-
ಬಂಟ್ವಾಳ : ಬೇಸಿಗೆ ಶಿಬಿರಗಳು ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಬೆಳಕಿಗೆ ತರಲು ನೆರವಾಗುತ್ತದೆ, ರಜಾದಿನಗಳನ್ನು ಕ್ರಿಯಾತ್ಮಕವಾಗಿ ಕಳೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನಹರಿಸಬೇಕೆಂದು ಸಾಹಿತಿ ಮುಳಿಯ ಶಂಕರ್ ಭಟ್ ಹೇಳಿದರು.ಅವರು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಆರಂಭಗೊಂಡ ಬೇಸಿಗೆ ಶಿಬಿರ ಕಲಾ ಸಂಗಮ ವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ಸಂಚಾಲಕರಾದ ಜೆ.ಪ್ರಹ್ಲಾದ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಬಿರದ ಮಹತ್ವ ತಿಳಿಸಿದರು. ಆಡಳಿತಾಧಿಕಾರಿಯವರಾದ ಸಿ.ಶ್ರೀಧರ್ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಭಯ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ವಿಜಯಲಕ್ಷ್ಮೀ ವಿ ಶೆಟ್ಟಿ ಹಾಗೂ ಗ್ರೇಸ್ ಪಿ.ಸಲ್ಡಾನ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು
ಕಲಾ ಸಂಗಮದಲ್ಲಿ ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರರಾಗಿ ಮುಳಿಯ ಶಂಕರ ಭಟ್ (ಕನ್ನಡ ಸಾಹಿತ್ಯ), ಪದ್ಯಾಣ ಗಣಪತಿ ಭಟ್(ಗಮಕ), ದಿವಾಣ ಶಿವಶಂಕರ್ ಭಟ್ (ಯಕ್ಷಗಾನ) , ಮೌನೇಶ್ ವಿಶ್ವಕರ್ಮ(ರಂಗಭೂಮಿ), ಸೂರ್ಯಕಾಂತ್(ಚಿತ್ರಕಲೆ), ಧನಂಜಯ್ ಮರ್ಕಂಜೆ (ಕಾರ್ಯಶಿಕ್ಷಣ), ಚಂದ್ರಶೇಖರ್ ಭಂಡಾರಿ ಮತ್ತು ಶ್ರೀಮತಿ ವಾಣಿಶ್ರೀ ಬಾಳಿಗ (ಚದುರಂಗ) ಪಾರ್ಥ ವಾರಾಣಾಸಿ,ವಸಂತ್ ಕುಮಾರ್ ಮತ್ತು ಯಶವಂತ್ (ಈಜು) ಇವರು ಭಾಗವಹಿಸುತ್ತಿದ್ದಾರೆ.
ಶಾಲಾ ಸಹಶಿಕ್ಷಕಿ ಸುಧಾ ಎನ್.ರಾವ್ ಸ್ವಾಗತಿಸಿದರು, ಶಿಕ್ಷಕಿ ಐಡಾ ಲೋಬೋ ವಂದಿಸಿದರು, ಶಿಕ್ಷಕಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು
