ನವದೆಹಲಿ: ಮಹಿಳೆಯರ ಉಡುಗೆ ತೊಡಗೆ ಮಾದಕವಾಗಿದ್ದರೆ ಅವರು ತನ್ನನ್ನು ತಾನೇ ಅತ್ಯಾಚಾರಕ್ಕೆ ಆಹ್ವಾನಿಸಿದಂತೆ, ನಿರ್ಭಯಾ ಕೂಡಾ ತನ್ನ ತಪ್ಪಿನಿಂದಲೇ ಅತ್ಯಾಚಾರಕ್ಕೊಳಗಾಗಿದ್ದಳು ಎಂದು ಎನ್ಸಿಪಿ ಪಕ್ಷದ ನಾಯಕಿಯಾಗಿರುವ ಹಾಗೂ ಮಹರಾಷ್ಟ್ರದ ಮಹಿಳಾ ಆಯೋಗದ ಸದಸ್ಯೆ ಆಶಾ ಮಿಜರ್ಿ ನಾಗಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಶಕ್ತಿಮಿಲ್ ಎಂಬಲ್ಲಿನ ನಿರ್ಜನ ಪ್ರದೇಶಕ್ಕೆ ಯುವತಿ ಹೋಗಿದ್ದೇ ತಪ್ಪು, ಆಕೆ ತನ್ನ ಗೆಳೆಯ ಜೊತೆಗೆ ರಾತ್ರಿ ಹನ್ನೊಂದು ಗಂಟೆಗೆ ನೈಟ್ ಶೋ ಫಿಲಂ ನೋಡಲು ಹೋಗಿದ್ದು ಯಾಕೆ? ನೈಟ್ ಶೋ ಭಾರತದ ಸಂಸ್ಕೃತಿಗೆ ಬರುವುದಿಲ್ಲ, ಆಕೆ ಗೆಳೆಯನ ಜೊತೆ ಹೋಗಿದ್ದಾಗ ಎಚ್ಚರಿಕೆಯಿಂದ ಇರಬೇಕಾಗಿತ್ತು, ನಾನು ಯಾರ ಜೊತೆಗೆ ಎಲ್ಲಿಗೆ ಹೋಗುತ್ತಿದ್ದೇನೆ, ತನ್ನ ಸುರಕ್ಷತೆ ಎಷ್ಟಿದೆ ಎಂಬೆಲ್ಲಾ ಹಲವಾರು ಪ್ರಶ್ನೆಗಳನ್ನು ತಮ್ಮನ್ನು ತಾವೇ ಕೇಳಿಕೊಳ್ಳಬೇಕು, ದೇಶದಲ್ಲಿ ನಡೆಯುವ ಅತ್ಯಾಚಾರಕ್ಕೆ ಮಹಿಳೆಯರು ಉಡುವ ಉಡುಗೆಯೇ ಕಾರಣ, ವಸ್ತ್ರ ಸಂಹಿತೆ ಇಲ್ಲದ ಮಾದಕ ಉಡುಪುಗಳನ್ನು ಧರಿಸಿಕೊಂಡು ತಿರುಗಾಡಿದರೆ ಎಲ್ಲರ ಕಣ್ಣಿಗೆ ಕುಕ್ಕುತ್ತದೆ, ಹೀಗಾಗಿ ಸಮಾಜದಲ್ಲಿರುವಾಗ ಮಹಿಳೆಯರು ಎಚ್ಚರಿಕೆಯಿಂದ ಇರುವುದು ಅಗತ್ಯ,, ಇಲ್ಲದಿದ್ದರೆ ಆಕೆ ತನ್ನನ್ನು ತಾನೇ ಅತ್ಯಾಚಾರಕ್ಕೆ ಆಹ್ವಾನಿಸಿದಂತೆ ಆಗುತ್ತದೆ ಎಂದು ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.
ಇವರ ಹೇಳಿಕೆಗೆ ದೇಶದ್ಯಂತ ಖಂಡನೆ ವ್ಯಕ್ತವಾಗಿದೆ.

