‘ಉಳಿತಾಯ ಮತ್ತು ಸಮಾಜ ಸೇವೆಗೆ ಒತ್ತು’
ಬಂಟ್ವಾಳ:ದೇಶದಲ್ಲಿ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯು ನಾಗರಿಕರಲ್ಲಿ ಉಳಿತಾಯ ಮನೋಭಾವ ಬೆಳೆಸುವುದರ ಜೊತೆಗೆ ಆರ್ಥಿಕ ಸ್ವಾವಲಂಬನೆ, ಉದ್ಯೋಗ, ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಶಾಲೆ ಮತ್ತು ಪಂಚಾಯಿತಿ ವ್ಯಾಪ್ತಿ ಜನತೆಗೆ ಮೂಲಭೂತ ಸೌಕರ್ಯ ಒದಗಿಸುವ ಮೂಲಕ ಸಮಾಜ ಸೇವೆಗೂ ಹೆಚ್ಚಿನ ಒತ್ತು ನೀಡುತ್ತಿದೆÉ ಎಂದು ಎಲ್ಲೈಸಿ ಸಂಸ್ಥೆಯ ಉಡುಪಿ ವಿಭಾಗೀಯ ಹಿರಿಯ ಅಧಿಕಾರಿ ಪಿ.ವಿಶ್ವೇಶ್ವರ ರಾವ್ ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್ ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ಅವರು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

22btl-Sanman
ಶಾಖಾಧಿಕಾರಿ ಡಿ.ಬಾಲಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲೈಸಿ ಸಂಸ್ಥೆಯು ‘ವಿಮಾ ಗ್ರಾಮ’ ಮತ್ತು ವಿಮಾ ಶಾಲೆ’ ಮೂಲಕ ಗ್ರಾಮೀಣ ಜನತೆಗೆ ಸ್ಪಂದಿಸುತ್ತಿದೆ ಎಂದರು.
ಉಡುಪಿ ವಿಭಾಗ ಮಾರುಕಟ್ಟೆ ಅಧಿಕಾರಿ ರಾಜೇಶ್ ಮುದೋಳ್, ಬಂಟ್ವಾಳ ಶಾಖೆ ಆಡಳಿತಾಧಿಕಾರಿ ಎಸ್.ರಾಮಯ್ಯ ಶೆಟ್ಟಿ, ಉಪ ಶಾಖಾಧಿಕಾರಿ ಮಧುಸೂದನ್ ವಿವಿಧ ಪಾಲಿಸಿ ಮತ್ತು ಸೇವೆಗಳ ಬಗ್ಗೆ ವಿವರಿಸಿದರು.
ಇದೇ ವೇಳೆ ವಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿವಿಧ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಹಿರಿಯ ಪ್ರತಿನಿಧಿ ಮಹಾಬಲ ಆಳ್ವ, ಸಮಿತಿ ಸಂಚಾಲಕ ಲೋಕೇಶ ಪೂಜಾರಿ, ಭವಾನಿ ಎನ್. ಅಮೀನ್, ರಮಾದೇವಿ ಮತ್ತಿತರರು ಉಪಸ್ಥಿತರಿದ್ದರು.
ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರತಿನಿಧಿ ನಾರಾಯಣ ಅಮೀನ್ ವಾರ್ಷಿಕ ವರದಿ ವಾಚಿಸಿದರು. ಪ್ರತಿನಿಧಿ ಯಶೋಧರ ಗೌಡ ವಂದಿಸಿದರು. ಪ್ರತಿನಿಧಿ ನವೀನ ಕೊಡ್ಮಾಣ್ ಮತ್ತು ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
—

By Suddi9

Leave a Reply

Your email address will not be published. Required fields are marked *