ಧರ್ಮಸ್ಥಳ : ಮೇ30; ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಪ್ರಸಕ್ತ 2016-17ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವು ಮೇ-27ರಂದು ನಡೆಯಿತು. ಪ್ರಾರಂಭದಲ್ಲಿ ಗಣಹೋಮವನ್ನು ನೆರವೇರಿಸಿ ಬಳಿಕ ಶಾಲಾ ಸಂಚಾಲಕರಾದ ಶ್ರೀಯುತ ಅನಂತ ಪದ್ಮನಾಭ ಭಟ್‍ರವರು ಸುಮಾರು 9-30ರ ಸುಮಾರಿಗೆ ದೀಪ ಪ್ರಜ್ವಲಿಸಿ ಶುಭ ಹಾರೈಸುವುದರ ಮೂಲಕ ಶಾಲಾ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.

photo 01

photo 02
ನೂತನ ವರ್ಷದ ಶುಭಾರಂಭದ ಸಂದರ್ಭದಲ್ಲಿ ಶಾಲಾ ಸಹ ಶಿಕ್ಷಕಿಯರು ತಮ್ಮ ಸ್ವ-ರಚಿತ ಕನ್ನಡ ಕವನವನ್ನು ಹಾಡಿ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳಾ ಎಂ.ವಿ. ಸರ್ವರನ್ನೂ ಸ್ವಾಗತಿಸಿ ಶಾಲಾ ಕಾರ್ಯ ಚಟುವಟಿಕೆಗಳು ಅತ್ಯುತ್ತಮ ರೀತಿಯಲ್ಲಿ ನಿರ್ವಿಘ್ನವಾಗಿ ಸಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ‘ಮರಳಿ ಬಾ ಶಾಲೆಗೆ’ ಹಾಗೂ ಇನ್ನಿತರ ಮಹಾನ್ ವ್ಯಕ್ತಿಗಳ ವಿದ್ಯೆ ಮತ್ತು ಜ್ಞಾನಕ್ಕೆ ಸಂಬಂಧಿಸಿದ ಚಿಂತನಗಳನ್ನು ಭಿತ್ತಿಪತ್ರಗಳಲ್ಲಿ ಪ್ರದರ್ಶಿಸಲಾಗಿತ್ತು. ಶಾಲೆಯನ್ನು ರಂಗವಲ್ಲಿ ಮತ್ತು ತಳಿರು-ತೋರಣಗಳಿಂದ ಸಿಂಗರಿಸಿ, ಸಂಗೀತದ ಸುಸ್ವರದೊಂದಿಗೆ ವಿದ್ಯಾಭಿಮಾನಿ ಪೆÇೀಷಕರು ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಸಂತಸದಿಂದ ಆಕರ್ಷಿಸಿ ಬರಮಾಡಿಕೊಳ್ಳುವಂತಿತ್ತು. ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವಿವಿಧ ಹಾಡುಗಳ ಗಾಯನ, ನೃತ್ಯ ಮತ್ತು ಪ್ರಹಸನ ಕಾರ್ಯಕ್ರಮ ನೀಡಿ ಸರ್ವರನ್ನೂ ಮನರಂಜಿಸಿದರು. ವಿದ್ಯಾರ್ಥಿನಿ ಕು. ಸ್ವಾತಿ ಶಬರಾಯಳ ನಿರೂಪಣೆಯೊಂದಿಗೆ ಆರಂಭಗೊಂಡ ಸದ್ರಿ ಕಾರ್ಯಕ್ರಮವು ವಿದ್ಯಾರ್ಥಿನಿ ಕು. ಅಕ್ಷತಾಳ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು. ಈ ರೀತಿ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮತ್ತು ಶಾಲಾ ಸಹಶಿಕ್ಷಕರು ಹೆಚ್ಚಿನ ಉತ್ಸಾಹದಿಂದ ಹಾಜರಿದ್ದು ತಮ್ಮಲ್ಲಿನ ವಿದ್ಯಾಭಿಮಾನ ಮತ್ತು ಕಾರ್ಯತತ್ಪರತೆಗೆ ಉತ್ತಮ ಸಾಕ್ಷಿಯಾದರು.

By suddi9

Leave a Reply

Your email address will not be published. Required fields are marked *