ಆಕೆ ಬಡಕುಟುಂಬದಿಂದ ಬಂದ ಹೆಣ್ಣು ಮಗಳು ಕುರಿಕಾಯುವಿಕೆಯನ್ನೇಜೀವನಾಧಾರವನ್ನಾಗಿ ಮಾಡಿಕೊಂಡಿದ್ದಕುಟುಂಬದಲ್ಲಿ ಹುಟ್ಟಿ ಶ್ರೀಮಂತಿಕೆಯೆಂದರೇನೆಂಬುದನ್ನೇ ಅರಿಯದೆಇಂದುರಾಷ್ಟ್ರವೊಂದರಎರಡನೇಅತ್ಯುನ್ನತ ಸಚಿವೆಯ ಸ್ಥಾನವನ್ನು ಅಲಂಕರಿಸಿರುವ ನಜತ್ ಎಂಬ ಮಹಿಳೆಯ ಮಹಾನ್ ಸಾಹಸಗಾಥೆ.“ಬದುಕಲ್ಲಿ ಬಡವನಾಗಿ ಹುಟ್ಟುವುದುತಪ್ಪಲ್ಲ,ಆದರೆ ಬಡವನಾಗಿ ಸಾಯುವುದುತಪ್ಪು” ಎಂಬ ಮಾತನ್ನುಅಕ್ಷರಶಃ ನಿಜವಾಗಿಸಿದ ಧೀರ ಹೆಣ್ಣು ಮಗಳುಈಕೆ.4 ಅಕ್ಟೋಬರ್1977ರಲ್ಲಿ ಉತ್ತರಆಫ್ರಿಕಾದ ಮೊರಕ್ಕೂದ ಬಿನಿ ಚೇಕರ್ ಎಂಬ ಹಳ್ಳಿಯ ಬಡಕುರಿಗಾಹಿ ಕುಟುಂಬದಲ್ಲಿ ಜನಿಸಿ ಇಂದು ಪ್ರಪಂಚದ ಸೂಪರ್ ಪವರ್ ದೇಶಗಳಲ್ಲಿ ಒಂದಾದಫ್ರಾನ್ಸ್‍ದೇಶದಎರಡನೇಯಅತ್ಯುನ್ನತಹುದ್ದೆಯಾದ ಶಿಕ್ಷಣ ಸಚಿವೆಯಾಗಿಕರ್ತವ್ಯ ನಿರ್ವಹಿಸುತ್ತಿರುವ ನಜತ್ ವಲ್ಲೌಡ್ ಬೆಕ್ಸೆಮ್ ಎಂಬ ಮಹಿಳೆಯೇ ಈ ಸಾಧಕಿ.
ಇಂದು 38 ವರ್ಷ ವಯಸ್ಸಿನ ಫ್ರಾನ್ಸ್‍ದೇಶದಅತ್ಯಂತ ಕ್ರಿಯಾಶೀಲ ಮತ್ತುಯುವರಾಜಕಾರಣಿಯಾಗಿ ಗುರುತಿಸಿಕೊಂಡಿರುವ ನಜತ್‍ಳದ್ದು 25 ವರ್ಷಗಳ ಹಿಂದಿನ ಬದುಕುಅತ್ಯಂತ ಶೋಚನೀಯವಾಗಿತ್ತು.ತೀರಾಬಡಮುಸ್ಲಿಂ ಕುರಿಗಾಹಿಕುಟುಂಬದಲ್ಲಿಜನಿಸಿ ಒಪ್ಪೊತ್ತಿನಊಟಕ್ಕೂ ಕಷ್ಟ ಪಡುತ್ತಿದ್ದಕುಟುಂಬದಲ್ಲಿನಜತ್‍ಳಜನನ. ಮನೆಯಒಟ್ಟು ಏಳು ಮಂದಿ ಮಕ್ಕಳಲ್ಲಿ ನಜತ್ ಎರಡನೆಯವಳಾಗಿದ್ದು, ಕುಟುಂಬವು ತನ್ನ ಸಂಸಾರ ನಿರ್ವಹಣೆಗಾಗಿತಾತನ ಕಾಲದಿಂದಲೂ ಮೊರಕ್ಕೂದ ಶ್ರೀಮಂತ ಕುಟುಂಬವೊಂದರ ಫಾರಂ ಹೌಸ್‍ನಲ್ಲಿದ್ದುಕೊಂಡುಕುರಿಕಾಯುವ ಕೆಲಸವನ್ನುಮಾಡಿಕೊಂಡು ಬಂದಿತ್ತು. ಈಕೆಯ ಬಾಲ್ಯದ ಹೆಚ್ಚಿನಅವಧಿಯನ್ನುಉತ್ತರ ಮೊರಕ್ಕೋದರಿಫಿ ಪರ್ವತ ಪ್ರದೇಶಗಳಲ್ಲೇ ಕುರಿಕಾಯುತ್ತ ಕಳೆದು ಹೋಗುತ್ತದೆ.ಕುಟುಂಬದ ನಿರ್ವಹಣೆತೀರಾದುಸ್ಥರವಾಗತೊಡಗಿದಾಗನಜತ್‍ಳಿಗೆ ಎಂಟು ವರ್ಷದಅವಧಿಯಲ್ಲಿಈಕೆಯತಂದೆಮೊರಕ್ಕೋತೊರೆದುಫ್ರಾನ್ಸ್ ಪ್ರಸಿದ್ದ ಕಾರುತಯಾರಿಕಾ ಸಂಸ್ಥೆಯಾದರೆನಾಲ್ಟ್ ಸಂಸ್ಥೆಯಲ್ಲಿ ಕೂಲಿ ಕೆಲಸಕ್ಕಾಗಿ ಫ್ರಾನ್ಸ್‍ಗೆವಲಸೆ ಹೋಗುತ್ತಾರೆ.ನಂತರದಲ್ಲಿತಾಯಿ ಹಾಗೂ ಮುಂದಕ್ಕೆತನ್ನಕುಟುಂಬದೊಂದಿಗೆ ನಜತ್‍ಳೂ ಫ್ರಾನ್ಸ್‍ನ ನಿರಾಶ್ರಿತರ ಶಿಬಿರಕ್ಕೆ ಸೇರಿಕೊಳ್ಳುತ್ತಾರೆ.
ಬಡತನದ ವಿವಿಧ ಮಗ್ಗುಲುಗಳನ್ನಷ್ಟೇ ಕಂಡಿದ್ದ ನಜತ್‍ಳಿಗೆ ಫ್ರಾನ್ಸ್‍ನಐಷಾರಾಮಿಬದುಕುಕಣ್ಣಿಗೆಕಂಡಿದ್ದುಇದೇ ಫ್ರಾನ್ಸ್‍ನಲ್ಲಿ.ಇಲ್ಲಿನವಿಶಿಷ್ಟವಾದ ರಸ್ತೆಗಳು ಮತ್ತು ವಿಭಿನ್ನ ಸಾರಿಗೆ ವ್ಯವಸ್ಥೆಗಳು, ಕಾರ್‍ಗಳು ಮತ್ತು ಬಹುಮಹಡಿ ಕಟ್ಟಡಗಳನ್ನು ನೋಡಿದಾಗಎದೆಯಲ್ಲಿ ನಡುಕ ಹುಟ್ಟುವಷ್ಟು ಈಕೆ ಮುಗ್ದೆಯಾಗಿದ್ದಳು.ಫ್ರಾನ್ಸ್ ಪ್ರಮುಖ ಭಾಷೆಯಾದ ಫ್ರೆಂಚ್‍ನಗಂಧ ಗಾಳಿಯೇ ಗೊತ್ತಿಲ್ಲದ ಈಕೆ ಸ್ಥಳೀಯ ಶಾಲೆಗೆ ಸೇರಿ ಕೇವಲ ಒಂದೇ ವರ್ಷದಲ್ಲಿ ಫ್ರೆಂಚ್ ಭಾಷೆಯಲ್ಲಿ ಸಂಪೂರ್ಣಹಿಡಿತವನ್ನು ಸಾಧಿಸುತ್ತಾಳೆ.ಮುಸ್ಲಿಂ ಕುಟುಂಬವಾದ್ದರಿಂದಈಕೆಯನ್ನುತನ್ನ 18 ನೇಯ ವಯಸ್ಸಿನವರೆಗೂ ಯಾವಹುಡುಗರಗೆಳೆತನವನ್ನೂ ಮಾಡಿಕೊಳ್ಳದಷ್ಟು ಕಟ್ಟುನಿಟ್ಟಾಗಿಹೆತ್ತವರು ಬೆಳೆಸಿದ್ದು ನಿತ್ಯಕನಿಷ್ಠ 7-8 ಗಂಟೆಯಅಧ್ಯಯನಕಡ್ಡಾಯವಾಗಿತ್ತು.