ವಿಟ್ಲ: ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಕೇಪು ಇಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಿದ್ಯಾರ್ಥಿಗಳು ತಮ್ಮ ಪರಿಸರದ ಔಷದಿಯ ಗಿಡಗಳನ್ನು ತಂದು ಪರಿಚಯಿಸಿದರು. ರವಿ ಕೊರತಿಗದ್ದೆಯವರು ಆಟಿ ತಿಂಗಳ ಆಹಾರದ ಮಹತ್ವದ ಬಗ್ಗೆ ತಿಳಿಸಿದರು.

kepu

ಈ ಸಂದರ್ಭದಲ್ಲಿ ಕೇಪು ಗ್ರಾಮ ಪಂಚಾಯತ್ ಸದಸ್ಯೆ ರತ್ನ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ವೀಣಾ, ಶಿಕ್ಷಕಿ ಮೋಹಿನಿ ವೇದಿಕೆಯಲ್ಲಿದ್ದರು. ಶಿಕ್ಷಕಿಯರಾದ ನೀತಾಮಾರ್ಸೆಲಿನ್ ಮತ್ತು ತಿಲಕ ಸಹಕರಿಸಿ ಸುರೇಶ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳು ವಿವಿಧ ಬಗೆಯ ಆಹಾರವನ್ನು ತಂದು ಶಾಲೆಯಲ್ಲಿ ಅತಿಥಿಗಳು ಮತ್ತು ಶಿಕ್ಷಕರೊಂದಿಗೆ ಸಹಭೋಜನ ಮಾಡಿದರು.

By suddi9

Leave a Reply

Your email address will not be published. Required fields are marked *