ವಿಟ್ಲ: ಮರದಕೊರಡುಹಾಗೂ ಕಲ್ಲುಗಳನ್ನು ಹಿಡಿದ ವಿದ್ಯಾರ್ಥಿಗಳ ಎರಡು ತಂಡ ಕಾಲೇಜು ತರಗತಿಯಲ್ಲಿ ಹಾಗೂ ಮೈದಾನದಲ್ಲಿ ಮಾರಾಮಾರಿ ನಡೆಸಿ ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ವಿಟ್ಲದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದಿದೆ.
ಘಟನೆಯಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿಗಳಾದ ಕಲ್ಲಡ್ಕ ನಿವಾಸಿ ಯೋಗೀಶ(18) ಹಾಗೂ ಪೈವಳಿಕೆ ನಿವಾಸಿ ಮಹಮ್ಮದ್ ಬಿಲ್ಶಾನ್(20) ಎಂಬವರುಗಂಭೀರಗಾಯ ಮತ್ತುಗೋಳ್ತಮಜಲು ನಿವಾಸಿ ಮಹಮ್ಮದ್ ಶಾಹೀದ್(18), ನೆಲ್ಲಿಗುಡ್ಡೆ ನಿವಾಸಿ ಸಿನಾನ್(18), ಎರ್ಮಜಲು ನಿವಾಸಿ ಸನತ್(18) ಎಂಬವರುಗಾಯಗೊಂಡಿದ್ದಾರೆ. ಒಂದುತಂಡದ ಗಾಯಾಳುಗಳು ವಿಟ್ಲ ಸಮುದಾಯಆರೋಗ್ಯಕೇಂದ್ರದಲ್ಲಿದಾಖಲಾಗಿದರೆ, ಇನ್ನೊಂದುತಂಡದ ಗಾಯಾಳುಗಳು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಸಂಜೆ ಹುಡುಗಿಯಲ್ಲಿ ಮಾತನಾಡಿದ ವಿಚಾರಕ್ಕೆ ತರಗತಿಯೊಳಗೆ ನುಗ್ಗಿದತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಮಹಮ್ಮದ್ ಬಿಲ್ಶಾನ್ ನೀಡಿದದೂರಿನಲ್ಲಿ ತಿಳಿಸಿದರೆ, ಸೋಮವಾರ ನಡೆದಕ್ರಿಕೆಟ್ ವಿಚಾರದಲ್ಲಿಇತ್ತಂಡದ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದೇ ವಿಚಾರವನ್ನು ಮುಂದಿಟ್ಟುಕೊಂಡತಂಡ ನಮಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ ಎಂದುಯೋಗಿಶ್ ನೀಡಿದದೂರಿನಲ್ಲಿ ಹೇಳಿದ್ದಾನೆ.
ಪ್ರಾಂಶುಪಾಲ ನೀಡಿದದೂರಿನಂತೆ ವಿಟ್ಲ ಪೊಲೀಸ್ಠಾಣೆಯಲ್ಲಿಒಂದುತಂಡದ ಮಹಮ್ಮದ್ ಬಲ್ಶಾನ್ ಹಾಗೂ ಇತರರುಇನ್ನೊಂದುತಂಡದಯೋಗಿಶ್ ಹಾಗೂ ಇತರರ ವಿರುದ್ಧ ಪ್ರಕರಣದಾಖಲಾಗಿದೆ.
ಹೊಡೆದಾಟ ಪ್ರಾರಂಭಗೊಳ್ಳಲು ನಿಖರಕಾರಣಏನೆಂಬುದು ತಿಳಿದು ಬಂದಿಲ್ಲವಾದರೂಯೋಗೀಶ ಹಾಗೂ ಮಹಮ್ಮದ್ ಬಿಲ್ಶಾನ್ ಎಂಬವರು ಈ ಘರ್ಷಣೆಗೆ ಮೂಲ ಕಾರಣರಾಗಿದ್ದು, ಅವರ ವಿರುದ್ಧ ಪೊಲೀಸ್ಠಾಣೆಗೆದೂರು ನೀಡಲಾಗಿದೆಎಂದುಕಾಲೇಜ್ನ ಪ್ರಾಂಶುಪಾಲ ಶಂಕರ್ ಪಾಟಾಲಿ ವೈ ಅವರು ತಿಳಿಸಿದ್ದಾರೆ.
