ನವದೆಹಲಿ: ವಿಶ್ವದ ಮೂರನೇ ಅತೀ ದೊಡ್ಡ ಸೇನಾಪಡೆಯನ್ನು ಹೊಂದಿರುವ ಭಾರತದ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ದಲ್ ‌ಬೀರ್ ‌ಸಿಂಗ್ ಸುಹಾಗ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಹಾಲಿ ಸೇನಾ ಮುಖ್ಯಸ್ಥರಾಗಿರುವ ಜನರಲ್ ಬಿಕ್ರಂಸಿಂಗ್ ಅಧಿಕಾರಾವಧಿ ಜುಲೈ 31ಕ್ಕೆ ಅಂತ್ಯಗೊಳ್ಳಲಿದೆ. ಬಿಕ್ರಂಸಿಂಗ್ ಅವರಿಂದ ತೆರವಾಗಲಿರುವ ಈ ಸ್ಥಾನಕ್ಕೆ ಸೇನಾಪಡೆಯ ಹಾಲಿ ಉಪ ಲೆಫ್ಟಿನೆಂಟ್ ಜನರಲ್ ದಲ್ ‌ಬೀರ್ ‌ಸಿಂಗ್ ಸುಹಾಗ್ ಅವರನ್ನು ನೇಮಕ ಮಾಡಲು ಸರ್ಕಾರ ತೀರ್ಮಾನಿಸಿದೆ.

dalbirsingh

ಕೇಂದ್ರ ಚುನಾವಣಾ ಆಯೋಗದ ಅನುಮತಿ ಮೇರೆಗೆ ಸೇನಾಪಡೆಯ ನೂತನ ಮುಖ್ಯಸ್ಥರನ್ನು ನೇಮಕ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಪ್ರಧಾನಮಂತ್ರಿ ಡಾ.ಮನಮೋಹನ್ ‌ಸಿಂಗ್, ರಕ್ಷಣಾ ಸಚಿವ ಎ.ಕೆ.ಆಂಟನಿ ಸೇರಿದಂತೆ ಕೆಲವು ಹಿರಿಯ ಸಚಿವರು ದಲ್ ‌ಬಿರ್ ‌ಸಿಂಗ್ ಸುಹಾಗ್ ಅವರನ್ನು ಸೇನಾಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಸಮ್ಮತಿಸಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿಕೊಡಲು ಒಪ್ಪಿದ್ದಾರೆ. ಸೇನಾಪಡೆಯ ನೇಮಕಾತಿಯು ವಿವಾದದ ಕೇಂದ್ರಬಿಂದುವಾಗಿತ್ತು. ನಿರ್ಗಮನದ ಹಾದಿಯಲ್ಲಿರುವ ಯುಪಿಎ ದಲ್ ‌ಬೀರ್ ‌ಸಿಂಗ್ ಸುಹಾಗ್ ಬದಲು ಬೇರೊಬ್ಬರನ್ನು ನೇಮಕ ಮಾಡಲು ಮುಂದಾಗಿತ್ತು. ಆದರೆ, ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದೀಗ ಎಲ್ಲರ ವಿಶ್ವಾಸದಂತೆ ದಲ್ ‌ಬೀರ್ ‌ಸಿಂಗ್ ಅವರನ್ನು ಸೇನಾಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಸಮ್ಮತಿ ಸೂಚಿಸಿದೆ. ಯುಪಿಎ ಸರ್ಕಾರಕ್ಕೆ ಹೊಸ ಸೇನಾ ಮುಖ್ಯಸ್ಥರನ್ನು ಹೆಸರಿಸಲು ಮಾ.27ರಂದೇ ಅನುಮತಿ ನೀಡಲಾಗಿತ್ತು. ಆದರೆ, ಗೃಹ ಸಚಿವಾಲಯವು ಚುನಾವಣಾ ಆಯೋಗದ ಅಭಿಪ್ರಾಯ ಹಾಗೂ Appointments Committee of Cabinet (ACC) ಅನುಮತಿ ಪಡೆದು ದಲ್ ಬಿರ್ ಸಿಂಗ್ ಹೆಸರು ಪ್ರಕಟಿಸಲು ಸಿದ್ಧವಾಗಿದೆ.

By suddi9

Leave a Reply

Your email address will not be published. Required fields are marked *