ಅದಾಗಲೇ ಈಕೆಗೆ ಫ್ರಾನ್ಸ್‍ದೇಶದ ಪೌರತ್ವವೂ ಲಭಿಸಿ ಕಾನೂನು ಪದವಿಯನ್ನು ಪಡೆಯುತ್ತಾಳೆ.ಓದಿನಲ್ಲಿಅತ್ಯಂತಮುಂದಿದ್ದ ಈಕೆ ಆಡಳಿತಾತ್ಮಕ ಸೇವೆಯಲ್ಲಿ ಪದವಿಯನ್ನುಪಡೆಯುವಅಭಿಲಾಷೆಯಿಂದ ವಿದ್ಯಾಭ್ಯಾಸಕ್ಕೆ ಪ್ರಯತ್ನಿಸುತ್ತಾಳೆ.ಆದರೆಈ ವಿದ್ಯಾಭ್ಯಾಸ ಫ್ರಾನ್ಸ್‍ದೇಶದಲ್ಲಿಅತ್ಯಂತದುಬರಿಯಗಿದ್ದಕಾರಣಕ್ಕೆ ಆ ಕ್ಷಣದಲ್ಲಿ ಆಡಳಿತಾತ್ಮಕ ಸೇವಾ ಪದವಿಯನ್ನು ಪಡೆಯುವಆಸೆಯನ್ನು ಮುಂದೂಡುತ್ತಾಳೆ.ತನ್ನಉನ್ನತ ವ್ಯಾಸಾಂಗಕ್ಕೆಅವಶ್ಯಕವಾಗಿದ್ದದೊಡ್ಡ ಮೊತ್ತದ ಹಣವನ್ನು ಹೊಂದಿಸುವ ಕಾರಣದಿಂದಅಲ್ಲೇಅರೆಕಾಲಿಕಉದ್ಯೋಗವನ್ನು ಮಾಡುವ ಮೂಲಕ ತನ್ನಕನಸಾದ ಆಡಳಿತಾತ್ಮಕ ಸೇವಾ ಪರೀಕ್ಷೆಗೆಬೇಕದಹಣವನ್ನು ಹೊಂದಿಸಿಕೊಳ್ಳುತ್ತಾಳೆ. ಪರಿಕ್ಷೆಯನ್ನು ಬರೆಯಲು ಪ್ರಯತ್ನಿಸಿ ಹಲವು ಪ್ರಯತ್ನಗಳ ತರುವಾಯವೂತನ್ನ ಕನಸು ನನಸಾಗುವುದಿಲ್ಲ.ಅಲ್ಲಿನಕಠಿಣ ಪರಿಕ್ಷಾ ಪದ್ದತಿಗಳ ಕಾರಣದಿಂದಾಗಿಸೀಟ್ ಪಡೆಯುವುದೇದುಸ್ಥರವಾದಾಗ ಆಕೆ ಆಯ್ದುಕೊಂಡಿದ್ದು ಸಾಮಾನ್ಯ ಪ್ರವೇಶ ಸಂಬಂಧಿತಸ್ಪರ್ಧಾತ್ಮಕ ಪರೀಕ್ಷೆ.ಈ ಪರೀಕ್ಷೆಯನ್ನುಪ್ರಥಮರ್ಯಾಂಕ್‍ನೊಂದಿಗೆಬರೆದು(ಪ್ಯಾರಿಸ್‍ಯೂನಿವರ್ಸಿಸಿಟಿ 2002ರಲ್ಲಿ)ನಂತರದಲ್ಲಿಆಡಳಿತಾತ್ಮಕ ಸೇವಾ ಪರೀಕೆಯನ್ನೂ ಬರೆದುಉತ್ತಮದರ್ಜೆಯೊಂದಿಗೆತೇರ್ಗಡೆಯಾಗಿಫ್ರಾನ್ಸ್ ಸರ್ಕಾರದ ಆಡಳಿತ ಸಲಹೆಗಾರ್ತಿಯಾಗಿ ಕೆಲಸಕ್ಕೆ ನೇಮಕಗೊಳ್ಳುತ್ತಾಳೆ.
