ಮೂಡುಬಿದಿರೆ: ಅಂಚೆ ಇಲಾಖೆ ನೌಕರರಿಗೆ ನಡೆದ ರಾಜ್ಯಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಾಗಿರುವ ಕೇಶವ್ ಪೊಳಲಿ ಅವರು ರಾಂಚಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ಅಂಚೆ ನೌಕರರ ತಂಡವನ್ನು ಪ್ರತಿನಿಧಿಸಲಿರುವ ಕೇಶವ್ ಪೊಳಲಿ ಅವರು ಮೂಡುಬಿದಿರೆ ಅಂಚೆ ಕಚೇರಿಯಲ್ಲಿ ಅಂಚೆ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

