ಅಮರನಾಥ ಶೆಟ್ಟಿ, ಡಾ.ಎಲ್.ಸಿ ಸೋನ್ಸ್‍ಗೆ ಸನ್ಮಾನ
ಮೂಡುಬಿದಿರೆ: ಅಲಂಗಾರಿನ ಹೋಲಿ ರೋಜರಿ ಚರ್ಚ್‍ನ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಚರ್ಚ್‍ನ ಬಯಲು ರಂಗಮಂದಿರದಲ್ಲಿ ಕ್ರಿಸ್ಮಸ್ ಸೌಹಾರ್ದಕೂಟವನ್ನು ಹಮ್ಮಿಕೊಳ್ಳಲಾಯಿತು.
ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ಕೇಕ್ ಕತ್ತರಿಸುವ ಮೂಲಕ ಕೂಟಕ್ಕೆ ಚಾಲನೆ ನೀಡಿದರು. ಸರ್ವಧರ್ಮದವರನ್ನು ಗೌರವಿಸುವ ಸೌಹಾರ್ದಕೂಟ ಅರ್ಥಪೂರ್ಣವಾದದ್ದು. ಅಲಂಗಾರಿನ ಸೈಂಟ್ ಥೋಮಸ್ ಶಾಲೆಯಲ್ಲಿ ಕುಡಿಯುವ ನೀರಿನ ಅಭಿವೃದ್ಧಿಗೆ ಸರ್ಕಾರವು ವಿವಿಧ ರೀತಿಯ ಅನುಧಾನದಿಂದ ರೂ.15 ಲಕ್ಷವನ್ನು ಬಿಡುಗಡೆಗೊಳಿಸಿದೆ. ಅರ್ಜಿ ಸಲ್ಲಿಸಿದಲ್ಲಿ ಚರ್ಚ್ ಅಭಿವೃದ್ಧಿಗೆ 50 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸುವ ಕೆಲಸ ಮಾಡುತ್ತೇನೆ ಎಂದರು.
ಮಾಜಿ ಸಚಿವ, ಕರ್ನಾಟಕ ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕøತ ಕೆ.ಅಮರನಾಥ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಚೇತ ಪ್ರಗತಿಪರ ಕೃಷಿಕ ಡಾ.ಎಲ್.ಸಿ ಸೋನ್ಸ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಕಥೋಲಿಕ್ ವಿದ್ಯಾ ಸಂಸ್ಥೆಗಳ ಪ್ರಾಂತೀಯ ನಿರ್ದೇಶಕ ರೆ.ಡಾ ಎವ್ಜಿನ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಿದ್ದಾಪುರ ವಾಸುದೇವ ಭಟ್ ಸೌಹಾರ್ದ ಸಂದೇಶ ನೀಡಿದರು.

mbd_dec20_1
ಅಲಂಗಾರು ಬಡಗು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ.ಮೂ ಈಶ್ವರ ಭಟ್, ಅಲಂಗಾರು ಕ್ರಿಸ್ತಶಾಂತಿ-ಸಿಯೋನ್ ದೇವಾಲಯದ ಧರ್ಮಗುರು ರೆ.ಸುಧೀರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಜೆಡಿಎಸ್ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಶ್ವಿನ್ ಪಿರೇರಾ, ಅಲಂಗಾರು ಲಯನ್ಸ್ ಕ್ಲಬ್ ಅಧ್ಯಕ್ಷೆ ರೂಪಾ ನಾಯಕ್, ಉದ್ಯಮಿ ಮಹಮ್ಮದಾಲಿ ಅಬ್ಬಾಸ್, ಸೈಂಟ್ ಥೋಮಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿ.ಹೆಲೆನ್ ಗೋವಿಯಸ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಐರಿನ್ ತಾವ್ರೊ, ಅಲಂಗಾರು ಚರ್ಚ್ ಪಾಲನ ಪರಿಷತ್‍ನ ಉಪಾಧ್ಯಕ್ಷ ಜೆರಾಲ್ಡ್ ಲೋಬೊ, ಮೂಡುಬಿದಿರೆ ಪ್ರೆಸ್‍ಕ್ಲಬ್‍ನ ಕಾರ್ಯದರ್ಶಿ ಯಶೋಧರ ಬಂಗೇರ ವೇದಿಕೆಯಲ್ಲಿದ್ದರು.
ಅಲಂಗಾರು ಚರ್ಚ್‍ನ ಧರ್ಮಗುರು ರೆ.ಫಾ ಬೇಸಿಲ್ ವಾಸ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂತೋಷ್ ರೋಡ್ರಿಗಸ್ ಹಾಗೂ ಎಲ್ವಿರಾ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಧರ್ಮಗುರು ರೆ.ಫಾ ಕೆನೆತ್ ಕ್ರಾಸ್ತ ಸಹಕರಿಸಿದರು.
ಹೆರಾಲ್ಡ್ ತಾವ್ರೊ ನೇತೃತ್ವದ ಗಾಯನ ಬಳಗದಿಂದ ಕ್ರಿಸ್ಮಸ್ ಗೀತೆ, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಅಲಂಗಾರು ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಮೂಡುಬಿದಿರೆ, ಅಲಂಗಾರು ಬಡಗು ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಅಲಂಗಾರು ಕ್ರಿಸ್ತಶಾಂತಿ ಹಾಗೂ ಸಿಯೋಬ್ ದೇವಾಲಯ, ಮೂಡುಬಿದಿರೆ ಪ್ರೆಸ್‍ಕ್ಲಬ್ ಹಾಗೂ ಸೈಂಟ್ ಥೋಮಸ್ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಸೌಹಾರ್ದಕೂಟವನ್ನು ಹಮ್ಮಿಕೊಳ್ಳಲಾಯಿತು

By Suddi9

Leave a Reply

Your email address will not be published. Required fields are marked *