ಬೆಳ್ತಂಗಡಿ: ಕೊಕ್ಕಡ ಸಮೀಪದ ನಿಡ್ಲೆ ಕಳೆಂಜ ಗ್ರಾಮದ ನಿವಾಸಿ ಅಣ್ಣಯ್ಯ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮೃತರ ಮನೆಯಲ್ಲಿ ಅವರ ಪತ್ನಿ ಮತ್ತು ಮಕ್ಕಳ ವಿಚಾರಣೆ ನಡೆದಿದೆ. ಅಣ್ಣಯ್ಯ ಗೌಡರ ಮಕ್ಕಳು ಹಾಗೂ ಪತ್ನಿಯಲ್ಲಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಕೊಲೆ ನಡೆಯುವ ಹತ್ತಾರು ದಿನಗಳ ಮುನ್ನ ರಾತ್ರಿ ಹೊತ್ತು ಮನೆಯಲ್ಲೇ ಮಲಗಿ ನಿದ್ರಿಸುತ್ತಿದ್ದ ಅಣ್ಣಯ್ಯ ಗೌಡರ ಮೇಲೆ ಆ್ಯಸಿಡ್ ಬಾಟಲಿ ಬಿದ್ದು ಮೆಮೇಲಿನ ಚರ್ಮ ಸುಟ್ಟು ಹೋದ ಘಟನೆಯೂ ನಡೆದಿತ್ತು. ಶವದ ಕುತ್ತಿಗೆ, ಎದೆ ಭಾಗದಲ್ಲಿ ಚರ್ಮ ಸುಟ್ಟು ಹೋಗಿ ಬಿಳಿಚಿದ ಕುರುಹು ಕೊಲೆಯಾದ ದಿನವೂ ಇತ್ತು.
ಕೆಲವು ತಿಂಗಳ ಹಿಂದೆ ಇದೇ ಮನೆ ಸಮೀಪ ರಾತ್ರಿ ಹೊತ್ತು ನಿಲ್ಲಿಸಲಾಗಿದ್ದ ಯಮಹಾ ಬೆಕ್‌ವೊಂದನ್ನು ಯಾರೋ ಅಪರಿಚಿತರು ಸುಟ್ಟು ಹಾಕಿದ ಘಟನೆ ನೆಲ್ಯಾಡಿ ಹೊರ ಠಾಣೆಯಲ್ಲಿ ದಾಖಲಾಗಿತ್ತು. ಈ ಬೆಕ್ ಅರಣ್ಯ ಇಲಾಖೆಯ ನೌಕರರೊಬ್ಬರದಾಗಿತ್ತು. ಆತನಿಗೂ ಮತನ ಪತ್ನಿಗೂ ಅನೆತಿಕ ಸಂಬಂಧವಿತ್ತೆಂದು, ಅದೇ ಕಾರಣಕ್ಕಾಗಿ ರಾತ್ರಿ ಹೊತ್ತು ಇಲ್ಲಿ ನಿಲ್ಲಿಸಲಾಗಿದ್ದ ಬೆಕ್‌ನ್ನು ಸಾರ್ವಜನಿಕರು ಸುಟ್ಟಿರುವ ಘಟನೆ ಈಗ ಮರು ಜೀವ ಪಡೆದಿದೆ.
ಪತ್ನಿ ಸೇರಿ ಇಬ್ಬರು ವಶಕ್ಕೆ: ಅಣ್ಣಯ್ಯ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮೃತ ಅಣ್ಣಯ್ಯ ಗೌಡರ ಪತ್ನಿ ಅಮಿತಾ ಹಾಗೂ ಕಳೆಂಜ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ರುದ್ರೇಶ್ ನ್ನು ಸೋಮವಾರ ಸಂಜೆ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗಿದೆ.

By suddi9

Leave a Reply

Your email address will not be published. Required fields are marked *