ಬಂಟ್ವಾಳ:ಭಾರತೀಯ ಜೀವವಿಮಾ ನಿಗಮ ಸಂಸ್ಥೆಯು ಜನರಲ್ಲಿ ಉಳಿತಾಯ ಮನೋಭಾವ ಬೆಳೆಸುವುದರ ಜೊತೆಗೆ ವಿಮಾ ರಕ್ಷಣೆ ಮೂಲಕ ಜೀವನ ಭದ್ರತೆಯನ್ನು ಕೂಡಾ ಒದಗಿಸುತ್ತದೆ ಎಂದು ಬಂಟ್ವಾಳ ಎಲ್ಲೈಸಿ ಶಾಖಾಧಿಕಾರಿ ಡಿ.ಬಾಲಕೃಷ್ಣ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಎಲ್ಲೈಸಿ ಶಾಖೆ ವತಿಯಿಂದ ‘ವಿಮಾ ಗ್ರಾಮ ಮತ್ತು ವಿಮಾ ಶಾಲೆ’ ಯೋಜನೆ ಪ್ರಯುಕ್ತ ಸಿದ್ಧಕಟ್ಟೆಯಲ್ಲಿ ಈಚೆಗೆ ನಡೆದ ‘ಗ್ರಾಮ ಭೇಟಿ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1btl-siddakatte
ಎಲ್ಲೈಸಿ ತರಬೇತಿ ಕೇಂದ್ರ ಪ್ರಾಂಶುಪಾಲ ಎಸ್.ಗೋಪಾಲಕೃಷ್ಣ ಭಟ್ ಮಾತನಾಡಿ, ವಿಮಾ ಪ್ರತಿನಿಧಿಗಳಿಗೆ ಎಲ್ಲೈಸಿ ಪಾಲಿಸಿ ಮೂಲಕ ಆಯಾಯ ಗ್ರಾಮಗಳ ಅಭಿವೃದ್ಧಿಗೆ ಕೈಜೋಡಿಸಲು ಈ ಯೋಜನೆ ಅವಕಾಶ ಒದಗಿಸಿದೆ ಎಂದು ಹೇಳಿದರು.
ಸಹಾಯಕ ಶಾಖಾಧಿಕಾರಿ ಮಧುಸೂಧನ ಅವರು ವಿವಿಧ ಜೀವವಿಮಾ ಪಾಲಿಸಿಗಳ ಬಗ್ಗೆ ಮಾಹಿತಿ ನೀಡಿದರು.
ಅಭಿವೃದ್ಧಿ ಅಧಿಕಾರಿಗಳಾದ ಮಧ್ವರಾಜ್ ಬಿ.ಕಲ್ಮಾಡಿ, ಸತೀಶ್, ದಿನೇಶ ಮಾಮೇಶ್ವರ ಮತ್ತಿತರರು ಶುಭ ಹಾರೈಸಿದರು.
ಹಿರಿಯ ಪ್ರತಿನಿಧಿ ಗುಣಪಾಲ ಪರಾಡ್ಕರ್ ಸ್ವಾಗತಿಸಿ, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು.

By Suddi9

Leave a Reply

Your email address will not be published. Required fields are marked *