ಫ್ರಾನ್ಸ್‍ದೇಶದಲ್ಲಿ ಶ್ರೀಮಂತರು ಮತ್ತು ಬಿಳಿಯರಿಗಷ್ಟೇ ರಾಜಕಾರಣ ಎಂಬ ಮಾತಿದೆ, ಅದರಲ್ಲೂಪುರುಷರಿಗೇರಾಜಕೀಯದಲ್ಲಿಹೆಚ್ಚಿನ ಪ್ರಾಧಾನ್ಯತೆಇರುವದೇಶದಲ್ಲಿಈಕೆಯ ಸಾಧನೆಯನ್ನು ಗಮನಿಸಬೇಕಾದುದ್ದೇ.ಉದ್ಯೋಗವನ್ನು ಪಡೆದ ನಜತ್‍ತನ್ನ ಸ್ವಂತದುಡ್ಡಿನಲ್ಲೇ ಪ್ರಾನ್ಸ್‍ನನಗರಿಕ ಸೇವಾ ಆಯೋಗದಅಧಿಕಾರಿ ಬೋರಿಸ್‍ವಲ್ಲೌಡ್ ಬ್ಲೆಕ್ಸೆಮ್‍ರನ್ನುವಿವಾಹವಾಗಿ ಗಂಡು ಮತ್ತು ಹೆಣ್ಣು ಅವಳಿ ಮಕ್ಕಳನ್ನು ಪಡೆಯುತ್ತ್ತಾಳೆ.ನಂತರದಲ್ಲಿಫ್ರಾನ್ಸ್‍ನ ಪ್ರಮುಖ ಪಕ್ಷವಾದ ಸೋಶಿಯಲಿಸ್ಟಿಕ್ ಪಕ್ಷವೇಈಕೆಯಕಾರ್ಯವೈಖರಿಯನ್ನು ಗಮನಿಸಿ ತನ್ನ ಸದಸ್ಯಳಾಗಿ ಸ್ವೀಕರಿಸುತ್ತದೆ.ದೇಶದಮಾನವ ಹಕ್ಕುಗಳ ಹೋರಾಟ ಮತ್ತು ವಸತಿ ಸಮಸ್ಯೆಗಳ ಹೋರಾಟದಲ್ಲಿ ಮುಂಚೂಣಿಯಾಗಿ ನಿಲ್ಲುತ್ತಾಳೆ.ಸರಕಾರದಸಲಹೆಗಾರ್ತಿಯಾಗಿರಾಜಕೀಯಜೀವನ ಆರಂಭಿಸಿದ ಕೆಲವೇ ಸಮಯದಲ್ಲಿ ಆಕೆ ಸೋಶಿಯಲಿಸ್ಟಿಕ್ ಪಕ್ಷದ ಮುಂಚೂಣಿಯಯುವರಾಜಕಾರಿಣಿಯಾಗಿ ರೂಪುಗೊಳ್ಳುತ್ತಾಳೆ.ನಂತರದಲ್ಲಿಆ್ಯರೋನ್‍ಅಲ್ಫೀನ್ಸ್‍ನಲ್ಲಿಮಹಿಳಾ ಸದಸ್ಯೆಯಾಗಿಆಯ್ಕೆಗೊಂಡು 2008 ರವರೆಗೂಅಲ್ಲಿಕರ್ತವ್ಯ ನಿರ್ವಹಣೆ ಮಾಡುತ್ತಾಳೆ.ಈ ಅವದಿಯಲ್ಲಿ ಮುಸ್ಲಿಂ ಸಂಪ್ರದಾಯದ ‘ಬುರ್ಖಿನಿ’ ಯನ್ನುಅವರವರ ಆಸಕ್ತಿಗೆ ಬಿಟ್ಟ ವಿಚಾರಹಾಗು ಇದುಕಡ್ಡಾಯವಲ್ಲ ಎಂಬ ಕಾನೂನನ್ನುಜಾರಿಗೆತರುವಲ್ಲಿಈಕೆಯು ಮಹತ್ತರವಾದಪಾತ್ರವನ್ನು ವಹಿಸುತ್ತಾಳೆ.2008 ರಲ್ಲಿ ಮಹಿಳಾ ಕೌನ್ಸಿಲರ್ ಆಗಿ ಆಯ್ಕೆಯಾಗಿರಾಜಕೀಯಕ್ಷೇತ್ರದಲ್ಲಿಈಕೆಯಆಕರ್ಷಕ ಮಾತುಗಾರಿಕೆ ಮತ್ತುವಿಭಿನ್ನವಾದ ಚಿಂತನೆಗಳ ಮೂಲಕ ಮಹಿಳಾ ರಾಜಕೀಯಕ್ಷೇತ್ರದಲ್ಲಿ ಹೊಸ ಭಾಷ್ಯವನ್ನು ಬರೆಯುತ್ತಾಳೆ.ಸೋಶಿಯಲಿಸ್ಟಿಕ್ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿ ಫ್ರಾನ್ಸ್‍ನಲ್ಲಿಅಧಿಕಾರವೆಂಬುವುದುಕೇವಲ ಬಿಳಿಯರ ಮತ್ತುದುಡ್ಡಿರುವವರ ಸ್ವತ್ತಲ್ಲಎಂಬುದನ್ನು ಸಾಬೀತುಪಡಿಸುತ್ತಾಳೆ.

2012 ರಲ್ಲಿ ಈಕೆ ಫ್ರಾನ್ಸ್‍ನಅಧ್ಯಕ್ಷ ಫ್ರಾನ್ಸಿಸ್ ಹೊಲಾಂಡೆಯವರ ಸರಕಾರದಲ್ಲಿಮಹಿಳಾ ಮಕ್ಕಳ ಹಕ್ಕುಗಳ ಸಚಿವೆಯಾಗಿಆಯ್ಕೆಯಾಗಿ ಪಾರ್ಲಿಮೆಂಟ್‍ನ್ನೂ ಪ್ರವೇಶಿಸುತ್ತಾಳೆ.ಈ ಇಲಾಖೆಯಲ್ಲಿಅಮೂಲಾಗ್ರ ಬದಲಾವಣೆಗಳು ಮತ್ತು ನಿಯಮಾವಳಿಗಳನ್ನು ಜಾರಿಗೆತರುವ ಮೂಲಕ ದೇಶದಅತ್ಯಂತ ಪ್ರಭಾವೀ ಮಹಿಳೆಯಾಗಿ ರೂಪುಗುಳ್ಳುತ್ತಾಳೆ.ಈ ಸಂದರ್ಭದಲ್ಲೇಈಕೆಯದಕ್ಷ ಆಡಳಿತದ ಕಾರಣದಿಂದಇಬ್ಬರು ಸಚಿವರುರಾಜೀನಾಮೆಯನ್ನುಕೊಡಬೇಕಾಗಿ ಬಂದಿದ್ದೂಈಕೆಗೆ ಇನ್ನಷ್ಟುಎತ್ತರಕ್ಕೆ ಬೆಳೆಯುವ ಅವಕಾಶವನ್ನು ನೀಡಿತುಎನ್ನಬಹುದು.ನಂತರದಲ್ಲಿಯುವಜನಕ್ರೀಡಾ ಸಚಿವೆಯಾಗಿಯೂ ಕೆಲಸ ನಿರ್ವಹಿಸಿಕೊಳ್ಳುವ ಮೂಲಕ ರಾಜಕೀಯದಎಲ್ಲಾಕ್ಷೇತ್ರಕ್ಕೂ ಸೈ ಎನಿಸಿಕೊಂಡು ಬಿಡುತ್ತಾಳೆ.ಇದೇ ವೇಳೆಗೆ ಫ್ರಾನ್ಸ್‍ನ ಪ್ರಸಿದ್ಧ ಪತ್ರಿಕೆಯೊಂದುದೇಶದ ಪ್ರಭಾವೀರಾಜಕಾರಣಿಯಾರೆಂಬ ಸಮೀಕ್ಷೆಯನ್ನುಜನಸಾಮಾನ್ಯರ ಮುಂದೆ ನೀಡಿದಾಗಪ್ರಥಮ ಪ್ರಭಾವಿ ರಾಜಕಾರಿಣಿಯಾಗಿಅಧ್ಯಕ್ಷ ಹೊಲಾಂಡೆ, ಎರಡನೇ ಪ್ರಭಾವಿಯಾಗಿ ನಜತ್‍ರನ್ನುದೇಶಕ್ಕೆದೇಶವೇಗುರುತಿಸುತ್ತದೆ.ಇದಾದ ನಂತರ25 ಅಗಸ್ಟ್2014 ರಲ್ಲಿಈಕೆಯರಾಜಕೀಯ ವರ್ಚಸ್ಸು ಮತ್ತು ಪ್ರಭಾವವನ್ನು ಗಮನಿಸಿದ ಫ್ರಾನ್ಸ್ ನ ಅಧ್ಯಕ್ಷರಾದ ಫ್ರಾನ್ಸಿಸ್ ಹೊಲಾಂಡೆಯವರುಈಕೆಯನ್ನುಎರಡನೇಅತ್ಯುನ್ನತ ಹುದ್ದೆಯಾದಶಿಕ್ಷಣ ಹಗೂ ಉನ್ನತ ಶಿಕ್ಷಣ ಸಚಿವೆಯನ್ನಾಗಿಆಯ್ಕೆ ಮಾಡುತ್ತಾರೆ.
ನೀನು ಕನಸು ಕಾಣದಿದ್ದರೆ ನೀನು ಬದುಕನ್ನುಗೆಲ್ಲಲಾರೆ; ಕನಸನ್ನುಕಂಡರೆ ನಿನು ಜಗತ್ತನ್ನೇಗೆಲ್ಲಬಲ್ಲೆ ಎಂಬ ಮಾತಿನಂತೆನಜತ್ ವಲ್ಲೌಡ್‍ಬ್ಲೆಕ್ಸೆಮ್‍ರವರು ಪ್ರಾನ್ಸ್‍ದೇಶದಎರಡನೇಉನ್ನತ ಹುದ್ದೆಯಾದ ಶಿಕ್ಷಣ ಸಚಿವೆಯ ಸ್ಥಾನವನ್ನು ಪಡೆದವರು.ಇವರೇ ಫ್ರಾನ್ಸ್‍ನರಾಜಕೀಯಇತಿಹಾಸಕಂಡ ಪ್ರಪ್ರಥಮ ಮಹಿಳಾ ಶಿಕ್ಷಣ ಸಚಿವೆಯೂ ಹೌದು.ಒಟ್ಟಿನಲ್ಲಿ ಬದುಕಿನಲ್ಲಿ ಸ್ಪಷ್ಟಗುರಿ ಮತ್ತು ಸಾಧಿಸುವಛಲವೊಂದಿದ್ದರೆಗಂಡು ಹೆಣ್ಣೆಂಬ ಬೇಧಭಾವವಿಲ್ಲದೇಎಂತಹ ಸಾಧನೆಯನ್ನಾದರೂ ಸಾಧಿಸಿ ತೋರಿಸಬಹುದೆಂದುದಕ್ಕೆತೀರಾ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿ ದೇಶÀದಅತ್ಯುನ್ನತ ಹುದ್ದೆಯಾದ ಶಿಕ್ಷಣ ಸಚಿವೆಯ ಸ್ಥಾನವನ್ನು ಅಲಂಕರಿಸಿದ ನಜತ್ ವಲ್ಲೌಡ್ ಬ್ಲ್ಲೆಕ್ಸೆಮ್‍ರವರುಉತ್ತಮಉದಾಹಣೆಯಾಗಿದ್ದಾರೆ.
ಸಂತೋಷ್‍ರಾವ್ ಪೆರ್ಮುಡ
ದ.ಕಜಿಲ್ಲೆ.ದೂ:9742884160




