ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ಗ್ರಾಮದ ಗ್ರಾಮ ದೇವಸ್ಥಾನ ನೂತನವಾಗಿ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ ಸುತ್ತುಪೌಳಿಯೊಂದಿಗೆ ನಿರ್ಮಾಣಗೊಂಡು ಮಾರ್ಚ್ 06ರಿಂದ 11ರ ತನಕ ನವೀಕರಣ ಪುನಃಪ್ರತಿಷ್ಟಾಪನಾ ಅಷ್ಟಬಂಧ ಬ್ರಹ್ಮ ಕಲಶೋತ್ಸವವು ವಿವಿಧ ಧಾರ್ಮಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವಿದ್ಯುಕ್ತವಾಗಿ ಜರಗಲಿದ್ದು ಮಾ.4 ಶುಕ್ರವಾರದಂದು ಪೂರ್ವಾಂಗವಾಗಿ ತೋರಣ ಮುಹೂರ್ತ ನೆರವೇರಿಸಲಾಯಿತು.
ಈಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮಾಜಿ ಜಿ.ಪಂ.ಅಧ್ಯಕ್ಷರಾದ ಬಿ.ಸದಾನಂದ ಪೂಂಜ, ಸಮಿತಿ ಪದಾಧಿಕಾರಿಗಳಾದ ಎಂ.ಸುಬ್ರಹ್ಮಣ್ಯ ಭಟ್ , ಎ.ಜಯಶಂಕರ ಬ್ರಾಸಿತ್ತಾಯ, ಎ.ಶಾಂತಿರಾಜ ರೈ, ಕೆ.ಸದಾನಂದ ಶೆಟ್ಟಿ , ಮನೋಜ್ ಆಳ್ವ, ವಾಸು ಗಟ್ಟಿ, ಯೋಗೀಶ್ ಬೆಳ್ಚಾಡ, ಎ.ಯಶವಂತ ರೈ , ಕೇಶವ ಸುವರ್ಣ , ಗಣೇಶ, ಮಾರಪ್ಪ ಕೊಟ್ಟಾರಿ, ಸುರೇಶ್ ಬಂಗೇರಾ ಮುಂತಾದವರು ಉಪಸ್ಥಿತರಿದ್ದರು.
