ಬಂಟ್ವಾಳ: ಕೇರಳಕ್ಕೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಸಾಲೆತ್ತೂರು ಎಂಬಲ್ಲಿ ಬಂಟ್ವಾಳ ವಲಯಾರಣ್ಯಾಧಿಕಾರಿಯವರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ ಘಟನೆ ಗುರುವಾರ ನಡೆದಿದೆ. ಕೊಳ್ನಾಡು ಗ್ರಾಮದ ಸಾಲೆತ್ತೂರು ಎಂಬಲ್ಲಿ ಆರೋಪಿ ಬಾರೆಬೆಟ್ಟು ಮಹಮ್ಮದ್ ಮುಸ್ತಾಫ ಅವರ ಪಿಕಫ್ ವಾಹನದಲ್ಲಿ ಅಕ್ರಮ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಸಂದರ್ಭ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದಾಗ ಆರೋಪಿ ಪರಾರಿಯಾಗಿದ್ದು ಸುಮಾರು 4 ಲಕ್ಷ ಮೌಲ್ಯದ ವಾಹನ ಮತ್ತು ಮರದ ದಿಮ್ಮಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.1 (1)

ಕಾರ್ಯಚರಣೆ ವೇಳೆ ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ. ಸುರೇಶ್, ಉಪ ವಲಯಾರಣ್ಯಾಧಿಕಾರಿ ಪ್ರೀತಂ ಎಸ್, ಹಾಗೂ ಅರಣ್ಯ ರಕ್ಷಕರಾದ ವಿನಯ ಕುಮಾರ್, ಜಿತೇಶ್ ಪಿ, ದೇಜಪ್ಪ, ಚಿದಾನಂದ ,ಭಾಸ್ಕರ ಹಾಗೂ ಜಯರಾಮ್ ಹಾಜರಿದ್ದರು. ಉಪಅರಣ್ಯಾಧಿಕಾರಿ ಕೆ.ಟಿ.ಹನುಮಂತಪ್ಪ ಅವರ ನಿರ್ದೇಶನದಂತೆ ಸಹಾಯಕ ಅರಣ್ಯಾಧಿಕಾರಿ ಸತೀಶ್ ಬಾಬಾ ಅವರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *