ಬಂಟ್ವಾಳ: ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವನ ಮೇಲೆ ಯುವಕರಿಬ್ಬರು ಹಲ್ಲೆ ನಡೆಸಿರುವ ಘಟನೆ ಬಿ.ಸಿ.ರೋಡ್ ಕೈಕಂಬದ ಶಾಂತಿ ಅಂಗಡಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಪಲ್ರ್ಯ ನಿವಾಸಿ ಶಾಹುಲ್ ಹಮೀದ್ ಎಂಬವರ ಪುತ್ರ ಮುಹಮ್ಮದ್ ಶಫೀಕ್(15) ಹಲ್ಲೆಗೊಳಗಾದ ವಿದ್ಯಾರ್ಥಿ. ಬಂಟ್ವಾಳ ಕೆಳಗಿನ ಪೇಟೆ ತೌಹೀದ್ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯಾಗಿರುವ ಈತ ಶುಕ್ರವಾರ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದಾಗ ಶಾಂತಿ ಅಂಗಡಿ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ರಮೀಝ್ ಮತ್ತು ಅನ್ಸಾರ್ ಯಾನೆ ಐ.ಟಿ.ಸಿ. ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime-Pix
ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಗುರುವಾರ ರಾತ್ರಿ ಪಲ್ರ್ಯ ಮತ್ತು ಶಾಂತಿ ಅಂಗಅಂಡಿಯ ಯುವಕರ ಮಧ್ಯೆ ಘರ್ಷನೆ ಉಂಟಾಗಿತ್ತು. ಈ ವೇಳೆ ಶಾಂತಿ ಅಂಗಡಿಯ ಇಬ್ಬರು ಯುವಕರು ಗಾಯಗೊಂಡಿದ್ದು ಇದರ ಸೇಡು ಎಂಬಂತೆ ಇಂದು ಸಂಜೆ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಫೀಕ್ ಮೇಲೆ ಆರೋಪಿಗಳಾದ ರಮೀಝ್ ಮತ್ತು ಅನ್ಸಾರ್ ಐ.ಟಿ.ಸಿ. ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

By Suddi9

Leave a Reply

Your email address will not be published. Required fields are marked *