ಏನು ನಡೆಯಿತು?
ಸೋಮವಾರಸಂಜೆವಿದ್ಯಾರ್ಥಿಯೊಬ್ಬಅನ್ಯಧರ್ಮದ ವಿದ್ಯಾರ್ಥಿನಿ ಬಳಿ ತರಗತಿನಡೆಯುವ ಬಗ್ಗೆ ವಿಚಾರಿಸಿ ಮಾತನಾಡಿದ್ದೆನ್ನಲಾಗಿದೆ.ಇದೇ ವಿಚಾರವನ್ನು ಮುಂದಿಟ್ಟುಕೊಂಡಇನ್ನೊಂದು ವಿದ್ಯಾರ್ಥಿಗಳ ತಂಡ ಮಂಗಳವಾರ ಬೆಳಿಗ್ಗೆ ತರಗತಿಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಯಲ್ಲಿ ಮಾತನಾಡಿದ್ದೇಕೆಂದು ಪ್ರಶ್ನಿಸಿದ್ದಾರೆ.ಇದರಿಂದ ಸಿಟ್ಟಾದ ವಿದ್ಯಾರ್ಥಿ ಹಲ್ಲೆಗೆ ಮುಂದಾಗಿದ್ದಾನೆಎನ್ನಲಾಗಿದೆ.
ಇದಕ್ಕೆ ಪ್ರಾಂಶುಲಾರ ಬಳಿ ದೂರು ನೀಡಿ ಹಿಂತಿರುಗುವ ಸಂದರ್ಭ ಕಾಲೇಜು ಮೈದಾನದಲ್ಲಿಯೋಗೀಶ್ಗೆಇನ್ನೊಂದುತಂಡದ ವಿದ್ಯಾರ್ಥಿ ಮರದ ಕೊರಡಿನಿಂದ ಹಲ್ಲೆ ನಡೆಸಿದ್ದಾನೆ. ಅವನ ಕೈಯಿಂದಕೊರಡು ಎಳೆದು ಹಲ್ಲೆ ನಡೆಸಿದ ಮಹಮ್ಮದ್ ಬಿಲ್ಶಾನ್ಗೆತಿರುಗಿಸಿ ಹಲ್ಲೆ ನಡೆಸಿದ್ದಾನೆ.ಎರಡು ತಂಡಗಳ ವಿದ್ಯಾರ್ಥಿಗಳು ಸ್ಥಳದಲ್ಲಿ ಜಮಾಯಿಸಿದ್ದೂ ಅಲ್ಲದೆ ಮಾರಾಮಾರಿ ನಡೆದಿದೆಎನ್ನಲಾಗಿದೆ.
ಈ ಸಂದರ್ಭ ಮಧ್ಯಪ್ರವೇಶಿದ ಉಪನ್ಯಾಸಕಿ ಹಲ್ಲೆತಡೆಯಲು ಮುಂದಾದರಾದರೂ ಸಾಧ್ಯವಾಗದೆ ತರಗತಿಗೆ ಬಾರದವರ ಬಗ್ಗೆ ಪ್ರಾಂಶುಪಾಲರಿಗೆತಿಳಿಸುವುದಾಗಿ ಹೇಳಿದರು.ಇದರಿಂದಒಂದುತಂಡದವರು ತರಗತಿಗೆ ಹಾಜರಾಗಿದ್ದು, ತರಗತಿ ಆರಂಭವಾಗುತ್ತಿದ್ದಂತೆ ಹೊರಗಿನಿಂದ ಬಂದಅಕ್ರಮವಾಗಿತರಗತಿಗೆ ನುಗ್ಗಿದಇನ್ನೊಂದುತಂಡಎಲ್ಲರ ಮುಂದೆಯೇ ಹಲ್ಲೆ ನಡೆಸಿದೆ.ಆಕ್ರೋಶಿತ ವಿದ್ಯಾರ್ಥಿಗಳು ಉಪನ್ಯಾಸಕರ ಕಚೇರಿಗೆ ಕಲ್ಲು ಎಸೆದು ಹಾನಿಗೊಳಿಸಿದ್ದಾರೆ ಎನ್ನಲಾಗಿದೆ.


