ಸುದ್ದಿ9 ಬಂಟ್ವಾಳ ; ಟೋಲ್ ಗೇಟ್ ಸಿಬ್ಬಂದಿಗೆ ಹಲ್ಲೆ ಖಂಡಿಸಿ ಬಂಟ್ವಾಳ ಪೋಲಿಸ್ ಠಾಣೆಗೆ ಹಿಂದೂ ಸಂಘಟನೆಯ ನೇತ್ರತ್ವದಲ್ಲಿ ಎ.21 ರಂದು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಕಾರರನ್ನು ಉದ್ದೇಶಿಸಿ ಕ್ಯಾಪ್ಟನ್ ಗಣೇಶ್ ಕಾರ್ಣೀಕ್ ಮಾತನಾಡಿ ಆರೋಪಿಗಳನ್ನು ಕಾಂಗ್ರೆಸ್ ಮುಖಂಡರು ರಕ್ಷಣೆ ಮಾಡುತ್ತಾರೆ ಎಂದರು .

ಟೋಲ್ಗೇಟ್ ಹಲ್ಲೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲ: ಬಿಜೆಪಿ
ಕರ್ತವ್ಯ ನಿರ್ವಹಿಸುತ್ತಿದ್ದ ಟೋಲ್ಗೇಟ್ ಸಿಬ್ಬಂದಿಮೇಲೆ ಎರಡೆರಡು ಬಾರಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೋಲಿಸ್ ಇಲಾಖೆ ಸಂಪೂರ್ಣವಾಗಿ ವಿಫಲಗೊಂಡಿದ್ದು ಜಿಲ್ಲೆಯ ಕಾಂಗ್ರೆಸ್ ನಾಯಕರ ಆದೇಶದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಬಿಜೆಪಿ ಆರೋಪಿಸಿದೆ. ಸಿಸಿ ಕ್ಯಾಮೆರಾದಲ್ಲಿ ಅಪರಾಧಿಗಳ ಸ್ಪಷ್ಟ ಚಿತ್ರ ದೊರಕಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರ ಉತ್ತರಕ್ಕೆ ಮಣಿದು ಅಪರಾಧಿಗಳನ್ನು ಬಂಧಿಸಲು ಪೋಲಿಸ್ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಈ ಮೂಲಕ ನೈತಿಕತೆಯನ್ನು ಕಳೆದುಕೊಂಡು ನಿಷ್ಕ್ರಿಯವಾಗಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಹೇಳಿದೆ.
ಹಲ್ಲೆ ನಡೆದು ನಾಲ್ಕು ದಿನಗಳು ಕಳೆದಿದ್ದರೂ ಅಪರಾಧಿಗಳು ನಿರ್ಭಿಯವಾಗಿ ಓಡಾಡಿಕೊಂಡಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಆರೋಪಿಗಳು ಸ್ಥಳೀಯ ಕಾಂಗ್ರೆಸ್ ಮುಖಂಡ ತುಂಬೆ ಪ್ರಕಾಶ್ ಶೆಟ್ಟಿಯವರ ಒಡನಾಡಿಗಳಾಗಿದ್ದು ಈ ಹಿಂದೆಯೂ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವರು. ಪೋಲಿಸ್ ಇಲಾಖೆಯ ನಿರ್ಲಕ್ಷ್ಯ ಮತ್ತು ಪಕ್ಷಪಾತ ಧೋರಣೆಗಳನ್ನು ಖಂಡಿಸಿರುವ ಬಿಜೆಪಿ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆಯನ್ನು ನಡೆಸಲಿದ್ದೇವೆ ಎಂದು ಎಚ್ಚರಿಸಿದೆ.ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು ಸುಂಕ ವಸುಲಾತಿ ಕೇಂದ್ರದ ಸಿಬ್ಬಂದಿಗೆ ಹಸನೈರ್, ಶರೀಫ್, ನೌರೀನ್ ಎಂಬವರು ಸಿಬ್ಹಬಂದಿಗೆ ಮೇಲೆ ಹಲ್ಲ್ಲೆ ಮಾಡಿದಕ್ಕೆ ದೂರು ನೀಡಿದ್ದು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ. ಆರೋಪಿಗಳನ್ನು ಭಂದಿಸಿದಕ್ಕೆಹಿಂದೂ ಸಂಘಟನೆಗಳ ವತಿಯಿಂದ ಬಂಟ್ವಾಳ ಠಾಣೆಗೆ ಮುತ್ತಿಗೆ ಹಾಕಲಾಯಿತು.ಈ ಸಂಧರ್ದಭದಲ್ಲಿ ಗಣೇಶ್ ಕಾರ್ಣೀಕ್, ರಾಜೇಶ್ ನಾಯಕ್ ಸುಳ್ಯ ಶಾಸಕ ಅಂಗಾರ, ಮೋನಪ್ಪ ಭಂಡಾರಿ,ಜಿ. ಆನಂದ,ಗೋವಿಂದ ಪ್ರಭು,ರಾಮ್ ದಾಸ್, ದೇವ್ ದಾಸ್, ದಿನೇಶ್ ಭಂಡಾರಿ, ದೇವಪ್ಪ ಪೂಜಾರಿ,ದಿನೇಶ್ ಅಮ್ಟೂರು, ಪುರುಷ ಸಾಲಿಯಾನ್,ಚರಣ್ ಜುಮಾದಿಗುಡ್ಡೆ,ಶಶಿದರ ಬ್ರಹ್ಮರಕೂಟ್ಲು ,ಪವನ್, ಮತ್ತಿತರರು ಪ್ರತಿಭಟನೆಲ್ಲಿ ಪಾಲ್ಗೋಂಡಿದ್ದರು.




