ಬಂಟ್ವಾಳ:ಬಾಲ ಕಾರ್ಮಿಕತೆ ಬಗ್ಗೆ ಪ್ರತೀಯೊಬ್ಬರಲ್ಲಿ ಮಾಹಿತಿ ಇರುವುದು ಅಗತ್ಯ.ಆಗ ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಲು ಸಾಧ್ಯ.ಬಾಲ ಕಾರ್ಮಿಕತೆ ಬಗ್ಗೆ ಕಾನೂನು ಸೇವಾ ಪ್ರಾಕಾರದಿಂದ ಉಚಿತ ಕಾನೂನು ನೆರವು ಸೌಲಭ್ಯವಿದ್ದು ಇದನ್ನು ಸದುಪಯೋಗಪಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಶ ಮತ್ತು ಜೆ.ಎಂ.ಎಫ್.ಸಿ. ಬಂಟ್ವಾಳ ಹಾಗೂ ತಾಲೂಕು ಕಾನೂನು ಸೇವೆಗಳ ಅಧ್ಯಕ್ಷ ಚಂದ್ರಶೇಖರ ಯು.ಅವರು ಹೇಳಿದರು.ಅವರು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ,ಬಂಟ್ವಾಳ ವಕೀಲರ ಸಂಘ,ಪಡಿ ಮಂಗಳೂರು,ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರ ಮತ್ತು ಕಾವಳಮೂಡೂರು ಗ್ರಾಮ ಪಂಚಾಯತ್ನ ಜಂಟಿ ಆಶ್ರಯದಲ್ಲಿ ಕಾವಳಕಟ್ಟೆ ರಾಜೀವ್ ಗಾಂ ಸೇವಾ ಕೇಂದ್ರದಲ್ಲಿ ಮಂಗಳವಾರ ಜರಗಿದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ಕಾರಣಗಳಿಂದ ಮಕ್ಕಳನ್ನು ದುಡಿಸಲಾಗುತ್ತದೆ.ಬಾಲ ಕಾರ್ಮಿಕತೆಯನ್ನು ಪೋಷಿಸುವುದು ಅಪರಾಧ ಎನ್ನುವ ಅರಿವಿನ ಜೊತೆ ನೈತಿಕ ಹೊಣೆಗಾರಿಕೆಯೂ ಬೇಕಾಗಿದೆ.ಬಾಲ ಕಾರ್ಮಿಕತೆಯನ್ನು ಎಲ್ಲರೂ ವಿರೋಧಿಸಬೇಕಾಗಿದೆ ಎಂದು ಅವರು ಹೇಳಿದರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಎಸ್.ಎಂ.ಅಬೂಬಕ್ಕರ್ ಅವರು ಮಾತನಾಡಿ ಮಕ್ಕಳ ಭಿಕ್ಷಾಟನೆ ಸಂಪೂಣವಾಗಿ ನಿರ್ಮುಲನವಾಗಿಲ್ಲ ಹೊರ ಜಿಲ್ಲೆಗಳಿಂದ ವಲಸೆ ಬಂದವರು ಮಕ್ಕಳನ್ನು ಭಿಕ್ಷಾಟನೆಗೆ ಉಪಯೋಗಿಸುತ್ತಾರೆ.ಈ ಬಗ್ಗೆ ಜಾಗೃತಿ ಮೂಡಬೇಕಾಗಿದೆ ಎಂದು ಹೇಳಿದರು.
ನ್ಯಾಯವಾದಿ ಸುರೇಶ್ ಕುಮಾರ್ ನಾವೂರು ಅವರು ಬಾಲ ಕಾರ್ಮಿಕ ನಿಯಂತ್ರಣ ಮತ್ತು ನಿಷೇಧ ಕಾಯಿದೆ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಉಮೇಶ್ ನಿರ್ಮಲ್ ಅವರು ಬಾಲ್ಯ ವಿವಾಹ ನಿಷೇಧ ಕಾಯಿದೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.ಮತ್ತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪರಿಹಾರ ಸೂಚಿಸಿದರು.
ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಪೂಂಜ ಅವರು ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ. ಬಂಟ್ವಾಳ ಹಾಗೂ ತಾಲೂಕು ಕಾನೂನು ಸೇವೆಗಳ ಕಾರ್ಯದರ್ಶಿ ಆರ್.ಮಹೇಶ, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ಬಿ.ವಿ.ಶೆಣೈ, ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ಸಹಾಯಕ ಸರಕಾರಿ ಅಭಿಯೋಜಕ ಎಂ.ಎಸ್.ಅಲಿ,ಸಹಾಯಕ ಸರಕಾರಿ ನ್ಯಾಯವಾದಿ ಸತೀಶ್ ಕುಮಾರ್ ಶಿವಗಿರಿ,ಬಂಟ್ವಾಳ ಕಾರ್ಮಿಕ ನಿರೀಕ್ಷಕಿ ಮಲ್ವ ನ್ ಗ್ರೇಸಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ,ಅಂಗನವಾಡಿ ಮೇಲ್ವಿಚಾರಕಿ ವೇದಾವತಿ, ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯ ಹ್ಯಾರಿಸ್, ಗ್ರಾ.ಪಂ.ಪ.ಅಧಿಕಾರಿ ವೇದವ, ಗ್ರಾ.ಪಂ.ಸದಸ್ಯರು, ಸಿಬಂದಿ ವರ್ಗ, ವಕೀಲರ ಸಂಘದ ಸದಸ್ಯರು, ಕಾವಳಮೂಡೂರು ಸರಕಾರಿಪ್ರೌಢ, ಪ್ರಾಥಮಿಕ , ಉರ್ದು ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರಿ ಶಕ್ತಿ ಸಂಘದ ಸದಸ್ಯರು, ಪೋಷಕರು ಭಾಗವಹಿಸಿದ್ದರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿ ನ್ಯಾಯವಾದಿ ಶಿವಪ್ರಕಾಶ್ ಅವರು ಸ್ವಾಗತಿಸಿದರು.ವಕೀಲರ ಸಂಘದ ಕಾರ್ಯದರ್ಶಿ ರಾಜರಾಮ್ ನಾಯಕ್ ವಂದಿಸಿದರು. ಪಡಿ ಸಂಸ್ಥೆಯ ಸಂಯೋಜಕಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

