ಮೂಡುಬಿದರೆ: ಆಳ್ವಾಸ್ ಪ.ಪೂ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆ ದಿನಚಾರಣೆ ಪ್ರಯುಕ್ತ ಇಂಗ್ಲೀಷ್ ಭಾಷೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು.
ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀಧರ ವಿ.ಶೆಟ್ಟಿಗಾರ ನಿರ್ದೇಶನ ಹಾಗೂ ಮುರಳಿಕೃಷ್ಣ ತೆಂಕಬೈಲು ಭಾಗವತಿಕೆಯಲ್ಲಿ ಘಟಕದ ವಿದ್ಯಾರ್ಥಿಗಳೂ `ಸುದರ್ಶನ ಗರ್ವಭಂಗ’ ಆಂಗ್ಲಭಾಷೆಯಲ್ಲಿ ತಾಳಮದ್ದಳೆ ನಡೆಸಿಕೊಟ್ಟರು.
ಪ್ರಾಂಶುಪಾಲ ರಮೇಶ್ ಶೆಟ್ಟಿ ರಾಷ್ಟ್ರೀಯ ಸೇವಾ ಯೋಜನೆ ದಿನಚಾರಣೆ ಕಾರ್ಯಕ್ರಮ ಉದ್ಘಾಟಿಸಿದರು.


ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗಾಂಧಿ ಜಯಂತಿ ಆಚರಣೆಗೆ ಚಾಲನೆ ನೀಡಿದರು. ಎನ್‍ಎಸ್‍ಎಸ್ ಯೋಜನಾಧಿಕಾರಿ ಸಂತೋಷ್.ಕೆ.ಕೆ ಉಪಸ್ಥಿತರಿದ್ದರು. ಪಾವನ ಸ್ವಾಗತಿಸಿದರು. ಶೃತಿ ಕಾರ್ಯಕ್ರಮ ನಿರೂಪಿಸಿದರು.

