ಬಂಟ್ವಾಳ : ಕಾಂಗ್ರೆಸ್ ಮುಕ್ತ ಆಡಳಿತ ಇಂದು ದೇಶಕ್ಕೆ ಅನಿವಾರ್ಯವಾಗಿದ್ದು ಭ್ರಷ್ಟಾಚಾರ ಮುಕ್ತ ಅಭಿವೃದ್ಧಿಪರ ಆಡಳಿತ ಬಿಜೆಪಿಯಿಂದ ಮಾತ್ರ ಸಾಧ್ಯವೆಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಅವರು ಬಾನುವಾರ ತುಂಬೆ ಗ್ರಾ.ಪಂ. ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ಬಿಜೆಪಿ ಸದಸ್ಯರ, ಕಾರ್ಯಕರ್ತರ ಮತ್ತು ಮತದಾರರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತದ ಶಕ್ತಿ ಏನೆಂದು ಪ್ರಧಾನಿಯವರು ಈಗಾಗಲೇ ಜಗತ್ತಿಗೆ ಎತ್ತಿ ತೋರಿಸಿದ್ದು ವಿದೇಶಿ ಚಿಂತನೆಗಳು ಬದಲಾಗಿವೆ. ದೇಶದ ಆರ್ಥಿಕ ಸ್ಥಿತಿ ಸಮೃದ್ಧವಾಗಿದ್ದು , ವಿಶ್ವವ್ಯಾಪಿ ಆರ್ಥಿಕ ಸ್ಥಿತಿ ಹದಗೆಟ್ಟರೂ ಭಾರತವು ಗಟ್ಟಿಯಾಗಿ ನೆಲೆ ನಿಂತಿದೆ . ಇಚ್ಛಾಶಕ್ತಿಯಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ತುಂಬೆ ಗ್ರಾಮದ ಜನತೆ ಸ್ಯಾಂಡ್ ಮತ್ತು ಲ್ಯಾಂಡ್ ಮಾಪಿಯಾ ವಿರುದ್ಧ ನಿರಂತರ ಹೋರಾಟ ನಡೆಸಿ ಕಾಂಗ್ರೆಸ್ ಮುಕ್ತ ಆಡಳಿತ ತಂದಿರುವುದು ರಾಜ್ಯಕ್ಕೆ ಮಾದರಿ ಎಂದು ಅವರು ಹೇಳಿದರು.
news

ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಗ್ರಾಮೀಣ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಕರೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ವಿ.ಪ. ಸದಸ್ಯ ಕ್ಯಾ|ಗಣೇಶ್ ಕಾಣರ್ಿಕ್ ಮಾತನಾಡಿ ಪಕ್ಷ ಸಂಘಟನೆಯೊಂದಿಗೆ ಜನಸಾಮಾನ್ಯರ ಅಪೇಕ್ಷೆ ಈಡೇರಿಸುವುದು ಸದಸ್ಯರ ಜವಾಬ್ದಾರಿಯಾಗಿದೆ ಮುಕ್ತ ಮನಸು ಗ್ರಾಮಾಭಿವೃದ್ಧಿಗೆ ಪೂರಕ. ಹದಿಮೂರನೇ ಹಣಕಾಸು ಯೋಜನೆಯಲ್ಲಿ ರಾಜ್ಯಕ್ಕೆ 24000 ಕೋಟಿ ರೂ. ಹರಿದುಬಂದಿದ್ದು 14ನೇ ಹಣಕಾಸು ಯೋಜನೆಯಲ್ಲಿ 1.83 ಲಕ್ಷ ಕೋಟಿ ರೂಪಾಯಿ ಬರಲಿದೆ. ಅನ್ನಭಾಗ್ಯಕ್ಕೆ ಶೇ.75ರಷ್ಟು ನಿಧಿ ಕೇಂದ್ರ ಸರಕಾರ ನೀಡುತ್ತಿದ್ದು ರಾಜ್ಯ ಸರಕಾರವು ಆ ಯೋಜನೆಗಳು ತನ್ನದೆಂದು ಹೇಳಿಕೊಳ್ಳುತ್ತಿದೆ ಎಂದರು.
ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಾದರೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ಇನ್ನು ಪ್ರತಿ ವರ್ಷ ಜನಸಂಖ್ಯೆಗನುಗುಣವಾಗಿ ಕೇಂದ್ರ ಸರಕಾರ ನೇರವಾಗಿ ಗ್ರಾಮ ಪಂಚಾಯತ್ಗೆ ಅನುದಾನ ಬಿಡುಗಡೆ ಮಾಡಲಿದೆ ಎಂದು ಅವರು ಪಂಚಾಯತುಗಳಿಗೆ ಕನಿಷ್ಠ 20ರಿಂದ 25 ಲಕ್ಷ ರೂ.ಪಂಚಾಯತ್ಗೆ ಅನುದಾನ ಬಿಡುಗಡೆಯಾಗಲಿದೆ. ಈ ಅನುದಾನ ಸಮರ್ಪಕ ಬಳಕೆಯಾದಾಗ ಯಶಸ್ಸು ಖಂಡಿತಾ ಎಂದು ಅವರು ಹೇಳಿದರು.
ವಿಧಾನ ಪರಿಷತ್ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಜಿ.ಪಂ.ಉಪಾಧ್ಯಕ್ಷ ಸತೀಶ್ ಕುಂಪಲ ಸದಸ್ಯರಿಗೆ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ರಾಜೇಶ್ ನಾಕ್ ಉಳಿಪಾಡಿಗುತ್ತು , ಚಂದ್ರಹಾಸ ಉಳ್ಳಾಲ್, ಜಿ.ಪಂ.ಸದಸ್ಯರಾದ ಸಂತೋಷ್ ಕುಮಾರ್ ರೈ ಬೊಳಿಯಾರು, ಜಿ. ಪಂ. ಸದಸ್ಯೆ  ಜಯಶ್ರೀ ಕೆ.ಎ., ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ, ಪುರುಷ ಸಾಲಿಯಾನ್, ತುಂಬೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ವಳವೂರು, ಪಂಚಾಯತ್ ಅಧ್ಯಕ್ಷೆ ಹೇಮಲತಾ ಪೂಜಾರಿ, ಸುರೇಶ ಆಳ್ವ , ಹರಿಯಪ್ಪ ಸಾಲ್ಯಾನ್, ಸಂಜೀವ ಶೆಟ್ಟಿ ಅಂಬ್ಲಮೊಗರು, ಶಾಂತ ಡಿ.ಚೌಟ, ಮಾಧವ ವಳವೂರು, ಬಿಜೆಪಿ ಮಾಜಿ ಅಧ್ಯಕ್ಷ ಗಣೇಶ ಸುವರ್ಣ, ಮಂಗಳೂರು ಮಂಡಲ ಕಾರ್ಯದರ್ಶಿ  ಮನೋಜ್ ಆಚಾರ್ಯ ನಾಣ್ಯ, ಪುದು ಶಕ್ತಿ ಕೇಂದ್ರ ಅಧ್ಯಕ್ಷ ಪ್ರವೀಣ ಶೆಟ್ಟಿ ಸುಜೀರು, ಪ್ರಧಾನ ಕಾರ್ಯದರ್ಶಿ ಮನೋಹರ ಕೊಟ್ಟಾರಿ, ಪುದು ಬಿಜೆಪಿ ಅಧ್ಯಕ್ಷ ದಿನೇಶ ಶೆಟ್ಟಿ ಕೊಟ್ಟುಂಜ,ಗ್ರಾಮಸಮಿತಿ ಅಧ್ಯಕ್ಷ ಪ್ರಕಾಶ ಆಚಾರ್ಯ, ಕಾರ್ಯದರ್ಶಿ ಮನೋಹರ ತುಂಬೆ, ಗೋಪಾಲಕೃಷ್ಣ ಕೊಟ್ಟುಂಜ, ಜಿಲ್ಲಾ ಯುವಮೋರ್ಚಾ ಸದಸ್ಯ ಎ.ಕೆ. ಗಿರೀಶ ಶೆಟ್ಟಿ ಅಡ್ಯಾರ್ಗುತ್ತು ಮತ್ತು ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಕ್ಷಕ್ಕಾಗಿ ಸೇವೆಯನ್ನು ಸಲ್ಲಿಸಿದ ಹಿರಿಯರಾದ ಮಾಜಿ ತಾ.ಪಂ.ಸದಸ್ಯ ಟಿ. ಸೋಮಪ್ಪ ಕೋಟ್ಯಾನ್, ಟಿ. ಸೀತಾರಾಮ ಬೆಳ್ಚಡ ಅವರನ್ನು ಸಮ್ಮಾನಿಸಲಾಯಿತು.
ಗ್ರಾ.ಪಂ.ಉಪಾಧ್ಯಕ್ಷ ಪ್ರವೀಣ್ ಬಿ.ತುಂಬೆ ಅವರು ಸ್ವಾಗತಿಸಿದರು. ಪ್ರಕಾಶ ಆಚಾರ್ಯ ವಂದಿಸಿದರು. ಜಗದೀಶ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *