ವಾರ್ಡ್ ಕ್ರಮಾಂಕ 107ರಲ್ಲಿ ಮಾಲತಿ ಜೆ. ಶೆಟ್ಟಿ ಸ್ಪರ್ಧೆ
ಮುಂಬಯಿ, ಫೆ.15: ಮುನ್ಸಿಪಾಲ್ ಕಾರ್ಪೋ ರೇಶನ್ ಆಫ್ ಗ್ರೇಟರ್ ಮುಂಬಯಿ (ಎಂಸಿಜಿಎಂ) ಯಾನೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಉಪನಗರ ಮುಲುಂಡ್ ಪಶ್ಚಿಮದ ನಹುರ್ ಗೌಟನ್, ಮುಲುಂಡ್ ಬೆಸ್ಟ್ ಬಸ್ ಡೆಪೆ ಸೈಂಟ್ ಪಾಯಸ್ ಕಾಲೋನಿ ಇವುಗಳ ವಾರ್ಡ್ ಕ್ರಮಾಂಕ 107ರಲ್ಲಿ ಶಿವಸೇನೆ ಪಕ್ಷದ ಅಭ್ಯಥಿರ್ ಆಗಿ ಮಾಲತಿ ಜಗದೀಶ್ ಶೆಟ್ಟಿ ಸ್ಪರ್ಧಿಸಿರುವರು.

11- Malati Shety (W-107)

 

ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದೊಂಡೆರಂಗಡಿ ಕುಕ್ಕುಜೆ ಮೂಲದ ಮಾಲತಿ ಜಗದೀಶ್ ಶೆಟ್ಟಿ ಸಾಮಾಜಿಕ ಕಳಿಕಳಿಯುಳ್ಳವರಾಗಿದ್ದು ಇದೀಗ ರಾಜಕೀಯಕ್ಕೆ ಪ್ರವೇಶಿಸಿರುವರು. ಜಗದೀಶ್ ಶೆಟ್ಟಿ ಅವರು ಕಳೆದ ಅನೇಕ ವರ್ಷಗಳಿಂದ ಶಿವಸೇನೆ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದು ಮುಲುಂಡ್ ವಿಭಾಗದ ಉಪ ಪ್ರಮುಖರಾಗಿ ರಾಜಕೀಯದಲ್ಲಿ ಸಕ್ರೀಯರಾಗಿ ಸ್ಥಾನೀಯವಾಗಿ ಜನಾನುರೆಣೆಸಿರುವರು.
ಬಿಜೆಪಿ, ಕಾಂಗ್ರೇಸ್ (ಐ), ಎನ್‍ಸಿಪಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್), ಬಹುಜನ ಸಮಾಜ ಪಾರ್ಟಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಪಕ್ಷಗಳ ಅಭ್ಯಥಿರ್üಗಳು ಸೇರಿದಂತೆ ಮೂವರು ಸ್ವತಂತ್ರ್ಯ ಉಮೇದುವಾರರು ಸ್ಪರ್ಧಿಸಿರುವರು

By suddi9

Leave a Reply

Your email address will not be published. Required fields are marked *