ಮೂಡುಬಿದರೆ: ಪುತ್ತಿಗೆ ವಿವೇಕಾನಂದ ನಗರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ `ಆಳ್ವಾಸ್ ಚಿತ್ರಸಿರಿ 2015′ ರಾಜ್ಯ ಮಟ್ಟದ ಚಿತ್ರಕಲಾ ಶಿಬಿರಕ್ಕೆ ಗುರುವಾರ ಉದ್ಘಾಟಿಸಲಾಯಿತು.
ಸಾಹಿತಿ, ಚಿಂತಕ ಡಾ. ಗುರುರಾಜ ಮಾರ್ಪಳ್ಳಿ ಕಲಾ ಶಿಬಿರಕ್ಕೆ ಚಾಲನೆ ನೀಡಲಾಯಿತು. ಚಿತ್ರಕಲೆಯಲ್ಲಿ ಆಯಾ ಕಾಲಘಟ್ಟಗಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆದಿದ್ದರೂ ಅವು ಸಾರ್ವಕಾಲಿಕ ಮಹತ್ವವನ್ನು ಪಡೆದಿವೆ. ಇಂದು ನಾವು ಸಂಕೀರ್ಣ ಕಾಲಘಟ್ಟದಲ್ಲಿದ್ದು ವ್ಯಕ್ತಿ – ಸಮಾಜ, ವ್ಯಕ್ತಿ – ಕುಟುಂಬಗಳು ವಿಘಟನೆಯಾಗುತ್ತಿವೆ.

mbd_nov19_3 (2)

ಸಮಾಜದಲ್ಲಿ ಹಿಂಸೆ – ಕ್ರೌರ್ಯಗಳು ಹೆಚ್ಚುತ್ತಿವೆ. ಮಕ್ಕಳ ಮನಸ್ಸನ್ನು ಅರಳಿಸಬೇಕಾದ ಟಿ.ವಿಗಳಲ್ಲಿ ಪ್ರಸಾರವಾಗುವ ಕಾರ್ಟೂನ್ ಚಿತ್ರಗಳೂ ಕ್ರೌರ್ಯವನ್ನು ಬೆಳೆಸುತ್ತಿರುವುದು ಆಂತಂಕಕಾರಿಯಾಗಿದೆ ಎಂದ ಅವರು ಸಮುದಾಯದ ಸಾಮರಸ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕಲಾವಿದರ ಪಾತ್ರ ಮಹತ್ವದ್ದಾಗಿದೆ ಸರ್ಕಾರ ವ್ಯಾಪಾರ ಉದ್ದಿಮೆಗೆ ನೀಡುವ ಮಹತ್ವವನ್ನು ಮಾನವ ಸಂಪನ್ಮೂಲ ಬಳಕೆಗೆ ನೀಡುತ್ತಿಲ್ಲ. ಕಲೆಯನ್ನು ನಂಬಿ ಬದುಕುವುದು ಕಷ್ಟ ಎಂಬ ಮನೋಭಾವ ಕಲಾವಿದರಲ್ಲಿದೆ. ಹೀಗಾಗಿ ಸರ್ಕಾರ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಯೋಜನೆಯನ್ನು ರೂಪಿಸಬೇಕು ಎಂದರು.
ಕಲಾ ಸಂಘಟಕ ಕೋಟಿ ಪ್ರಸಾದ್ ಆಳ್ವ ಅಧ್ಯಕ್ಷತೆ ವಹಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದ ಸಂಯೋಜಕ ಗಣೇಶ್ ಸೋಮಯಾಜಿ ಇಂತಹ ಶಿಬಿರಗಳ ಮೂಲಕ ಕಲಾವಿದರ ಪರಿಣತಿ, ಹೊಸತನ ಇತರ ಕಲಾವಿದರಿಗೆ ಅರಿಯಲು ಸಹಕಾರಿಯಾಗುತ್ತದೆ. ಇಲ್ಲಿ ರಚನೆಯಾಗುವ ಕಲಾ ಕೃತಿಗಳು ಶಾಶ್ವತವಾಗಿ ಪ್ರದರ್ಶನಗೊಳ್ಳಲಿದೆ ಎಂದರು.
ಶಿಬಿರದ ಸಂಯೋಜಕರಾದ ಪುರುಷೋತ್ತಮ ಅಡ್ವೆ, ಆಳ್ವಾಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಪ್ರೋ. ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ. ಉದಯ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *