ಬಂಟ್ವಾಳ: ಇಂದು ನಮ್ಮ ಸಮಾಜದ ಮುಂದಿರುವ ಭ್ರಷ್ಟಾಚಾರ, ಭಯೋತ್ಪದನೆ ದರೋಡೆಗಳಂತಹ ಸಮಸ್ಯೆಗಳನ್ನು ನಾವು ಸವಾಲುಗಳಾಗಿ ಸ್ವಿಕರಿಸಬೇಕು. ಈ ಸವಾಲುಗಳನ್ನು ಎದುರಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವ ಮನೋಸ್ಥೆರ್ಯ ನಮ್ಮಲ್ಲಿರಬೇಕು. ವಿದ್ಯಾರ್ಥಿ  ದೆಸೆಯಲ್ಲಿ ಈ ಸವಾಲುಗಳನ್ನು ಎದುರಿಸುವಂತಹ ಸೃಜನಶೀಲತೆ ಮತ್ತು ಮಾನಸಿಕ ಸ್ಥೆರ್ಯಗಳನ್ನು ನಾವು ರೂಢಿಸಿಕೊಳ್ಳಬೇಕು. ಇದಕ್ಕೆ ಇಂದು ನಡೆಯುತ್ತಿರುವ 2015 ಶ್ಯೆಕ್ಷಣಿಕ ಸ್ಪರ್ಧೆಗಳು ಸಹಕಾರಿ ಎಂದು ಬೆಂಗಳೂರಿನ ನ್ಯಾಯವಾದಿ ಶ್ರೀ ನವನೀತ್ ಹಿಂಗಾನಿ ಅವರು ಬಂಟ್ವಾಳದ ಎಸ್ ವಿ ಎಸ್ ಕಾಲೇಜಿನಲ್ಲಿ 2015 ಮಂ.ವಿ.ವಿ ಮಟ್ಟದ ಶ್ಯೆಕ್ಷಣಿಕ ಸ್ಪರ್ಧೆಗಳನ್ನು ಉದ್ಧಾಟಿಸಿ ಮಾತನಾಡುತಿದ್ದರು.
Inaugಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ವಿ ಎಸ್ ಕಾಲೇಜುಗಳ ಸಂಚಾಲಕರಾದ ಶ್ರೀ ಕೂಡಿಗೆ ಪ್ರಕಾಶ್ ಶೆಣ್ಯೆ ಮಾತನಾಡಿ ವಿದ್ಯಾರ್ಥಿಗಳ ವಿಕಸನಕ್ಕೆ ಇಂತಹ ಸ್ಪರ್ಧೆಗಳು ಸಹಕಾರಿ. ಇಂತಹ ಚಟುವಟಿಕೆಗಳಿಗೆ ಆಡಳಿತ ಮಂಡಳಿ ಯಾವತ್ತೂ ಸ್ಪೂರ್ತಿ ನೀಡುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕಗಳೇ ಮಾನದಂಡವಲ್ಲ, ಪಠ್ಯೇತರ ಚಟುವಟಿಕೆಗಳು ಅಷ್ಟೇ ಅಗತ್ಯ. ವ್ಯಕ್ತಿತ್ವ ವಿಕಸನಕ್ಕೆ ಈ ಸ್ಪರ್ಧೆಗಳು ಸಹಕಾರಿ ಎಂದರು.
ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ತುಕಾರಾಂ ಪೂಜಾರಿ ಸ್ವಾಗತಿಸಿದರು. ಸ್ಪರ್ಧೆಗಳ ಸಂಯೋಜಕಿ ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲಕಿ ಪ್ರೊ. ಪ್ರೇಮಲತಾ ಪ್ಯೆ ವಂದಿಸಿದರು. ಕು. ರಮ್ಯ ಪ್ರಶಸ್ತಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *