ಬಂಟ್ವಾಳ:ವಿದ್ಯೆಯಿಂದ ಸ್ವತಂತ್ರರಾಗಿರಿ ಮತ್ತು ಸಂಘಟನೆಯಿಂದ ಬಲಯುತರಾಗಿರಿ ಎನ್ನುತ್ತಾ ಕೇರಳದಲ್ಲಿ ಶಿಕ್ಷಣ ಕ್ರಾಂತಿಗೆ ಪ್ರೇರಣೆ ನೀಡುವ ಮೂಲಕ ಸಾಮಾಜಿಕ ಮತ್ತು ಧಾಮರ್ಿಕ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿರುವ ಬ್ರಹ್ಮಶ್ರೀ ನಾರಾಯಣ ಗುರು ಇವರ ಜನ್ಮದಿನಾಚರಣೆಯನ್ನು ಮುಂದಿನ ದಿನಗಳಲ್ಲಿ ಸಕರ್ಾರದ ವತಿಯಿಂದಲೇ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ.
ತಾಲ್ಲೂಕಿನ ಸಜಿಪಮೂಡ ಗ್ರಾಮದ ಸುಭಾಶ್ನಗರ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ವತಿಯಿಂದ ರೂ.1ಕೋಟಿ ವೆಚ್ಚದಲ್ಲಿ ನಿಮರ್ಾಣಗೊಂಡ ಬ್ರಹ್ಮಶ್ರೀ ‘ಜ್ಞಾನಮಂದಿರ’ವನ್ನು ಗುರುವಾರ ಲೋಕಾರ್ಪಣೆಗೊಳಿಸಿದ ಬಳಿಕ ಅವರು ಮಾತನಾಡಿದರು. ದೇಶದಲ್ಲಿ ಬುದ್ಧ, ಬಸವಣ್ಣ, ಪೆರಿಯಾರ್, ಗುರು ಪುಲೆ, ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ ಅವರಂತೆ ಬ್ರಹ್ಮಶ್ರೀ ನಾರಾಯಣ ಗುರು ಕೂಡಾ ಅಸ್ಪೃಷ್ಯತೆ ನಿವಾರಣೆ ಮತ್ತು ಸಾಮಾಜಿಕ ಅಸಮಾನತೆ ನಿವಾರಣೆಗೆ ಶ್ರಮಿಸಿದ್ದಾರೆ. ಇದರಿಂದಾಗಿ ಇಂತಹ ದಾರ್ಶನಿಕರ ತತ್ವಾದರ್ಶಗಳು ಈಗಲೂ ಪ್ರಸ್ತುತವಾಗಿದ್ದು, ಈ ಸಂದೇಶ ಎಲ್ಲರಿಗೂ ಮುಟ್ಟಿಸುವ ಪ್ರಯತ್ನ ನಡೆಸಲಾಗುವುದು ಎಂದರು.
ಅಂದು ಕೇರಳದಲ್ಲಿ ಶೋಷಿತ ವರ್ಗದ ಜನತೆಗೆ ದೇವಳಕ್ಕೆ ಪ್ರವೇಶವಿಲ್ಲದಿರುವುದನ್ನು ಸ್ವತಃ ಅನುಭವಿಸಿದ ನಾರಾಯಣ ಗುರು, ಇದಕ್ಕಾಗಿ ಸ್ವತಃ ನೀವೇ ಮಂದಿರ ಕಟ್ಟಿ ನೀವೇ ಪೂಜೆ ಮಾಡಿ ಎಂದಿದ್ದರು. ಇದೇ ಪ್ರೇರಣೆಯಿಂದ ಮಂಗಳೂರಿನ ಕುದ್ರೋಳಿ ಕ್ಷೇತ್ರದಲ್ಲಿ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ಭವ್ಯ ದೇವಸ್ಥಾನ ನಿಮರ್ಿಸಿ ದಲಿತ ಮಹಿಳೆಯರಿಂದ ಪೂಜೆ ಮಾಡಿಸಿ, ವಿಧವೆ ಮಹಿಳೆಯರಿಗೆ ಧಾಮರ್ಿಕತೆಯಲ್ಲಿ ಅವಕಾಶ ಒದಗಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮ ಮತ್ತು ದೇವರ ಹೆಸರಿನಲ್ಲಿ ಕೆಲವೊಂದು ಮನುವಾದಿಗಳು ಮೀಸಲಾತಿ ಪ್ರಕ್ರಿಯೆ ಪುನರ್ ಪರಿಶೀಲಿಸಬೇಕು ಎನ್ನುವ ಮೂಲಕ ತಮ್ಮ ಸ್ವಾರ್ಥಕ್ಕಾಗಿ ನಮ್ಮ ನಡುವೆ ಗೋಡೆ ಕಟ್ಟಲು ಹವಣಿಸುತ್ತಿದ್ದಾರೆ. ಈ ಬಗ್ಗೆ ನಾವು ಹುಷಾರಾಗಿರಬೇಕು. ಸಮಾಜದಲ್ಲಿ ಎಲ್ಲಿವರೆಗೆ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿತನಕ ಮೀಸಲಾತಿಯೂ ಇರುತ್ತದೆ ಎಂಬುದನ್ನು ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.
ಅಮೇರಿಕಾದಲ್ಲಿ ವರ್ಣ ಭೇದ ಇದ್ದರೆ, ಇಲ್ಲಿನ ಜಾತಿ ಭೇದ ಇದೆ. ಎಲ್ಲಾ ಜಾತಿ ಮತ್ತು ಧರ್ಮದವರಿಗೆ ವಿಶೇಷ ಸೌಲಭ್ಯ ಮತ್ತು ಮೀಸಲಾತಿ ನೀಡುವ ಬದ್ಧತೆ ಕಾಂಗ್ರೆಸ್ಗೆ ಮಾತ್ರ ಇದೆ ಎಂದು ಹೇಳಿದ ಅವರು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಉದ್ದೇಶದಿಂದ ರಾಜ್ಯದಲ್ಲಿ ಗುತ್ತಿಗೆದಾರ ಪದ್ಧತಿಯಲ್ಲಿಯೂ ಮೀಸಲಾತಿ ಒದಗಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ. ಕಳೆದ ಮೂರು ಬಜೆಟ್ ಅಹಿಂದ ಎಂದು ಟೀಕಿಸುತ್ತಿದ್ದ ವಿರೋಧಿಗಳು ಈ ಬಾರಿ ಬಜೆಟ್ ನೋಡಿ ಸುಮ್ಮನಾಗಿದ್ದಾರೆ ಎಂದರು.
ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಆಶ್ರಿರ್ವಚನ ನೀಡಿದ, ಇಲ್ಲಿನ ಜ್ಞಾನಮಂದಿರ ಇತರರಿಗೆ ಮಾದರಿಯಾಗಿದೆ ಎಂದರು. ಕೇಂದ್ರ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ನಗರಾಡಳಿತ ವಿನಯ ಕುಮಾರ್ ಸೊರಕೆ, ಆರೋಗ್ಯ ಸಚಿವ ಯು.ಟಿ.ಖಾದರ್, ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್, ಶಾಸಕರಾದ ಟಿ.ಶಕುಂತಳಾ ಶೆಟ್ಟಿ, ಪ್ರಮೋದ್ ಮಧ್ವರಾಜ್, ಮೊಯಿದಿನ್ ಬಾವಾ, ಐವನ್ ಡಿಸೋಜ, ಮೂಡ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಬೂಡ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಮಂಗಳೂರು ವಿವಿ ಉಪಕುಲಪತಿ ಪ್ರೊ.ಭೈರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ದಿವ್ಯಪ್ರಭ ಚಿಲ್ತಡ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣಪತಿ ಭಟ್, ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ.ಸಿ.ಸುವರ್ಣ, ಬಿಲ್ಲವ ಎಸೋಸಿಯೇಶನ್ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೆದಾರ್, ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಅಧ್ಯಕ್ಷ ರವಿ ಪೂಜಾರಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್, ಚಲನ ಚಿತ್ರ ನಿದರ್ೇಶಕ ರಾಜಶೇಖರ ಕೋಟ್ಯಾನ್, ಉದ್ಯಮಿ ಚಂದ್ರಹಾಸ ಪೂಜಾರಿ ಬಟ್ಟಹಿತ್ಲು, ನೀಲೇಶ ಪೂಜಾರಿ ಮುಂಬೈ, ರೋಹಿತ್ ಕುಮಾರ್, ಸತೀಶ್ ಪೂಜಾರಿ ದುಬೈ, ಎಂಜಿನಿಯರ್ ಸಂತೋಷ್ ಕೊಟ್ಟುಂಜ, ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಎಸ್ಪಿ ಡಾ.ಶರಣಪ್ಪ ಮತ್ತಿತರರು ಇದ್ದರು.
ಬಿಲ್ಲವ ಮಹಾಮಂಡಲ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ ಪ್ರಾಸ್ತಾವಿಕ ಮಾತನಾಡಿ, ನಾರಾಯಣ ಗುರು ಜಯಂತಿ ಆಚರಣೆ ಸಹಿತ ಪಠ್ಯಕ್ರಮದಲ್ಲಿ ನಾರಾಯಣ ಗುರು ಸಂದೇಶ ಅಳವಡಿಕೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾರಾಯಣಗುರು ಅಧ್ಯಯನ ಪೀಠ ರಚಿಸಬೇಕು ಎಂಬ ಬೇಡಿಕೆ ಮುಂದಿಟ್ಟರು.
ಇದೇ ವೇಳೆ ಮಂದಿರ ನಿರ್ಮಾಣದ ರೂವಾರಿ, ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಇವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸನ್ಮಾನಿಸಿದರು. ಮಂದಿರ ವಿನ್ಯಾಸಗಾರ ಎಂಜಿನಿಯರ್ ಸಂತೋಷ್ ಕುಮಾರ್ ಕೊಟ್ಟಿಂಜ ಇವರನ್ನು ಸ್ವಾಮೀಜಿ ಸನ್ಮಾನಿಸಿದರು.
ಸಮಿತಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಸ್ವಾಗತಿಸಿ, ಸಮಿತಿ ಉಪಾಧ್ಯಕ್ಷ ಯಶವಂತ ದೇರಾಜೆ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಮತ್ತು ಪತ್ರಕರ್ತ ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಕಳ್ಳಿಗೆ ಮನೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತುಳುನಾಡಿನ ಪತ್ರೊಡೆ, ಬಸಳೆಪುಂಡಿ, ಸೇಮಿಗೆ ಅವಲಕ್ಕಿ, ಇಡ್ಲಿ ಸಾಂಬಾರ್ ಮತ್ತಿತರ ಖಾದ್ಯ ಸವಿದರು.




