ಸ್ಥಳೀಯ-ಸಮನ್ವಯ ಸಮಿತಿಗಳ ಮಹಿಳೆಯರಿಂದ ವೈವಿಧ್ಯತೆಯ ಸಂಭ್ರಮ
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಹಿಳಾ ವಿಭಾಗವು ವಿಶ್ವ ಮಹಿಳಾ ದಿನಾಚರಣೆಯನ್ನು ವಿಜೃಂಭನೆಯಿಂದ ಸಂಭ್ರಮಿಸಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ
ಕೆ.ಕೋಟ್ಯಾನ್ ನೇತೃತ್ವದಲ್ಲಿ ಇಂದಿಲ್ಲಿ ಮಂಗಳವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ಸಂಭ್ರಮಿಸಿದ ಮಹಿಳಾ ದಿನಾಚರಣೆಯ ಸಭಾಕಾರ್ಯಕ್ರಮಕ್ಕೆ ಅಸೋಸಿಯೇಶನ್‍ನ ಉಪಾಧ್ಯಕ್ಷಡಾ| ಯು. ಧನಂಜಯ ಕುಮಾರ್ ದೀಪ ಬೆಳಗಿಸಿ ಚಾಲನೆಯನ್ನೀಡಿದರು.

Billawa Assn.Ladies Day-2016 - A1

Billawa Assn.Ladies Day-2016 - A2 (1)

Billawa Assn.Ladies Day-2016 - A3

Billawa Assn.Ladies Day-2016 - A4

Billawa Assn.Ladies Day-2016 - A5

Billawa Assn.Ladies Day-2016 - A6 (1)

Billawa Assn.Ladies Day-2016 - A7

Billawa Assn.Ladies Day-2016 - C1 (1)

Billawa Assn.Ladies Day-2016 -2

Billawa Assn.Ladies Day-2016 -3

Billawa Assn.Ladies Day-2016 -4

Billawa Assn.Ladies Day-2016 -5

Billawa Assn.Ladies Day-2016 -6

Billawa Assn.Ladies Day-2016 -7

Billawa Assn.Ladies Day-2016 -8

Billawa Assn.Ladies Day-2016 -9

Billawa Assn.Ladies Day-2016 -12ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೆ.ಜೆ ಸೋಮಯ್ಯ ಕಾಲೇಜ್ ಆಫ್ ಆರ್ಟ್ಸ್ ಎಂಡ್ ಕಾಮರ್ಸ್‍ನ ಉಪ ಪ್ರಾಂಶುಪಾಲೆ ದಿವಿಜ ಚಂದ್ರಶೇಖರ ಬೆಳ್ಚಡ, ಗೌರವ ಅತಿಥಿsಗಳಾಗಿ ಸ್ಮಾಲ್ ವಂಡರ್ ಸ್ಕೂಲ್‍ನ ಪ್ರಾಂಶುಪಾಲೆ ಚಂದ್ರಾವತಿ ಪೂಜಾರಿ, ಉದ್ಯಮಿ ಸ್ನೇಹಲತಾ ಮನಮೋಹನ್ ಗುಪ್ತಾ, ಪುಷ್ಪಾ ಬಂಗೇರ, ವೀಣಾ ಬಿ.ದಯಾನಂದ ಪೂಜಾರಿ, ವೇದಾವತಿ ಬಿ.ಬಂಗೇರ, ಶಶಿ ನಿತ್ಯಾನಂದ ಕೋಟ್ಯಾನ್, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ಉಪಸ್ಥಿತರಿದ್ದು, ಅಸೋಸಿಯೇಶನ್‍ನ ವಿವಿಧ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಮಹಿಳಾ ವಿಭಾಗಗಳ ಸದಸ್ಯೆಯರು ಹಾಗೂ ಯುವತಿಯರು ವೈವಿಧ್ಯಮಯ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು. ಅಸೋಸಿಯೇಶನ್‍ನ ಮಹಿಳಾ ಪದಾಧಿಕಾರಿಗಳು ಅತಿಥಿಗಳ ಹಣೆಗೆ ಅರಸಿನ ಕುಂಕುಮದ ತಿಲಕ ಹಚ್ಚಿ ಮಲ್ಲಿಗೆಯನ್ನು ಮುಡಿಸಿ ಮಹಿಳಾ ದಿನಾಚರಣೆಗೆ ವಿಧ್ಯುಕ್ತವಾಗಿ ಚಾಲನೆಯನ್ನೀಡಿದರು. ಮಹಿಳಾ ಪದಾಧಿಕಾರಿಗಳುಅತಿಥಿಗಳಿಗೆ ಹಾಗೂ ಅಸೋಸಿಯೇಶನ್‍ನ ಉಪಾಧ್ಯಕ್ಷಶಂಕರ ಡಿ.ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಭಾರತ್ ಬ್ಯಾಂಕ್‍ನ ನಿರ್ದೇಶಕಭಾಸ್ಕರ್ ಎಂ.ಸಾಲ್ಯಾನ್, ಪ್ರಬಂಧಕ ದಯಾನಂದ ಆರ್.ಅಮೀನ್, ಯುವಾಭ್ಯುದಯ ಉಪ ಸಮಿತಿಯ ಮುಖ್ಯಸ್ಥ ನಿಲೇಶ್ ಬಿ.ಪೂಜಾರಿ, ರವಿ ಎ.ಪೂಜಾರಿ ಲೋನಾವಲಾ, ಸವಿತಾ ಗಂಗಾಧರ್ ಪೂಜಾರಿ, ಭಾರತ್ ಬ್ಯಾಂಕ್‍ನ ಮತ್ತಿತರರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಕಲಾವಿದರಿಗೆಪುಷ್ಫಗುಪ್ಚ ನೀಡಿ ಸತ್ಕರಿಸಿದರು. ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆಯರುಗಳಾದ ವಿಲಾಸಿನಿ ಕೆ.ಸಾಲ್ಯಾನ್ ಮತ್ತು ಪ್ರಭಾ ಕೆ.ಬಂಗೇರಾ, ಜೊತೆ ಕಾರ್ಯದರ್ಶಿ ಲಕ್ಷ್ಮೀ ಎಸ್.ಪೂಜಾರಿ ಮತ್ತಿತರ ಪದಾಧಿಕಾರಿಗಳು ಹಾಜರಿದ್ದು,ಸಬಿತಾ ಪೂಜಾರಿ,ಲೀಲಾ ಪೂಜಾರಿ ಮತ್ತು ಶೋಭಾ ಪೂಜಾರಿ ಅವರ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭಗೊಂಡಿತು. ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಕು| ಅನುಷಾ ಪೂಜಾರಿ ಮತ್ತು ಕೃತಿಕಾ ಕೋಟ್ಯಾನ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು. ಜೊತೆ ಕಾರ್ಯದರ್ಶಿ ಡಾ| ಗೀತಾಂಜಲಿ ಎಲ್.ಸಾಲ್ಯಾನ್ ಸಭಾಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಗೌ| ಕಾರ್ಯದರ್ಶಿ ಸುಮಿತ್ರಾ ವಿ.ಬಂಗೇರ ವಂದಿಸಿದರು.

By Suddi9

Leave a Reply

Your email address will not be published. Required fields are marked *