ಬಂಟ್ವಾಳ: ಕಲ್ಲಡ್ಕದಲ್ಲಿ ದನ ಅಕ್ರಮ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅಡ್ಯಾರು ಕಣ್ಣೂರಿನ ಜಕಾರಿಯಾ, ಬದ್ರುದ್ದೀನ್, ಕಬೀರ್ ಮತ್ತು ಇರ್ಫಾನ್ ಬಂಧಿತರು. ಬುಧವಾರ ರಾತ್ರಿ ಆಟೋದಲ್ಲಿ ಕರುವೊಂದನ್ನು ಸಾಗಿಸುತ್ತಿದ್ದವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
