ಬಂಟ್ವಾಳ: ದ.ಕ.ಜಿಲ್ಲೆಯ ಉಪನ್ಯಾಸಕರು ವಿದ್ಯಾರ್ಥಿಗಳ ಸರ್ವೋತ್ತೊಮುಖ ಏಳಿಗೆಗೆ ಅವಿರತ ಶ್ರಮ ವಹಿಸಿ, ಅತ್ತ್ಯುತ್ತಮ ಫಲಿತಾಂಶಕ್ಕೆ ಪೂರಕವಾದ ವಾತಾವರಣವನ್ನು ಉಪನ್ಯಾಸಕರ ಜೊತೆ ಸಂಘ ಕಲ್ಪಿಸಿಕೊಟ್ಟಿದೆ ಎಂದು ಬೆಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಜಗಜೀವನದಾಸ್ ಭಂಡಾರಿ ಹೇಳಿದರು.

dsc_4623

ಅವರು ದ.ಕ.ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘ, ದ.ಕ.ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ರಾಜ್ಯ ಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಏಳಿಗೆಯೇ ಪ್ರಮುಖ ಎಂದು ಕೆಲಸ ಮಾಡುವ ಉಪನ್ಯಾಸಕರು, ಉತ್ತಮ ಪಲಿತಾಂಶದ ಜೊತೆ ಶಿಸ್ತು , ಸಂಯಮದ ಶೈಕ್ಷಣಿಕ ವಾತಾವರಣವನ್ನು ಮೈಗೂಡಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದರು.

ರಾಜ್ಯಶಾಸ್ತ್ರ ವಿಷಯಕ್ಕೆ ಬೇಡಿಕೆ ಕಡಿಮೆಯಾಗುವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಮತ್ತು ರಾಜ್ಯಶಾಸ್ತ್ರ ವಿಷಯಕ್ಕೆ ಬೇಡಿಕೆ ಕಡಿಮೆಯಾಗದಂತೆ ಪ್ರೋತ್ಸಾಹ ನೀಡುವುದು ಸರಕಾರ , ಸಂಬಂದಪಟ್ಟ ಇಲಾಖೆಯ ಆದ್ಯಕರ್ತವ್ಯವಾಗಿದೆ, ಜೊತೆಗೆ ಉಪನ್ಯಾಸಕರು ಕೂಡಾ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಆರ್ ತಿಮ್ಮಯ್ಯ ಮಾತನಾಡಿ ಶಿಕ್ಷಣ ಸಂಘಟನೆಗಳು ವಿನೂತನವಾದ ಕಾರ್ಯಕ್ರಮದ ಮೂಲಕ ಉತ್ತಮ ಫಲಿತಾಂಶಕ್ಕೆ ಪ್ರಮುಖ ಪಾತ್ರವಹಿಸಿದೆ ಎಂದರು.

ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಅಧ್ಯಕ್ಷೆ ಸರಸ್ವತಿ ಬಿ, ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ಇದರ ಪ್ರಾಂಶುಪಾಲ ಬಿಕೆ.ಅಬ್ದುಲ್ ಲತೀಫ್ ಮತ್ತು ಸಂಪನ್ಮೂಲ ವ್ಯಕ್ತಿ ಪ್ರೋ. ವಲೇರಿಯನ್ ರೋಡ್ರಿಗಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕರಿಗೆ ಸನ್ಮಾನ ಮತ್ತು ವಿದಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಕಿಟೆಲ್ ಮೆಮೊರಿಯಲ್ ಪ.ಪೂ. ಕಾಲೇಜು ಮಂಗಳೂರಿನ ಪ್ರಾಂಶುಪಾಲ ವಿಠಲ ಎ ಪ್ರಸ್ತಾವನೆಗೈದರು. ಸಂಘದ ಅಧ್ಯಕ್ಷ ಹರಿಪ್ರಕಾಶ್ ಬಿ. ಸ್ವಾಗತಿಸಿ, ಕಾರ್ಯದರ್ಶಿ ಶೀನಪ್ಪ ಎನ್. ವಂದಿಸಿದರು. ಕೋಶಾಧಿಕಾರಿ ಪುಟ್ಟಸ್ವಾಮಿ ಆರ್ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *