ಮೂಡುಬಿದರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾ ಕೂಟ ಗುರುವಾರ ಸಂಜೆ ಸಂಪನ್ನಗೊಂಡಿತು. ಪ್ರಾಥಮಿಕ, 14 ವಯೋಮಿತಿ ಹಾಗೂ 17 ವಯೋಮಿತಿ ವಿಭಾಗದಲ್ಲಿ ಪುರುಷರ ಹಾಗೂ ಮಹಿಳೆಯರ 5 ತಂಡ ಪ್ರಶಸ್ತಿ ಪಡೆದ ಮೂಡುಬಿದರೆ ಶೈಕ್ಷಣಿಕ ಕ್ಷೇತ್ರ ಅತ್ಯುತ್ತಮ ತಂಡವಾಗಿ ಮೂಡಿಬಂದಿದೆ.
mbd_nov19_2 (2) (2)

ಪ್ರಾಥಮಿಕ ಹುಡುಗಿಯರ ವಿಭಾಗದಲ್ಲಿ ಮಂಗಳೂರು ದಕ್ಷಿಣ, ಹುಡುಗರ ವಿಭಾಗದಲ್ಲಿ ಮೂಡುಬಿದರೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. 14 ಹಾಗೂ 17 ವಯೋಮಿತಿಯ ಪುರುಷ ಹಾಗೂ ಮಹಿಳೆ ವಿಭಾಗಗಳಲ್ಲಿ ಮೂಡುಬಿದರೆ ಶೈಕ್ಷಣಿಕ ಕ್ಷೇತ್ರ ತಂಡ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪ್ರಾಥಮಿಕ ಹುಡುಗಿಯರ ವಿಭಾಗದಲ್ಲಿ ಮಂಗಳೂರು ದಕ್ಷಿಣ ರೊಸೆಲ್ ರೋಸ್ ಪಾಯಸ್ ಹಾಗೂ ಹುಡುಗರ ವಿಭಾಗದಲ್ಲಿ ಮಂಗಳೂರು ಉತ್ತರದ ನಿಹಾಲ್, ಮೂಡುಬಿದರೆಯ ರಾಜು ದತ್ತ್ ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಆಟಗಾರರಾಗಿದ್ದರು.

14 ವಯೋಮಿತಿಯ ಹುಡುಗಿಯರ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ಪ್ರಶಾಂತಿ, ಹುಡುಗರ ವಿಭಾಗದಲ್ಲಿ ಮೂಡುಬಿದರೆ ತಂಡದ ಮಹಾಂತೇಶ್ ಸಿದ್ಧಪ್ಪ ಹಲವಿ ಅತ್ಯುತ್ತಮ ಆಟಗಾರರಾದರು. 17 ವಯೋಮಿತಿಯ ಹುಡುಗಿಯರ ವಿಭಾಗದಲ್ಲಿ ಮಂಗಳೂರು ಉತ್ತರದ ಸಾಕ್ಷಿ ಕುಂದಾಪುರ, ಮೂಡುಬಿದರೆಯ ಭೂಮಿಕಾ.ಡಿ ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ. ಹುಡುಗರ ವಿಭಾಗದಲ್ಲಿ ಮೂಡುಬಿದರೆ ನಾಗೇಂದ್ರ ಅಣ್ಣಪ್ಪ ನಾಕ್ ಹಾಗೂ ಮಹಮ್ಮದ್ ಅಜ್ಮಲ್ ವೈಯಕ್ತಿಕ ಚಾಂಪಿಯನ್ ಆಗಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೂಡುಬಿದರೆ ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ ವಹಿಸಿದ್ದರು.
ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಬಿ.ಕೇಶವ, ಮಂಗಳೂರು ಉತ್ತರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಸ್, ಮೂಡುಬಿದರೆ ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಚ್ ನಾಕ್, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ಉಪಸ್ಥಿತರಿದ್ದರು. ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಹಾಗೂ ಆಳ್ವಾಸ್ ಫ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು.

By suddi9

Leave a Reply

Your email address will not be published. Required fields are marked *