಮಂಗಲ ಪ್ರವಚನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ಶಾಸಕರಾದ ಕೆ. ಅಭಯಚಂದ್ರ ಜೈನ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಶ್ರಾವಕ ಬಂಧುಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಚಾತುರ್ಮಾಸ ಸಮಿತಿಯ ಪ್ರಕಟಣೆಯಲ್ಲಿ ಕೋರಿದೆ
