ಮೂಡುಬಿದಿರೆ: ಮಹಾವೀರ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಮತ್ತು ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಎಪ್ರಿಲ್ 2ರಂದು ಆರೋಗ್ಯ ತಪಾಸಣಾ ಉಚಿತ ಬೃಹತ್ ಶಿಬಿರ ಮಹಾವೀರ ಕಾಲೇಜಿನಲ್ಲಿ ನಡೆಯಲಿದೆ ಎಂದು ಇಂಡಿಯಾನಾ ಆಸ್ಪತ್ರೆಯ ಡಾ. ಅಜಿತ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಾರ್ಡಿಯಾಲಜಿ, ನ್ಯೂರಾಲಜಿ, ಪೀಡಿಯಾಟ್ರಿಕ್ಸ್, ಜನರಲ್ ಮೆಡಿಸಿನ್, ಆರ್ಥೋಪೆಡಿಕ್ಸ್, ಯೂರಾಲಜಿ ಹಾಗೂ ಮಾನಸಿಕ ತಜ್ಞರಿಂದ ಸಮಾಲೋಚನೆ ಹೀಗೆ ಎಂಟು ವಿಭಾಗಗಳ ವೈದ್ಯಕೀಯ ಮುಖ್ಯಸ್ಥರು ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ನಡೆಸುವರು. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ಇಂಡಿಯಾನಾ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು.
ಇದೇ ವೇಳೆ `ಮೈ ಇಂಡಿಯಾನಾ ಹೆಲ್ತ್ ಕಾರ್ಡ್’ ಅನ್ನು ಬಿಡುಗಡೆಗೊಳಿಸಲಾಗುವುದು. 750 ಮುಖಬೆಲೆಯ ಈ ಕಾರ್ಡ್ ಅನ್ನು ಶಿಬಿರದ ಹಿನ್ನೆಲೆಯಲ್ಲಿ ರೂ.400 ಗೆ ನೀಡಲಾಗುವುದು, ಸಾರ್ವಜನಿಕರು ಇದರ ಸದುಪಯೋಗಪಡಕೊಳ್ಳಬೇಕೆಂದರು. ಶಿಬಿರದಲ್ಲಿ ಪಾಲ್ಗೊಳ್ಳುವವವರು ಇದೇ 30ರೊಳಗೆ ಸುರೇಶ್ ಶೆಟ್ಟಿ (ಮೊ:9845283124) ಹೆಸರನ್ನು ನೊಂದಾಯಿಸಿಕೊಳ್ಳವಂತೆ ತಿಳಿಸಲಾಗಿದೆ.
ಮಹಾವೀರ ಕಾಲೇಜಿನ ಪ್ರಾಂಶುಪಾಲ ಪ್ರೊ.ಚಂದ್ರಶೇಖರ್ ದೀಕ್ಷಿತ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ, ಸಾರಾ ಇಸ್ಮಾಯಿಲ್, ಚೇತನ ಮತ್ತು ಉದಯ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
