Sunanda-Pushkar-Shashi-Tharoor11
ನವದೆಹಲಿ: ಸಾಕಷ್ಟು ನಿಗೂಢತೆಯನ್ನು ಸೃಷ್ಟಿಸಿರುವ ಸುನಂದಾಪುಷ್ಕರ್ ಮೃತದೇಹದ ಫೊರೆನ್ಸಿಕ್ ವರದಿ ಬಿಡುಗಡೆಗೊಂಡಿದ್ದು ಅವರ ಕೈಮೇಲೆ ಕಚ್ಚಿದ ಗಾಯದ ಗುರುತು ಕಂಡುಬದಿದೆ, ಅಲ್ಲದೆ ಸಾವು ನಡೆಯುವ ಮುನ್ನ ಸಾಕಷ್ಟು ಮಾರಾಮಾರಿ ನಡೆದಿತ್ತು ಎಂದು ವರದಿ ತಿಳಿಸಿದೆ.
ಕೈಯ್ಯಲ್ಲಿ ಆಳವಾದ ಕಚ್ಚಿದ ಗುರುತು ಕಂಡುಬಂದಿದಷ್ಟೇ ಅಲ್ಲದೆ ಕುತ್ತಿಗೆ, ಭುಜ ಮುಂತಾದ ಕಡೆಗಳಲ್ಲಿ ಡಝನಿನಷ್ಟು ಗಾಯದ ಗುರುತು ಪತ್ತೆಯಾಗಿದೆ. ಸುನಂದಾ ಸಾವಿನ ಮುನ್ನ ವಿಪರೀತ ಔಷಧ ಸೇವನೆ ಕೂಡಾ ಮಾಡಿದ್ದರು ಎಂಬುವುದನ್ನು ವರದಿ ಬಹಿರಂಗಪಡಿಸಿದೆ.
ದೆಹಲಿ ಪೊಲೀಸರು ಇದನ್ನು ಕೊಲೆ ಇರಬಹುದೆಂದು ಅಂದಾಜಿಸಿದ್ದು ಅದೇ ನಿಟ್ಟಿನಲ್ಲಿ ತನಿಖೆ ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ.

By suddi9

Leave a Reply

Your email address will not be published. Required fields are marked *