ಮೂಡುಬಿದಿರೆ: ಶ್ರೀ ವಿಠ್ಠಲ ಗೆಳೆಯರ ಬಳಗ ಪಣಪಿಲ ಇದರ ಆಶ್ರಯದಲ್ಲಿ ನಡೆದ 6ನೇ ವರ್ಷದ ಮೂಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಯಾಗಿ ಮಾತನಾಡಿ, ಪಣಪಿಲ ಮೊಸರು ಕುಡಿಕೆ ಉತ್ಸವ ದ.ಕ.ಜಿಲ್ಲೆಗೆ ಮಾದರಿ. ಸಮಾಜದಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗುವುದರಿಂದ ರಾಮರಾಜ್ಯ ನಿರ್ಮಾಣವಾಗಲು ಸಾಧ್ಯ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ತಮ್ಮ ಅನುದಾನದಿಂದ ನಿರ್ಮಿಸಲ್ಪಟ್ಟ ಪಣಪಿಲ ಶಾಲಾ ಆವರಣ ಗೋಡೆ ಹಾಗೂ ವಿಠ್ಠಲ ಗೆಳೆಯರ ಬಳಗದಿಂದ ಕೊಡುಗೆಯಾಗಿ ನೀಡಿದ ಗೇಟನ್ನು ಉದ್ಘಾಟಿಸಲಾಯಿತು.ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ್ ಅಧಿಕಾರಿ, ಪಣಪಿಲ ಅರಮನೆಯ ಶ್ರೀವರ್ಮ ಶೆಟ್ಟಿ, ತಾಲೂಕು ಬಜರಂಗದಳ ಸಂಚಾಲಕ ಸೋಮನಾಥ್ ಕೋಟ್ಯಾನ್, ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ರಮಾನಾಥ ಸಾಲ್ಯಾನ್, ಸಮಿತಿ ಅಧ್ಯಕ್ಷ ಮುನಿರಾಜ್ ಹೆಗ್ಡೆ, ನಡಿಬೆಟ್ಟು ಗುತ್ತು ಸನತ್ ಕುಮಾರ್ ಜೈನ್,ಗ್ರಾಮ ಪಂ.ಸದಸ್ಯೆ ಸುರೇಖಾ,ಶಾಲಾ ಮುಖ್ಯ ಶಿಕ್ಷಕ ಸುಬ್ರಾಯ ಭಟ್, ಮೂಡುಬಿದಿರೆ ಪುರಸಭಾ ಸದಸ್ಯ ಲಕ್ಷ್ಮಣ್ ಪೂಜಾರಿ ಉಪಸ್ಥಿತರಿದ್ದರು.
ಪ್ರಮೀಳ ಪಿ.ಕೋಟ್ಯಾನ್ ವರದಿ ಮಂಡಿಸಿದರು. ಮೂಡುಬಿದಿರೆ ತಾಲೂಕು ಬಜರಂಗದಳ ಸುರಕ್ಷಾ ಪ್ರಮುಖ್ ಸುನಿಲ್ ಪಣಪಿಲ ಸ್ವಾಗತಿಸಿದರು. .ವಾಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಬಿ.ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.
—
